ಬೆಳಗಾವಿಯಲ್ಲಿ ಬಾಲ್ಯದ ಕ್ರೀಡೆಗಳಿಗೆ ಸಭಾಪತಿ ಯುಟಿ ಖಾದರ್ ಚಾಲನೆ..

ಬೆಳಗಾವಿಯಲ್ಲಿ ಬಾಲ್ಯದ ಕ್ರೀಡೆಗಳಿಗೆ ಸಭಾಪತಿ ಯುಟಿ ಖಾದರ್ ಚಾಲನೆ..

ಬೆಳಗಾವಿ : ನಗರದ ಟಿಳಕವಾಡಿ ಲೀಲೆ ಮೈದಾನದಲ್ಲಿ ನಡೆದ ಬಾಲ್ಯದ ಕ್ರೀಡೆಗಳು, ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಆಯೋಜನೆಗೊಂಡ ಕ್ರೀಡೆಗಳು,
ಈ ವರ್ಷದ ಬಾಲ್ಯದ ಕ್ರೀಡೆಗಳಿಗೆ ವಿಧಾನಸಭೆ ಸಭಾಪತಿ ಯುಟಿ ಖಾದರ್ ಗೋಲಿ ಆಡುವ ಮೂಲಕ ಚಾಲನೆ ನೀಡಿದ್ದಾರೆ..

ಗೋಲಿ, ಬುಗುರಿ, ರಿಂಗ್, ಬಂಡಿ, ಚಿನ್ನಿ ಆಟ, ಲಗೋರಿ ಸೇರಿದಂತೆ ಅನೇಕ ಆಟಗಳನ್ನ ಆಯೋಜನೆ ಮಾಡಿದ್ದು,
ಈಗಿನ ಯುವಕರಿಗೆ ಸ್ಫೂರ್ತಿ ಆಗಿರುವ ಈ ದೇಶಿ ಆಟಗಳ ಪ್ರಾಮುಖ್ಯತೆಯನ್ನು ಯುಟಿ ಖಾದರ್ ಹೇಳಿದ್ದಾರೆ. ಇಂತಹ ಬಾಲ್ಯದ ಆಟಗಳನ್ನ ಕಣ್ಮರೆ ಮಾಡದೇ ಮುಂದುವರೆಸಬೇಕು ಎಂಬ ಸಲಹೆ ನೀಡಿದರು.

ಈಗಿನ ಬಾಲ್ಯದ ಮಕ್ಕಳು ಇಂತಹ ನಮ್ಮ ಸ್ಥಳೀಯ ಆಟಗಳನ್ನು ಆಡುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕ್ಕೊಳ್ಳಲಿಕೆ ಸಲಹೆ ನೀಡಿದರು.

Leave a Reply

Your email address will not be published. Required fields are marked *