ಬೆಳಗಾವಿಯಲ್ಲಿ ಸ್ವಚ್ಛತಾ ಓಟಕ್ಕೆ ಡಿಸಿಎಂ ಡಿಕೆ ಶಿವಕುಮಾರರಿಂದ ಚಾಲನೆ..

ಬೆಳಗಾವಿಯಲ್ಲಿ ಸ್ವಚ್ಛತಾ ಓಟಕ್ಕೆ ಡಿಸಿಎಂ ಡಿಕೆ ಶಿವಕುಮಾರರಿಂದ ಚಾಲನೆ..

ಬೆಳಗಾವಿ : ನಗರಾಭಿವೃದ್ಧಿ ಇಲಾಖೆ ಮತ್ತು ಪೌರಾಡಳಿತ ನಿರ್ದೇಶನಾಲಯದ ವತಿಯಿಂದ ನಗರದಲ್ಲಿ ಬುಧವಾರ ಮುಂಜಾವಿನಲ್ಲಿ ಆಯೋಜಿಸಿದ್ದ ‘ಸ್ವಚ್ಛತಾ ಓಟ’ಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ಕೊಟ್ಟರು.

ತದನಂತರ ಮಾತನಾಡಿದ ಅವರು ‘ಇಲ್ಲಿ‌ನ ಕೆರೆ, ಗಿಡಮರಗಳು ಮತ್ತು ಪರಿಸರ ನೋಡಿದಾಗ, ಬೆಂಗಳೂರು ಮಹಾನಗರಕ್ಕಿಂತ ಬೆಳಗಾವಿಯೇ ಸುಂದರವಾಗಿದೆ ಎಂದೆನಿಸುತ್ತದೆ. ಇಲ್ಲಿ ಸ್ವಚ್ಛತೆ ಕಾಪಾಡಲು ಸರ್ಕಾರ ವಿವಿಧ ಯೋಜನೆಗಳಡಿ ಸಾಕಷ್ಟು ಅನುದಾನ ನೀಡಿದೆ. ಸ್ವಚ್ಛತೆ ಕಾಪಾಡುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಹೇಳಿದರು.

‘ಇದು ರಾಜ್ಯದ ಎರಡನೇ ರಾಜಧಾನಿ. ಮುಂದೆ ಇದಕ್ಕೆ ದೊಡ್ಡ ಭವಿಷ್ಯವಿದೆ. ಎಲ್ಲರೂ ಸೇರಿಕೊಂಡು ಬೆಳಗಾವಿಯನ್ನು ಸ್ವಚ್ಛ ನಗರವನ್ನಾಗಿ ಮಾಡೋಣ’ ಎಂದು ಕರೆಕೊಟ್ಟರು.

ನಗರಾಭಿವೃದ್ಧಿ ಸಚಿವ ಬೈರತಿ‌ ಸುರೇಶ, ‘ಸ್ವಚ್ಛತೆಯೇ ದೇವರು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಇಡೀ ನಗರ ಸ್ವಚ್ಛವಾಗಿ ಇರಬೇಕು ಎಂದರೆ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ’ ಎಂದು ಅಭಿಪ್ರಾಯಪಟ್ಟರು.

‘ನಮ್ಮ ಮನೆಯನ್ನು ಸ್ವಚ್ಛವಾಗಿ ಇರಿಸಿಕೊಳ್ಳುವಂತೆ ರಸ್ತೆಗಳಲ್ಲೂ ಸ್ವಚ್ಛತೆ ಕಾಪಾಡಬೇಕು, ಎಲ್ಲೆಂದರಲ್ಲಿ ಕಸ ಎಸೆಯಬಾರದು’ ಎಂದು ಕರೆಕೊಟ್ಟರು.
ಸಚಿವ ರಹೀಂ ಖಾನ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಆಸಿಫ್ ಸೇಠ್, ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ ಮತ್ತಿತರರು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *