ಬೆಳಗಾವಿಯಲ್ಲಿ ರವಿವಾರ ದಿನಾಂಕ 1ರಂದು ವಕ್ಪ ಅಕ್ರಮದ ವಿರುದ್ಧ ಬ್ರಹತ್ ಸಮಾವೇಶ..
ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಲು ಕಣಕ್ಕಿಳಿಯುವ ಕೇಸರಿ ಕಲಿಗಳು..
ರಾಜಕೀಯ ಧ್ರುವೀಕರಣದ ನಡುವೆ ಜನಪರವಾಗಿ ನಿಲ್ಲಲು ಸಿದ್ಧವಾದ ಸಾಹುಕಾರ ಸೈನ್ಯ..
ಬೆಳಗಾವಿ : ವಕ್ಪ ಬೋರ್ಡಿನ ಹೆಸರಿನಲ್ಲಿ ರಾಜ್ಯದಾದ್ಯಂತ ರೈತನ ಆಸ್ತಿಗಳಲ್ಲಿ ವಕ್ಪ ಹೆಸರು ದಾಖಲಾಗುತ್ತಿದ್ದು, ಇದರಿಂದ ರಾಜ್ಯದ ರೈತರು ಆತಂಕದಲ್ಲಿದ್ದಾರೆ, ರೈತರ ಪರವಾಗಿ ನಾವು ಸದಾ ಇರುತ್ತೇವೆ, ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಮಾಡಿದ ಈ ವಕ್ಪ ಅಕ್ರಮದ ವಿರುದ್ಧ ಬಿಜೆಪಿ ಪಕ್ಷದಿಂದ ನಾವು ದಿನಾಂಕ 1ರಂದು ಬ್ರಹತ್ ಸಮಾವೇಶ ಮಾಡಿ, ವಕ್ಪ ಅಕ್ರಮವನ್ನು ತಡೆಯಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಿದ್ದೇವೆ ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ರಮೇಶ ಜಾರಕಿಹೊಳಿ ಅವರು ಹೇಳಿದ್ದಾರೆ..
ಗುರುವಾರ ನಗರದ ಖಾಸಗಿ ಹೋಟೆಲಿನಲ್ಲಿ ತಮ್ಮ ಕಾರ್ಯಕರ್ತರ ಜೊತೆ ಸಮಾವೇಶದ ಪೂರ್ವಭಾವಿ ಸಭೆ ಕರೆದು ಮಾತನಾಡಿದ ಶಾಸಕ ರಮೇಶ ಜಾರಕಿಹೊಳಿ ಅವರು, ರಾಜ್ಯ ಸರ್ಕಾರ ರೈತರ ಬದುಕಿನಲ್ಲಿ ಆಟ ಆಡುತ್ತಿದ್ದು, ನೂರಾರು ವರ್ಷಗಳಿಂದ ಅನುಭವಿಸಿಕೊಂಡು ಬಂದಿರುವ ಆಸ್ತಿ ಪತ್ರಗಳಲ್ಲಿ ಇಂದು ಉದ್ದೇಶಪೂರ್ವಕವಾಗಿ ವಕ್ಪ ಹೆಸರನ್ನು ಸೇರಿಸಿದ್ದು ತಪ್ಪು, ರಾಜ್ಯ ಸರ್ಕಾರದ ಈ ನಡೆಯನ್ನು ಬಿಜೆಪಿ ನಾಯಕರಾದ ನಾವು ತೀವ್ರವಾಗಿ ಖಂಡಿಸುತ್ತೇವೆ, ಇತ್ತೀಚೆಗೆ ರಾಜ್ಯ ರಾಜಕಾರಣದಲ್ಲಿ ಎಲ್ಲೋ ಒಂದು ಕಡೆ ರಾಜಕೀಯ ಧ್ರುವೀಕರಣ ಆಗುತ್ತಿದೆಯೇ? ಎಂಬ ಸಂಶಯ ನಮ್ಮಲ್ಲಿ ಕಾಡುತ್ತಿದ್ದರೂ ಕೂಡಾ, ನಾವು ಕೆಲ ಬಿಜೆಪಿ ನಾಯಕರು ಒಂದಾಗಿ, ದೃಢ ಸಂಕಲ್ಪದಿಂದ ರಾಜ್ಯದ ರೈತರ, ಸಾಮಾನ್ಯರ ಪರವಾಗಿ ನಿಂತು, ಹೋರಾಡಿ, ರೈತರಿಗೆ ನ್ಯಾಯ ಕೊಡಿಸುವ ಪ್ರಯತ್ನದಲ್ಲಿದ್ದೇವೆ..

