ಬೆಳಗಾವಿಯಲ್ಲಿ ಸುಮಂಗಲಿಯರಿಂದ ಭಕ್ತಿಪೂರ್ವಕ ವಟಸಾವಿತ್ರಿ ವೃತ್ತ ಆಚರಣೆ..
ಬೆಳಗಾವಿ : ಪ್ರತಿ ವರ್ಷ ಜ್ಯೇಷ್ಠ ಮಾಸದ ಹುಣ್ಣಿಮೆ ತಿಥಿಯಂದು ಆಗಮಿಸುವ ವಟ ಪೂರ್ಣಿಮಾ ಎಂದು ಕರೆಯಲ್ಪಡುವ ವಟ ಸಾವಿತ್ರಿ ವ್ರತದ ನಿಮಿತ್ತ ಮಂಗಳವಾರ ಇಲ್ಲಿನ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿರುವ ಹನುಮಂತ ದೇವಸ್ಥಾನ ಹಾಗೂ ಹಿಂಬದಿಯ ಅರಳಿ ಮರಕ್ಕೆ ಸುಮಂಗಲಿಯರು ವಿಶೇಷ ಪೂಜೆ ಸಲ್ಲಿಸಿದರು.

ಮಹಿಳೆಯರು ತನ್ನ ಪತಿಯ ದೀರ್ಘಾಯುಷ್ಯಕ್ಕಾಗಿ ಮತ್ತು ದೇವರ ಆಶೀರ್ವಾದಕ್ಕಾಗಿ ಪೂಜೆ ಹಾಗೂ ಉಪವಾಸ ವೃತವನ್ನು ಮಾಡುತ್ತಾರೆ. ಈ ವೃತವನ್ನು ಹೆಚ್ಚಾಗಿ ಆಯಾ ಕುಟುಂಬದ ವಿವಾಹಿತ ಸ್ತ್ರೀಯರು ಆಚರಿಸುತ್ತಾರೆ. ಈ ದಿನವು ವಿವಾಹಿತ ಮಹಿಳೆಯರಿಗೆ ವರ್ಷದ ಅತ್ಯಂತ ಮಂಗಳಕರ ದಿನವಾಗಿದೆ ಎಂದು ಹೇಳಲಾಗಿದೆ.

ವಟ ಪೂರ್ಣಿಮಾ ವೃತದ ದಿನವು ವಿವಾಹಿತ ಮಹಿಳೆಯರು ಆಚರಿಸುವ ವ್ರತವಾಗಿದ್ದು, ವಿವಾಹಿತ ಮಹಿಳೆಯರು ಮೂರು ದಿನಗಳ ಕಾಲ ಈ ಉಪವಾಸ ವ್ರತವನ್ನು ಆಚರಿಸುತ್ತಾರೆ. ಅವರು ಹಬ್ಬಕ್ಕೆ ಎರಡು ದಿನ ಮುಂಚಿತವಾಗಿ ಪೂಜೆ ಹಾಗೂ ವ್ರತವನ್ನು ಪ್ರಾರಂಭಿಸುತ್ತಾರೆ. ವಟ ಅಥವಾ ಆಲದ ಮರವು ವಟ ಪೂರ್ಣಿಮೆಗೆ ಮಹತ್ವವನ್ನು ಹೊಂದಿದೆ. ಆಲದ ಮರವು ಹಿಂದೂ ಧರ್ಮದ ಮೂರು ಸರ್ವೋಚ್ಚ ದೇವರುಗಳನ್ನು ಪ್ರತಿನಿಧಿಸುತ್ತದೆ. ತ್ರಿಮೂರ್ತಿ ದೇವರುಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಎಂಬುದು ಸುಮಂಗಲಿಯರ ನಂಬಿಕೆಯಾಗಿದೆ.
ವರದಿ ಪ್ರಕಾಶ್ ಬಸಪ್ಪ ಕುರಗುಂದ..