ಬೆಳಗಾವಿಯಲ್ಲಿ ಸರಸ ಮೇಳ ಮತ್ತು ಖಾದಿ ಉತ್ಸವದ ಉದ್ಘಾಟನೆ..

ಬೆಳಗಾವಿಯಲ್ಲಿ ಸರಸ ಮೇಳ ಮತ್ತು ಖಾದಿ ಉತ್ಸವದ ಉದ್ಘಾಟನೆ..

ಮಹಿಳಾ ಸ್ವಸಹಾಯ ಮತ್ತು ಖಾದಿ ಮಾರಾಟಕ್ಕೆ ಸಾರ್ವಜನಿಕರ ಬೆಂಬಲವಿರಲಿ..

ಬೆಳಗಾವಿ : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ರಾಷ್ಟ್ರೀಯ ಜೀವನೋಪಾಯ ಅಭಿಯಾನ ಹಾಗೂ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಿಲ್ಲಾಡಳಿತ, ಜಿಲ್ಲಾಪಂಚಾಯತಿ ಮತ್ತು ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಸರಸ ಮೇಳ ಹಾಗೂ ಖಾದಿ ಉತ್ಸವ ಜರುಗುತ್ತದೆ..

ದಿನಾಂಕ 24/12/2024ರಿಂದ 04/01/2025ರ ವರೆಗೆ ಬೆಳಗಾವಿಯ ಸರ್ದಾರ ಮೈದಾನದಲ್ಲಿ ಸರಸ ಮತ್ತು ಖಾದಿ ಉತ್ಸವ ಮತ್ತು ವಸ್ತು ಪ್ರದರ್ಶನ ಮತ್ತು ಖಾದಿ ಮೇಳವನ್ನು ಹಮ್ಮಿಕೊಂಡಿದ್ದು ಬೆಳಗಾವಿಯ ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದು..

ಈ ಮೇಳವನ್ನು ಇಂದು ದಿನಾಂಕ 26/12/2027ರಂದು ಬೆಳಿಗ್ಗೆ 10ಗಂಟೆಗೆ ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಿದ್ದಾರೆ, ಉದ್ಘಾಟನೆ ಮಾಡಿ ಮಾತನಾಡಿದ ಮುಖ್ಯಮಂತ್ರಿಗಳು ಸಾರ್ವಜನಿಕರು ಇಲ್ಲಿ ಆಗಮಿಸಿ ಈ ಮೇಳದ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕು, ಈ ಮೂಲಕ ರಾಜ್ಯದ ಸ್ವಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳ ಹಾಗೂ ಖಾದಿ ಮಾರಾಟಕ್ಕೆ ಬೆಂಬಲ ಒದಗಿಸಬೇಕೆಂದು ಹೇಳಿದ್ದಾರೆ..

ವರದಿ ಪ್ರಕಾಶ ಬಸಪ್ಪ ಕುರಗುಂದ..