ಬೆಳಗಾವಿಯಲ್ಲಿ ಜುಲೈ 20ರಿಂದ 23ನೇ ಚಾತುರ್ಮಾಸ..

ಬೆಳಗಾವಿಯಲ್ಲಿ ಜುಲೈ 20ರಿಂದ 23ನೇ ಚಾತುರ್ಮಾಸ..

1008 ರಘು ವಿಜಯೇಂದ್ರ ಶ್ರೀಪಾದಂಗಳ ಆಧ್ಯಾತ್ಮಿಕ ಆರಾಧನೆ..

ಬೆಳಗಾವಿ : ಜಗದ್ಗುರು ಶ್ರೀಮನ್ವಧ್ವಾಚಾರ್ಯ ಮೂಲ ಸಂಸ್ಥಾನ ಶ್ರೀ ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಮಠ ಶ್ರೀ 1008 ರಘು ವಿಜಯೇಂದ್ರ ಶ್ರೀಪಾದಂಗಳವರ 23ನೇ ಚಾತುರ್ಮಾಸವನ್ನು ಜು.20 ರಂದು ಚನ್ನಮ್ಮ ನಗರದದಲ್ಲಿ ಆಯೋಜಿಸಲಾಗಿದೆ ಎಂದು ಧೀರೇಂದ್ರ ಆಚಾರ್ಯ ಕಟ್ಟಿ ಅವರು ಹೇಳಿದ್ದಾರೆ.

ಗುರುವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಾತುರ್ಮಾಸದ 50 ದಿನದ ಕಾರ್ಯಕ್ರಮದಲ್ಲಿ ಭಾಷ್ಯಪಾಠ, ಭಕ್ತಾಧಿಗಳಿಂದ ಪಾದ ಪೂಜೆ, ವೈಕುಂಠ ದೇವ ಪಾರಾಯಣ ಮಾಡಲಾಗುತ್ತಿದೆ. ಚಾರ್ತುಮಾಸಕ್ಕೆ ಬರುವ ಭಕ್ತಾದಿಗಳಿಗೆ ಮಹಾ ಪ್ರಸಾದದ ಆಯೋಜನೆಯನ್ನು ಮಾಡಲಾಗಿದೆ ಎಂದರು.

ಪ್ರತಿ‌ ನಿತ್ಯ ಪ್ರವಚನ ಮುಗಿದ ಮೇಲೆ ಭಕ್ತರ ಮನೆಯಲ್ಲಿ ತೊಟ್ಟಿಲು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರತಿ‌ದಿನ ಅವರ ಮನೆಗೆ ತೆರಳಿ ಪೂಜೆಯಲ್ಲಿ ಗುರುಗಳು ಭಾಗಿಯಾಗಲಿದ್ದಾರೆ ಎಂದರು.
ಜು. 20ರಿಂದ ಶ್ರೀಗಳು ಚಾರ್ತುಮಾಸ ಆರಂಭಿಸಲಿದ್ದಾರೆ. ಜು.19 ರಂದು ನಗರದಲ್ಲಿ ಗುರುಗಳ ಮೆರವಣಿಗೆ ಮಾಡಲಾಗುವುದು. ಪಂಡಿತರು ಆಶೀರ್ವಚನ ಮಾಡಲಿದ್ದಾರೆ. ಇಲ್ಲಿ ಬಂದ ಭಕ್ತರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ಸಮಾಜದ ಭಕ್ತಾದಿಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದರು. ರಾಘವೇಂದ್ರ ಕುಲಕರ್ಣಿ, ಜಯತೀರ್ಥ ಸವದತ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *