ಬೆಳಗಾವಿಯಲ್ಲಿ ಬಿಜೆಪಿ ಜಿಲ್ಲಾ ಮಹಾನಗರ ಕಾರ್ಯಗಾರ..

ಬೆಳಗಾವಿಯಲ್ಲಿ ಬಿಜೆಪಿ ಜಿಲ್ಲಾ ಮಹಾನಗರ ಕಾರ್ಯಗಾರ..

ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಜನಜಾಗೃತಿಯ ಚಿಂತನೆ..

ಬೆಳಗಾವಿ : ಮಂಗಳವಾರ ದಿನಾಂಕ 10/06/2025 ರಂದು ಸದಾಶಿವ ನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮಹಾನಗರದ ಜಿಲ್ಲಾ ಕಾರ್ಯಗಾರವು ಯಶಸ್ವಿಯಾಗಿ ನಡೆದಿದೆ..

ಈ ಕಾರ್ಯಾಗಾರದಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಗೀತಾ ಸುತಾರ, ಕಾರ್ಯಗಾರದ ಸಂಚಾಲಕರಾದ ಸಂಜಯ್ ಪಾಟೀಲ್ ಮಾಜಿ ಶಾಸಕರು, ಮಹಾಪೌರ ಮಂಗೇಶ ಪವಾರ್ ಉಪ್ ಮಹಾಪೌರ ವಾಣಿ ಜೋಶಿ, ಆಡಳಿತ ಪಕ್ಷದ ನಾಯಕ ಹಣಮಂತ ಕೊಂಗಾಲಿ, ಉಜ್ವಲಾ ಬಡವಾನಾಚೆ, ಗಣೇಶ್ ದೇಸಾಯಿ, ವಿಜಯ ಕೊಡಗಾನೂರ, ಮಹಾದೇವಿ ಹಿರೇಮಠ, ಸುವರ್ಣ ಪಾಟೀಲ್ ಭಾಗವಹಿಸಿದ್ದರು.

ಕಾರ್ಯಾಗಾರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ 11 ವರ್ಷದ ಸಾಧನೆಗಳ ಬಗ್ಗೆ ಮಾಹಿತಿ ನೀಡಿದ್ದು, ಅದೇರೀತಿ ರಾಜ್ಯ ಬಿಜೆಪಿ ವತಿಯಿಂದ 15 ದಿವಸಗಳ ಕಾಲ ಸಾಕಷ್ಟು ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಬಗ್ಗೆ ಸಭೆಯಲ್ಲಿ ಸವಿಸ್ತಾರವಾಗಿ ವಿವರಣೆಯನ್ನು ನೀಡಿದ್ದಾರೆ. ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜನಜಾಗ್ರತಿ, ಕೇಂದ್ರದಿಂದ ರಾಜ್ಯಕ್ಕೆ ನೀಡಿದ ಸೌಲಭ್ಯಗಳ ಬಗ್ಗೆ ಚರ್ಚೆ ನಡೆಸಿ, ಬರುವ ದಿನಗಳಲ್ಲಿ ಕೇಂದ್ರ ಸರ್ಕಾರದ ಕೊಡುಗೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂಬ ಚರ್ಚೆಯನ್ನು ಕಾರ್ಯಾಗಾರದಲ್ಲಿ ನಡೆಸಲಾಗಿದೆ..

ವರದಿ ಪ್ರಕಾಶ ಬಸಪ್ಪ ಕುರಗುಂದ.