ಬೆಳಗಾವಿಯಲ್ಲಿ ಕುಂದಾ ಕೊರಗಿ, ಧಾರವಾಡ ಪೇಡ ಮಿಂಚುವ ಸೂಚನೆ..
ಹೊರಗಿನ ಅಭ್ಯರ್ಥಿಯಿಂದ ಬೆಳಗಾವಿಗರಿಗೆ ಚಿಂತೆ..
ಬೆಳಗಾವಿ : ರಾಜ್ಯದ ಶಕ್ತಿಶಾಲಿ ಜಿಲ್ಲೆಯಾದ ಬೆಳಗಾವಿಯ ಲೋಕಸಭಾ ಚುನಾವಣೆಯ ಬಿಜೆಪಿ ಟೀಕೆಟನ್ನು ಯಾರಿಗೆ ನೀಡುತ್ತಾರೆ ಎಂಬುದರ ಬಗ್ಗೆ ಎಲ್ಲಾ ಕಡೆಗೆ ಚರ್ಚೆ ನಡೆಯುತ್ತಿದ್ದು, ಪಕ್ಷದ ಹಲವು ಆಕಾಂಕ್ಷಿಗಳು ವರಿಷ್ಠರ ಮನವೋಲಿಸಿ ಟಿಕೆಟ್ ಪಡೆಯಲು ಹಲವು ದಿನಗಳಿಂದ ಪ್ರಯತ್ನ ನಡೆಸುತ್ತಲೇ ಇದ್ದಾರೆ..
ಆದರೆ ಇತ್ತೀಚಿನ ಕಳೆದೆರಡು ದಿನಗಳ ಬೆಳವಣಿಗೆ ನೋಡಿದಾಗ, ಧಾರವಾಡದ ಬಿಜೆಪಿ ಪ್ರಭಾವಿ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಲೋಕಸಭಾ ಟಿಕೆಟ್ ಸಿಗುವುದು ಖಾತ್ರಿಯಾಗಿದೆ ಎಂಬ ಮುನ್ಸೂಚನೆಗಳು ಕಾಣುತ್ತಿವೆ..
ಹಾಲಿ ಲೋಕಸಭಾ ಸದಸ್ಯರಾದ ಮಂಗಳಾ ಅಂಗಡಿ ಅವರ ಬದಲಾಗಿ ಅವರ ಸುಪುತ್ರಿಯರಿಗೆ ಟಿಕೆಟ್ ಸಿಗಬೇಕು ಎಂಬ ವಿಚಾರವನ್ನು ಬಿಜೆಪಿ ವರಿಷ್ಠರ ಮುಂದೆ ಜಗದೀಶ ಶೆಟ್ಟರ ಅವರು ಪ್ರಸ್ತಾಪಿಸಿದಾಗ, ಅಂಗಡಿಯವರ ಸುಪುತ್ರಿಯರ ಬದಲಾಗಿ ನೀವೇ ಬೆಳಗಾವಿಯಿಂದ ಸ್ಪರ್ಧೆ ಮಾಡಿ ಎಂದು ವರಿಷ್ಠರು ಹೇಳಿದ್ದಾರೆ ಎಂಬ ಮಾಹಿತಿ ಇದೆ..
ವರಿಷ್ಠರ ಹೇಳಿಕೆಯಂತೆ ನಡೆದರೆ ಬೆಳಗಾವಿಯ ಕುಂದಾ ಧಾರವಾಡದ ಪೇಡಾ ಪಾಲು ಆಗುವದು ಖಚಿತ, ಇತ್ತ ಮೂಲ ಬೆಳಗಾವಿಗರಿಗೆ ನಮ್ಮ ಅಭ್ಯರ್ಥಿ ಇಲ್ಲವಲ್ಲ ಎಂದು ಬೇಸರದ ಜೊತೆಗೆ ನಮ್ಮ ಜಿಲ್ಲೆ ಮುಂದೆ ಮಲತಾಯಿ ಧೋರಣೆ ಎದುರಿಸಬಹುದು ಎಂಬ ಚಿಂತೆಯಲ್ಲಿದ್ದಾರೆ..
ವರದಿ ಪ್ರಕಾಶ ಕುರಗುಂದ..