ಬೆಳಗಾವಿಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ..

ಬೆಳಗಾವಿಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ..

ಸಹಸ್ರಾರು ವರ್ಷ ಜನಮಾನಸದಲ್ಲಿ ಉಳಿಯುವ ರಾಜ ನಾಡಪ್ರಭು ಕೆಂಪೇಗೌಡರು..

ಬೆಳಗಾವಿ : ಇತಿಹಾಸದಲ್ಲಿ ಅನೇಕ ರಾಜರುಗಳು ತಮ್ಮ ಸೈನಿಕ ಸಾಧನೆ ಮೂಲಕ ಸಾಮ್ರಾಜ್ಯ ವಿಸ್ತರಿಸಿ, ತಾತ್ಕಾಲಿಕವಾಗಿ ವರ್ತಮಾನದಲ್ಲಿ ಚಾಲನೆಯಲ್ಲಿ ಇರುತ್ತಾರೆ, ಆದರೆ ತಾವು ಮಾಡಿರುವ ಜನೋಪಯೋಗಿ ಕಾರ್ಯಗಳಿಂದ ಸಾವಿರಾರು ವರ್ಷ ಕಳೆದರೂ ಕೂಡಾ ಜನಮಾನಸದಲ್ಲಿ ಉಳಿಯುವ ರಾಜರೆಂದರೆ ಅದು ಕೆಂಪೇಗೌಡರು ಎಂದು ಕಿತ್ತೂರಿನ ಸಾಹಿತಿಗಳಾದ ಮಹೇಶ್ ನೀ ಚನ್ನಂಗಿ ಹೇಳಿದ್ದಾರೆ.

ಶುಕ್ರವಾರ ದಿನಾಂಕ 27/06/2025 ರಂದು ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಕನ್ನಡ ಮತ್ತು ಸಂಸ್ಕೃತ ಇಲಾಖೆ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಕುರಿತಾಗಿ ಉಪನ್ಯಾಸ ನೀಡುತ್ತಾ ಅವರು ಮಾತನಾಡಿದರು.

ಯಲಹಂಕದ ಕೆಂಪೇಗೌಡರು ಸುಮಾರು 310 ವರ್ಷಗಳ ಕಾಲ ಆಳಿದ್ದು, ಅವರು ಭಾರತದ ಪ್ರಸಿದ್ಧ ಸಾಮ್ರಾಜ್ಯಗಳಲ್ಲಿ ಒಂದಾದ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದು, ಕೆಂಪೇಗೌಡರು ಜನಪ್ರಿಯ ರಾಜರಾಗಿದ್ದರು. ಬೆಂಗಳೂರು ನಗರ ನಿರ್ಮಾಣವಲ್ಲದೇ ಅನೇಕ ಜನೋಪಕಾರಿ ಕಾರ್ಯಗಳನ್ನು ಮಾಡಿರುವ ಶ್ರೇಯಸ್ಸು ಕೆಂಪೇಗೌಡರಿಗೆ ಸಲ್ಲುತ್ತದೆ, ಆದ್ದರಿಂದಲೇ ಅವರು ಇಂದು ನಮ್ಮ ಮನಸ್ಸಿನಲ್ಲಿ ಹಸಿರಾಗಿ ಉಳಿದಿದ್ದರೆ ಎಂದಿದ್ದಾರೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ..