ಬೆಳಗಾವಿಯಲ್ಲಿ ವಿಜೃಂಭಣೆಯ 77ನೆಯ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ..
ಬೆಳಗಾವಿ : ಮಂಗಳವಾರ ದೇಶದಾದ್ಯಂತ ಎಲ್ಲಾ ಭಾರತೀಯರು ಸಂಭ್ರಮದಿಂದ 77ನೆಯು ಸ್ವಾತಂತ್ರ್ಯ ದಿನಾಚರಣೆಯ ಸಡಗರದಲ್ಲಿ ಇದ್ದು, ರಾಜ್ಯದ ಎರಡನೆಯ ರಾಜಧಾನಿಯಲ್ಲಿಯೂ ಸಡಗರ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ನೆರವೇರಿದೆ..

ಮೊದಲಿಗೆ ಬೆಳಿಗ್ಗೆ 7 ಗಂಟೆಗೆ ಬೆಳಗಾವಿಯ ಶಕ್ತಿ ಕೇಂದ್ರ ಸುವರ್ಣ ವಿಧಾನ ಸೌಧದಲ್ಲಿ ಜಿಲ್ಲಾಧಿಕಾರಿ ಡಾ ನಿತೇಶ್ ಪಾಟೀಲ್ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಸ್ವತಂತ್ರ ದಿನಾಚರಣೆಗೆ ಚಾಲನೆ ನೀಡಿದಂತಾಯಿತು, ನಂತರ 7-30 ಕ್ಕೆ ಬೆಳಗಾವಿಯ ಐತಿಹಾಸಿಕ ಸ್ಥಳವಾದ ವಿರಸೌಧ (ಕಾಂಗ್ರೆಸ್ ಭಾವಿ) ದಲ್ಲಿ ಸಾಂಪ್ರದಾಯಕವಾಗಿ ಪಾಲಿಕೆಯ ಆಯುಕ್ತರಾದ ಅಶೋಕ್ ದುಡಗುಂಟಿ ಅವರು ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ಯ್ರ ಹಬ್ಬದ ದಿನವನ್ನು ಆಚರಿಸಲಾಯಿತು.

ನಂತರ 8 ಗಂಟೆಗೆ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ರವೀಂದ್ರ ಕರಲಿಂಗಣ್ಣವರ ಅವರಿಂದ ದ್ವಜಾರೋಹಣ ನೆರವೇರಿಸಲಾಯಿತು, ಅದೇ ಸಮಯದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಯೂ ಕೂಡಾ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡುವ ಮೂಲಕ ಸರ್ವರಿಗೂ 77ನೆಯ ಸ್ವಾತಂತ್ರ್ಯ ದಿನದ ಶುಭಾಶಯ ತಿಳಿಸಿದರು…

ಇನ್ನು ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ಮಹಾಪೌರರಾದ ಶೋಭಾ ಸೋಮಾಮಾಚೆ ಅವರು ಧ್ವಜಾರೋಹಣ ನೆರವೇರಿಸಿದ್ದು, ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾದ ಮಂಜುನಾಥ ಚೌಹಾಣ್ ಅವರಿಂದ ಧ್ವಜಾರೋಹಣ ನೆರವೇರಿದೆ..

ಇನ್ನು ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಜಂಟಿ ನಿರ್ದೇಶಕರಾದ ಲಕ್ಷ್ಮಣ ಬಬಲಿ ಅವರು, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಕಲ್ಯಾಣಾಧಿಕಾರಿಗಳಾದ ಬಸವರಾಜ್ ಕುರಿಹುಲಿ ಅವರಿಂದ ಅರ್ಥಪೂರ್ಣವಾಗಿ ಧ್ವಜಾರೋಜನ ನೆರವೇರಿದೆ..

ನಂತರ ಜಿಲ್ಲಾಡಳಿತದ ಆಯೋಜನೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೋಳಿ ಅವರು ಮುಖ್ಯ ಅತಿಥಿಗಳಾಗಿ ಭಾಗಿಯಾದ, ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಸ್ವಾತಂತ್ರ್ಯ ದಿನಾಚರಣೆ ಆಚರಣೆಯ ಸಂದರ್ಭದಲ್ಲಿ ಜಿಲ್ಲೆಯ ಪ್ರಮುಖ ಜನಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ಇಲಾಖೆಗಳ ಸಿಬ್ಬಂದಿಗಳು, ಹಾಜರಿದ್ದು, 77 ನೆಯ ಸ್ವಾತಂತ್ಯ್ರ ದಿನಾಚರಣೆ ಅದ್ಬುತ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ..
ವರದಿ ಪ್ರಕಾಶ ಕುರಗುಂದ..