ಅದಕ್ಕಾಗಿಯೇ ರವಿವಾರ ರೈತರ, ಜನಸಾಮಾನ್ಯರ ದ್ವನಿಯಾಗಿ ಬೆಳಗಾವಿಯಲ್ಲಿ ಬ್ರಹತ್ ಸಮಾವೇಶವನ್ನು ಮಾಡುತ್ತಿದ್ದು ಈ ಸಮಾವೇಶದಲ್ಲಿ ಮಾಜಿ ಕೇಂದ್ರ ಸಚಿವ ಹಾಗೂ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದ ಪ್ರತಾಪ ಸಿಂಹ, ಮಾಜಿ ಶಾಸಕ ಕುಮಾರ ಬಂಗಾರಪ್ಪ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಶಾಸಕ ಹರೀಶ್ ಮಾಜಿ ಸಂಸದ ಜಿ ಎಂ ಸಿದ್ದೇಶ, ಹಾಗೂ ಸ್ಥಳೀಯ ಬಿಜೆಪಿ ನಾಯಕರೊಂದಿಗೆ ಸುಮಾರು 15 ಸಾವಿರ ಕಾರ್ಯಕರ್ತರು, ರೈತರು ಹಾಗೂ ಜನಸಾಮಾನ್ಯರು ಭಾಗಿಯಾಗುವ ನಿರೀಕ್ಷೆಯಿದೆ ಎಂದಿದ್ದಾರೆ..
ನಗರದ ಗಾಂಧಿಭವನದಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯುವ ಈ ಬ್ರಹತ್ ರೈತಪರ ಸಮಾವೇಶದಲ್ಲಿ ಬಿಜೆಪಿ ಪಕ್ಷದ ನಾಯಕರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳುವರು, ರಾಜ್ಯದ ಜನತೆಯೊಂದಿಗೆ ನಾವು ಸದಾ ಇದ್ದೇವೆ ಎಂಬ ವಿಶ್ವಾಸದೊಂದಿಗೆ, ರೈತರಿಂದ ಬಂದ ಎಲ್ಲಾ ಮನವಿಗಳನ್ನು ಸ್ವೀಕರಿಸಿ, ಈ ವಕ್ಪ ಅಕ್ರಮವನ್ನು ಹೊಡೆದೋಡಿಸಿ, ರೈತರಿಗೆ ಹಾಗೂ ಸಾರ್ವಜನಿಕರಿಗೆ ನ್ಯಾಯ ನೀಡಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ನೀಡುತ್ತೇವೆ ಎಂಬ ಮಾಹಿತಿ ನೀಡಿದ್ದಾರೆ.

ಬೆಳಗಾವಿ ಸಮಾವೇಶದ ಈ ಪೂರ್ವಭಾವಿ ಸಭೆಯ ನೇತೃತ್ವವನ್ನು ಶಾಸಕರಾದ ರಮೇಶ ಜಾರಕಿಹೊಳಿಯವರು ವಹಿಸಿಕೊಂಡಿದ್ದು, ಬಿಜೆಪಿ ಪ್ರಮುಖರಾದ ಕಿರಣ ಜಾಧವ, ಮುರುಗೆಂದ್ರಗೌಡ ಪಾಟೀಲ, ಯುವರಾಜ ಜಾಧವ, ಮಹಾಂತೇಶ ಅಲಾಬದಿ, ಸಂತೋಷ್ ಚಿಕ್ಕಲದಿನ್ನಿ, ಶೇಖರ್ ಕಾಲೇರಿ, ಬಸವರಾಜ ಕಡೆಮನಿ, ಖಾನಾಪುರ, ಸವದತ್ತಿ, ರಾಮದುರ್ಗ ತಾಲೂಕುಗಳ ಬಿಜೆಪಿ ಪ್ರಮುಖರು ಮತ್ತು ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ..