ಬೆಳಗಾವಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 99ನೇ ವರ್ಷದ ಜನ್ಮದಿನಾಚರಣೆ…

ಬೆಳಗಾವಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 99ನೇ ವರ್ಷದ ಜನ್ಮದಿನಾಚರಣೆ..

ವಾಜಪೇಯಿ ಅವರ ವ್ಯಕ್ತಿತ್ವ ಹಿಮಾಲಯ ಪರ್ವತಕ್ಕಿಂತ ದೊಡ್ಡದು..

ಆರ್ ಎಸ್ಎಸ್ ಮುಖಂಡರಾದ ಉಮಾಜಿ ಗೊಸಾಯಿ ಅಭಿಮತ..!!!

ಬೆಳಗಾವಿ : ವಾಜಪೇಯಿಯವರ ಜೀವನ ಸಂಘರ್ಷಮಯವಾಗಿದ್ದು ಹಿಮಾಲಯಕ್ಕಿಂತ ದೊಡ್ಡದಾದ ಚರಿತ್ರೆಯನ್ನು ಹೊಂದಿದ ಮಹಾನಾಯಕ ಅಟಲಜಿ ಎಂದು ರಾಷ್ಟ್ರೀಯ ಸ್ವಯಂ ಸಂಘದ ಹಿರಿಯರಾದ ಉಮಾಜಿ ಗೋಸಾಯಿ ಹೇಳಿದರು.

ನಗರದ ಅರ್.ಪಿ.ಡಿ.ವೃತ್ತದ ಗ್ರಾಮಾಂತರ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ವಾಜಪೇಯಿಯವರ 99ನೇ ಜನ್ಮದಿನಾಚಾರಣೆ ಹಾಗೂ ಸುಶಾಸನ ದಿನಾಚರಣೆಯಲ್ಲಿ ಮಾತನಾಡಿ, ಸಂಘದಲ್ಲಿ ಪುರ್ಣಾವಧಿ ಕಾರ್ಯಕರ್ತನಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಗೂರುಜಿಯವರು ಅಟಲಜಿಯನ್ನು ಕರೆದು ನಿಮಗೆ ಸಂಘದ ಸೇವೆ ಸಾಕು ಇನ್ನು ಮುಂದೆ ಬೇರೆ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದಾಗ ನನ್ನಿಂದ ಎನಾದರು ಅಪಚಾರವಾಗಿದೆ ಎಂದು ಅಟಲಜಿ ಕೇಳಿದಾಗ, ಇಲ್ಲಾ ನೀನು ಈ ರಾಷ್ಟ್ರ ದಲ್ಲಿ ರಾಜಕೀಯ ಜೀವನ ಪ್ರಾರಂಭಿಸಬೇಕು ಎಂದಾಗ ಸಾಮನ್ಯ ಅಧ್ಯಾಪಕನ ಮಗ ಅಟಲಜಿ ಪ್ರಪಂಚದಲ್ಲಿ ಪ್ರಸಿದ್ದ ನಾಯಕನಾಗಿ ಹೊಹೊಮ್ಮಿರುವದು ಶ್ಲಾಘನೀಯ.

ಅವರಲ್ಲಿದ್ದ ದೃಡಸಂಕಲ್ಪ, ರಾಜನೀತಿ ಹಾಗೂ ದೂರ ದೃಷ್ಟಿಯಿಂದ ರಾಷ್ಟ್ರಕ್ಕೆ ಸಮರ್ಪಿತವಾದ ಜೀವನ ಅವರದ್ದಾಗಿತ್ತು.

ತುರ್ತುಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ್ದ ಇವರು ಜನಸಂಘದ ಅಧ್ಯಕ್ಷರಾಗಿ ದೇಶಾಧ್ಯಂತ ಸಂಚರಿಸಿ ತನು, ಮನ ಧನದಿಂದ ಪಕ್ಷ ಸಂಘಟಿಸಿದ ಸಂಘಟನಾ ಚತುರ ಅಟಲಜಿಯಾಗಿದ್ದರು.

1980 ರಲ್ಲಿ ಮರುನಾಮಕರಣಗೊಂಡು ಬಿಜೆಪಿಯ ಪ್ರಥಮ ಅಧ್ಯಕ್ಷರಾಗಿ ಕಟ್ಟಿದ ರಾಜಕೀಯ ಪಾರ್ಟಿ ಇಂದು ಪ್ರಪಂಚದ‌‌ ಅತ್ಯಂತ‌ ದೊಡ್ಡದಾದ ಪಾರ್ಟಿಯಾಗಿ ಬೆಳದಿದೆ. ಅಟಲಜಿ ಒಬ್ಬ ಕವಿ, ಪತ್ರಕರ್ತ ಹಾಗೂ ಚಾಣಾಕ್ಷ ರಾಜಕಾರಣಿಯಾಗಿ ಭಾಷಾತಜ್ಞರಾಗಿದ್ದರು. ಇವರ ಮಾತಿಗೆ ವಿರೊಧಿಗಳು ತಲೆತೂಗುತಿದ್ದರು. ಮೂರು ಬಾರಿ ಪ್ರಧಾನಮಂತ್ರಿಗಳಾಗಿ ಯಾವ ವಿರೋಧಿಗಳಿಗೂ ದೃತಿಗೆಡದೆ ತಗೆದುಕೊಂಡ ಕಾರ್ಗಿಲ್ ಯುದ್ದ, ದೇಶ ಜೋಡಣೆಯ ಚಥುಶ್ಪತ್ ರಸ್ತೆ ನಿರ್ಮಾಣ, ಪೊಕ್ರಾನ ಅಣು ಸ್ಪೋಟ್, ವಿದೇಶಾಂಗ ನೀತಿ ಹಾಗೂ ಅಭಿವೃದ್ಧಿ ಪರ ಐತಿಹಾಸಿಕ ನಿರ್ಣಯಗಳು ಇಂದಿಗೂ ಪ್ರಸ್ತುತವಾಗಿವೆ.

