ಬೆಳಗಾವಿಯಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ..
ಬೆಳಗಾವಿ : ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ವಿಶ್ವಗುರು ಬಸವಣ್ಣನವರ ಮತ್ತು ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಆಚರಿಸಲಾಯಿತು..
ಬೆಳಗಾವಿ ತಹಸೀಲ್ದಾರ ಸಿದ್ರಾಯ ಭೋಸಗಿ ಅವರು ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಬಸವಣ್ಣ ಹೇಮರಡ್ಡಿ ಮಲ್ಲಮ್ಮನವರ ವೈಚಾರಿಕ ಚಿಂತನೆಗಳು ಪ್ರಸ್ತುತ ಸಮಾಜಕ್ಕೆ ಅನ್ವಯಿಸುವ ಅವಶ್ಯಕ ವಿಚಾರಗಳಾಗಿವೆ, ಅವರು ಹಾಕಿಕೊಟ್ಟ ಆದರ್ಶಗಳನ್ನು ನಾವೆಲ್ಲ ಪಾಲಿಸಿದರೆ ನಮ್ಮ ಸಮಾಜದಲ್ಲಿ ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂದರು..

ಇದೆ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ರತ್ನ ಪ್ರಭಾ ಬೆಲ್ಲದ, ಲತಾ ಅಂಕೆರಿ, ಶಾಂತಾ ಜಂಗಲ್, ಗಂಗಾ, ಸವಿತಾ ನಡಗುಂದ, ಗಿರೀಶ್ ಸೋನವಾಲ್ಕರ್, ಅರ್. ವಿ. ಮುಳ್ಳೂರ್, ರಮೇಶ್ ಜಂಗಲ್, ಟಿ.ಕೆ.ಪಾಟೀಲ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ವರದಿ ಪ್ರಕಾಶ್ ಕುರಗುಂದ..