ಬೆಳಗಾವಿಯಲ್ಲಿ ಪಂಚಮಸಾಲಿ ಮೀಸಲಾತಿ ಚಳುವಳಿಯ ಕೇಂದ್ರ ಕಾರ್ಯಾಲಯ..
ಜಾತಿ ಹಾಗೂ ಮೀಸಲಾತಿ ವಿಷಯವನ್ನು ರಾಜಕಾರಣ ಮಾಡುವದು ಸರಿಯಲ್ಲ..
ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿಗಳು..
ಬೆಳಗಾವಿ : ಬುಧವಾರ ದಿನಾಂಕ 10/4/2024ರ ಸಂಜೆಯಂದು, ಬೆಳಗಾವಿಯ ಹನುಮಾನ ನಗರದ ಮೂರನೇ ಹಂತದಲ್ಲಿ, ಪಂಚಮಸಾಲಿ ಮೀಸಲಾತಿ ಹೋರಾಟದ ಕೇಂದ್ರ ಕಾರ್ಯಾಲಯವನ್ನು ಕೂಡಲಸಂಗಮ ಪೀಠದ ಪೂಜ್ಯರಾದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದೊಂದಿಗೆ ಪ್ರಾರಂಭಗೊಂಡಿದೆ..
ಪಂಚಮಸಾಲಿ ಮೀಸಲಾತಿ ಬೇಡಿಕೆಯ ಹೋರಾಟ ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿ ಇದ್ದಿದ್ದು, ಇನ್ನುವರೆಗೂ ಯಾವುದೇ ಸರ್ಕಾರಗಳು ತಾರ್ಕಿಕ ಆದೇಶ ಮಾಡದೇ, ಸಮುದಾಯದ ಮೂಗಿಗೆ ತುಪ್ಪ ಸವರುವ ಆಸ್ವಾಸನೆ ನೀಡುತ್ತಾ ಬಂದಿದ್ದು, ಇನ್ನು ಮುಂದೆ ಕಠಿಣ ಹೋರಾಟ ಮಾಡಿ, ಮೀಸಲಾತಿ ಪಡೆದು, ಸಮುದಾಯಕ್ಕೆ ನ್ಯಾಯ ಕೊಡಿಸಲೆಬೇಕೆಂಬ ಹಠದಲ್ಲಿ ಪೂಜ್ಯಶ್ರಿಗಳು ಇಂದು ಬೆಳಗಾವಿಯಲ್ಲಿ ತಮ್ಮ ಕಾರ್ಯಾಲಯ ಮಾಡಿದ್ದಾರೆ ಎಂಬ ಮಾತಿದೆ..

ಅಖಿಲ ಭಾರತ ಲಿಂಗಾಯತ, ಪಂಚಮಸಾಲಿ, ಗೌಡ ಲಿಂಗಾಯತ, ಮಲೆಗೌಡ, ದೀಕ್ಷ ಲಿಂಗಾಯತ ಸಮುದಾಯಗಳ ಮೀಸಲಾತಿ ಚಳುವಳಿ ಸಮಿತಿಯ ವತಿಯಿಂದ ಇನ್ನು ಮುಂದೆ ಚುನಾವಣೆಯ ಬಳಿಕ ಮೀಸಲಾತಿಗಾಗಿ ತೀವ್ರ ಗತಿಯ ಹೋರಾಟ ನಡೆಯುತ್ತಿದ್ದು ಇದರಲ್ಲಿ ಸಮುದಾಯದ ಎಲ್ಲಾ ಸದಸ್ಯರು ಭಾಗಿಯಾಗಿ, ನಮ್ಮ ಹಕ್ಕನ್ನು ಪಡೆಯೋಣ ಎಂದು ಈ ಹೋರಾಟಕ್ಕೆ ಶ್ರೀಗಳು ಸರ್ವರನ್ನು ಸ್ವಾಗತಿಸಿದ್ದಾರೆ..
ಇದಕ್ಕೂ ಮುಂಚೆ ಖಾಸಗಿ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಜಾತಿಯ ಅಥವಾ ಮೀಸಲಾತಿಯ ವಿಷಯವನ್ನು ರಾಜಕೀಯದಲ್ಲಿ ತರಬೇಡಿ, ಎಲ್ಲರೂ ನಮ್ಮವರೇ, ನಮ್ಮ ಜೊತೆಗೆ ಚಳುವಳಿ ಮಾಡುವವರೆಲ್ಲ ನಮ್ಮವರೇ, ನಮ್ಮ ಹೋರಾಟ ವಿರೋಧ ಮಾಡುವವರು ನಮ್ಮವರಲ್ಲ ಎಂದಿದ್ದಾರೆ..
ವರದಿ ಪ್ರಕಾಶ ಕುರಗುಂದ..