ಮೃದು ಸ್ವಭಾವದ ಅಟಲಜಿ ಕಾರ್ಗಿಲ್ ಯುದ್ದದಲ್ಲಿ ಪಾಕಿಸ್ತಾನದ ಪರ್ವೇಜ್ ಮುಶ್ರಫ್ ಅಣುಬಾಂಬ್ ಸ್ಪೋಟದ ಬಗ್ಗೆ ಭಾರತಕ್ಕೆ ಭಯ ಸೃಷ್ಟಿಸಿದಾಗ ಅಟಲಜಿ ಹೇಳಿದ ಒಂದೆ‌ ಮಾತು ಒಂದು ಅಣುಬಾಂಬದ ಸ್ಪೋಟದಿಂದ ನಾಲ್ಕೈದು ವರ್ಷಗಳಲ್ಲಿ ಭಾರತ‌ ಮತ್ತೆ ಎದ್ದು ನಿಲ್ಲುತ್ತೆ ಆದರೆ ಸಂಪೂರ್ಣ ಪಾಕಿಸ್ತಾನ ‌ಮಾರನೆ ದಿನದ ಸೂರ್ಯದಯ ನೋಡಲು ಒಬ್ಬರು ಭೂಮಿಯ ಮೇಲೆ ಇರಲ್ಲ ಎಂದ ದಿನವೆ ಪಾಕಿಸ್ತಾನ ‌ಸೊತು ಸುಣ್ಣವಾಗಿತ್ತು. ಇಂತಹ ಮಹಾನ ನಾಯಕ ಭಾರತ ಮಾತೆಯ ಮಡಲಿನ‌ಲ್ಲಿ ಮಣ್ಣಾದರು ಎಂದರು.

ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ದೇಶಕ್ಕಾಗಿ ಸಮರ್ಪಿತರಾದ ಅಟಲಜಿಯವರನ್ನ ನೆನಪಿಸಿಕೊಳ್ಳುವದು ಪ್ರತಿಯೊಬ್ಬರು ಕರ್ತವ್ಯ. ಭಾರತವನ್ನು ಪ್ರಪಂಚವೇ ಗೌರವಿಸುವ ಕಾರ್ಯ ಮಾಡಿದ ನರೇಂದ್ರ ಮೊದಿಜಿಯವರಿಗೆ ಪ್ರೇರಣೆಯೆ ಅಟಲ ಬಿಹಾರಿ ವಾಜಪೇಯಿವರು.

24 ಪಕ್ಷಗಳನ್ನು ಒಟ್ಟುಗೂಡಿಸಿ ದೇಶಭಾರವನ್ನ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ ರಾಜನೀತ‌ ಪಂಡಿತರಾಗಿದ್ದರು. ವಾಜಪೆಯಿಯವರ ಅಂದು ಪುರ್ಣ ಬಹುಮತದ ಕನಸ್ಸು ಇಂದು ನಿಜವಾಗಿದೆ ಎಂದರು.
ವೇದಿಕೆಯ ಮೇಲೆ
ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯೆ ಧನಶ್ರೀ ಸರದೇಸಾಯಿ, ವಿಭಾಗ ಸಹಸಂಘಟನಾ‌ ಕಾರ್ಯದರ್ಶಿ ಜಯಪ್ರಕಾಶ್ ಎಮ್.ಸಿ.ಇದ್ದಿದ್ದು, ಸಂದೀಪ ದೇಶಪಾಂಡೆ,
ಧನಜಯ ಜಾಧವ, ನೀತಿನ ಚೌಗಲೆ, ಪ್ರಮೋದ ಕೊಚೆರಿ, ಎಫ್.ಎಸ್.ಸಿದ್ದನಗೌಡರ, ಡಾ.ಸೋನಾಲಿ ಸರ್ನೋಬರ್ತ, ಅಭಯ ಅವಲಕ್ಕಿ, ರಾಜಶ್ರೀ ವಡೆಯರ, ರಂಜನಾ ಕೊಲಕಾರ, ಸುರೇಶ ಪಾಟೀಲ, ಪ್ರದೀಪ‌‌ ಸಾಣಿಕೊಪ್ಪ, ಸಂತೋಷ ದೇಶನೂರ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು..

ವರದಿ ಪ್ರಕಾಶ ಕುರಗುಂದ…