ಬೆಳಗಾವಿಯಲ್ಲಿ ಹುಲಿಹೆಜ್ಜೆಯ ಊಹಾಪೋಹಕ್ಕೆ ತೆರೆಯೇಳೆದ ಡಿಸಿಎಫ್ ಎಸ್ ಕೆ ಕಲ್ಲೋಳಿಕರ್..

ಬೆಳಗಾವಿಯಲ್ಲಿ ಹುಲಿಹೆಜ್ಜೆಯ ಊಹಾಪೋಹಕ್ಕೆ ತೆರೆಯೇಳೆದ ಡಿಸಿಎಫ್ ಎಸ್ ಕೆ ಕಲ್ಲೋಳಿಕರ್..

ಬೆಳಗಾವಿ : ಮಂಗಳವಾರ ಬೆಳಗಾವಿಯ ನಾಗರಿಕರನ್ನು ಗಾಬರಿಗೊಳಿಸುವ ಸುದ್ದಿಯೊಂದು ಸದ್ದು ಮಾಡುತ್ತಿದ್ದು, ನಗರದ ಹಿಂಡಾಲ್ಕೋ ಪಾಕ್ಟರಿ ಆವರಣದಲ್ಲಿ ಹುಲಿ ಕಾಣಿಸಿದೆ ಎಂಬ ಸುದ್ದಿ ಎಲ್ಲರ ಆತಂಕಕ್ಕೆ ಕಾರಣವಾಗಿತ್ತು..

ಈ ವಿಷಯವಾಗಿ ಸ್ಪಷ್ಟೀಕರಣ ನೀಡಿದ ಬೆಳಗಾವಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಸ್ ಕೆ ಕಲ್ಲೋಳಿಕರ ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದ್ದು, ಬೆಳಗಾವಿ ನಗರದಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು ಸುಳ್ಳು, ಸುದ್ದಿ ತಿಳಿದ ಮೇಲೆ ನಮ್ಮ ಅರಣ್ಯ ಸಿಬ್ಬಂದಿಗಳು ಅರಣ್ಯ ಪ್ರದೇಶದ ಶೋಧಕಾರ್ಯ ನಡೆಸಿದ್ದು, ತಪಾಸಣೆಯಲ್ಲಿ ಅಂತಹ ಯಾವುದೇ ಕುರುಹುಗಳು ಕಂಡು ಬಂದಿಲ್ಲ ಎಂಬ ಮಾಹಿತಿ ನೀಡಿದ್ದಾರೆ..

ಬೆಳಿಗ್ಗೆಯಿಂದ ಹುಲಿಯ ಚಲನ ವಲನದ ಯಾವುದೇ ಸಾಕ್ಷಿಗಳು ಅರಣ್ಯ ಸಿಬ್ಬಂದಿಗೆ ದೊರೆತಿಲ್ಲ, ಆದ್ದರಿಂದ ಇದು ಊಹಾಪೋಹ ಅಷ್ಟೇ, ಜನತೆ ಯಾವುದೇ ಆತಂಕ ಪಡುವ ಹಾಗಿಲ್ಲ, ನಾಗರಿಕರು ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂಬ ಮನವಿ ಮಾಡಿದ್ದಾರೆ..

ಬೇರೆ ಯಾವುದಾದರೂ ವನ್ಯ ಪ್ರಾಣಿಯ ಚಲನ ವಲನಗಳು ಕಂಡುಬಂದಿದ್ದರೆ ಅದು ಕಾಡಿನತ್ತ ಬೆಳಗ್ಗೆನೇ ಹೋಗುವ ಎಲ್ಲಾ ಸಾಧ್ಯತೆಗಳೂ ಇದೇ, ಅದೇ ರೀತಿ ಅರಣ್ಯ ಸಿಬ್ಬಂದಿ ತಪಾಸಣೆ ಕೂಡಾ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.

ವರದಿ ಪ್ರಕಾಶ್ ಕುರಗುಂದ..