ಬೆಳಗಾವಿಯಲ್ಲಿ 2023ರ ಸಂಭ್ರಮದ ವಿಶ್ವಕರ್ಮ ಜಯಂತ್ಯೋತ್ಸವ..
ಸಹಸ್ರ ವರ್ಷಗಳ ಹಿಂದೆಯೇ ಪ್ರಸಿದ್ದಿ ಪಡೆದ ವಿಶ್ವಕರ್ಮ ಸಮುದಾಯ ಇಂದು ಹಿಂದುಳಿಯಬಾರದು..
ಸಚಿವ ಸತೀಶ ಜಾರಕಿಹೊಳಿ..

ಬೆಳಗಾವಿ : ರವಿವಾರ ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಅರ್ಥಪೂರ್ಣವಾದ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮ ಜರುಗಿದೆ..

ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗಿಯಾಗಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು, ಈಗ ಆಧುನಿಕ ವಿನ್ಯಾಸವನ್ನು ನಾವು ಎಲ್ಲಾ ಕಡೆಗೆ ನೋಡುತ್ತೆವೆ ಆದರೆ ಜಗತ್ತಿಗೆ ಮೊಟ್ಟಮೊದಲು ಕಲೆಯನ್ನು ಪರಿಚಯ ಮಾಡಿದ ಸಮುದಾಯ ಎಂದರೆ ಅದು ವಿಶ್ವಕರ್ಮ ಸಮುದಾಯ, ಸಾವಿರ ವರ್ಷದ ಹಿಂದೆ ಜಗತ್ತಿಗೆ ಕಲೆಯ ಬೆಳಕು ನೀಡಿದವರು ಈ ಸಮುದಾಯದವರು.
ಪುರಾತನ ಕಾಲದಲ್ಲಿಯೇ ಸಮಾಜಕ್ಕೆ ಅವರ ಕೊಡುಗೆ ತುಂಬಾ ಇದೆ, ಆದರೆ ಈಗ ಈ ಸಮುದಾಯ ಹಿಂದುಳಿಯಲು ಕಾರಣ ಏನು ಎಂದು ಅರ್ಥ ಮಾಡಿಕೊಳ್ಳಿ, ಇದಕ್ಕೆ ಕಾರಣ ಏನು, ಹೇಗೆ ಹೋಗಲಾಡಿಸಬೇಕು, ಎಂದು ತಿಳಿಯುವುದು ತುಂಬಾ ಅವಶ್ಯಕ ಎಂದರು..

ತಮ್ಮ ಕಲೆ, ಅಸ್ತಿತ್ವ ಉಳಿಯಬೇಕಾದರೆ ತಾವು ಗಟ್ಟಿಯಾಗಿ ನಿಲ್ಲಬೇಕು, ಸಮುದಾಯದ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಿ, ಅದರಿಂದ ಅವರು ಬದುಕಿ, ತಮ್ಮ ಸಮುದಾಯವನ್ನು ಕೂಡಾ ಉಳಿಸುತ್ತಾರೆ,
ವಿಶ್ವಕರ್ಮ ಸಮುದಾಯಕ್ಕೆ ನ್ಯಾಯ ಸಲ್ಲಿಸುವ ಕಾರ್ಯ ಯಾವಾಗಲೂ ನಡೆಯಬೇಕು, ಬಸವಣ್ಣವರು ಮೌನೇಶ್ವರರ ವಿಚಾರಗಳು ಒಂದೇ ಆಗಿದ್ದವು ಅವುಗಳನ್ನು ತಾವು ಅರಿಯಬೇಕು, ಸಿದ್ದರಾಮಯ್ಯ ಅವರ ಸರ್ಕಾರ ನಿಮ್ಮ ