ಬೆಳಗಾವಿಯಲ್ಲಿ ಭರದಿಂದ ಸಾಗಿದ ಕನ್ನಡ ಚಿತ್ರದ ಚಿತ್ರೀಕರಣ..

ಬೆಳಗಾವಿಯಲ್ಲಿ ಭರದಿಂದ ಸಾಗಿದ ಕನ್ನಡ ಚಿತ್ರದ ಚಿತ್ರೀಕರಣ..

ಸ್ನೇಹ ಕಂಬೈನ್ಸನ ಚೊಚ್ಚಲ ಚಿತ್ರ ಸಕ್ಸೆಸ್ ಆಗುವಲ್ಲಿ ಸಂಶಯವೇ ಇಲ್ಲಾ.

ನಿರ್ಮಾಪಕರಲ್ಲೊಬ್ಬರಾದ ವಿಠ್ಠಲ್ ಅಂಕಲಗಿ ಅಭಿಮತ..

ಬೆಳಗಾವಿ : ಕಳೆದ ಕೆಲ ದಿನಗಳಿಂದ ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಸ್ನೇಹ ಕಂಬೈನ್ಸ್ ನ ಪ್ರಥಮ ಚಿತ್ರದ ಚಿತ್ರೀಕರಣವು ಭರದಿಂದ ಸಾಗಿದ್ದು, ಕನ್ನಡ ಕಲಾಭಿಮಾನಿಗಳಿಗೆ ಈ ಚಿತ್ರ ಖಂಡಿತ ಇಷ್ಟ ಆಗಿ, ಚಿತ್ರ ಯಶಸ್ವಿ ಆಗುವುದರಲ್ಲಿ ಸಂಶಯವೇ ಇಲ್ಲಾ ಎಂದು ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ವಿಠ್ಠಲ್ ಅಂಕಲಗಿ ಹೇಳಿದ್ದಾರೆ.

ಬುಧವಾರ ನಗರದ ಸಮೀಪ ಇರುವ ಬಾಳೇಕುಂದ್ರಿ ಗ್ರಾಮದಲ್ಲಿ ಚಿತ್ರದ ಚಿತ್ರೀಕರಣ ನಡೆಯುವ ಬಿಡುವಿನ ವೇಳೆಯಲ್ಲಿ ನಮ್ಮ ಸುದ್ದಿಜಾಲಯೊಂದಿಗೆ ಮಾತನಾಡಿದ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ವಿಠ್ಠಲ್ ಅಂಕಲಗಿ ಅವರು, ಚಿತ್ರದ ಕಥಾವಸ್ತು ತುಂಬಾ ವಿಭಿನ್ನವಾಗಿದ್ದು, ಜನತೆಗೆ ಖಂಡಿತ ಇಷ್ಟ ಆಗುತ್ತೆ, ಅದೇರೀತಿ ನಾಯಕ ನಾಯಕಿ ಆದಿಯಾಗಿ ಎಲ್ಲಾ ಕಲಾವಿದರೂ ತಮ್ಮ ಅತ್ಯುತ್ತಮ ನಟನೆಯಿಂದ ಚಿತ್ರಕ್ಕೆ ಜೀವ ತುಂಬುತ್ತಿದ್ದಾರೆ ಎಂದಿದ್ದಾರೆ.

ನಿನ್ನೆ ನಡೆದ ಚಿತ್ರೀಕರಣದಲ್ಲಿ ಕನ್ನಡದ ಹೆಸರಾಂತ ನಟರಾದ ಶೋಭರಾಜ್ ಹಾಗೂ ನಾಯಕಿ ಸೂಚಾರಿಕಾ ಸೇರಿದಂತೆ ಹಲವಾರು ಪೋಷಕ ನಟರು ನಟಿಸಿದ ಕೆಲ ದೃಶ್ಯಗಳನ್ನು ಚಿತ್ರೀಕರಿಸಲಾಗಿದ್ದು, ಇನ್ನು ಕೆಲ ದಿವಸ ಬೆಳಗಾವಿ ಸುತ್ತಮುತ್ತ ಚಿತ್ರೀಕರಿಸಿ ನಂತರ ಉತ್ತರ ಪ್ರದೇಶದಲ್ಲಿ ಸ್ವಲ್ಪ ದಿನ ಶೂಟಿಂಗ್ ಮುಗಿಸಿ, ಆದಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ.

ಮಂಡ್ಯ ಮೂಲದ ಉಮೇಶಗೌಡ ಅವರು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ, ಬೆಳಗಾವಿಯ ಶೇಖರ ಕಾಲೇರಿ, ಸಂತೋಷ ಬೆಳಗಾವಿ, ಸಂತೋಷ ಅಂಗಡಿ, ಬಸನಾಯ್ಕ್ ಕಾಲೇರಿ ಹಾಗೂ ವಿಠ್ಠಲ್ ಅಂಕಲಗಿ ಅವರುಗಳು ಬಂಡವಾಳ ಹೂಡಿದ್ದಾರೆ, ಬೆಳಗಾವಿ ಜಿಲ್ಲೆಯ ಸಂತೋಷ ನಾಯಕನಾಗಿ, ಬೆಳಗಾವಿಯ ದೀಪ್ತಿ, ಹಾಗೂ ಬೆಂಗಳೂರಿನ ಸೂಚಾರಿಕಾ ನಾಯಕಿಯರಾಗಿ ನಟಿಸುತ್ತಿದ್ದು, ಶೋಭರಾಜ್, ಸಾಧುಕೋಕಿಲ, ಮಾಜಿ ಶಾಸಕ ಸಂಜಯ ಪಾಟೀಲ, ಬಿಜೆಪಿ ಪ್ರಮುಖ ಚೇತನ ಅಂಗಡಿ, ವಿಕ್ಟರಿ ವಾಸು, ಶಾಂತ ಆಚಾರ್ಯ ಹಾಗೂ ಮತ್ತಿತರ ಕಲಾವಿದರ ದೊಡ್ಡ ತಾರಾಬಳಗವೇ ಇರುವ ಈ ಚಿತ್ರವು ರವಿ ಅವರ ಛಾಯಾಗ್ರಹಣದಲ್ಲಿ ಉತ್ತಮವಾದ ಮೂಡಿಬರುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ..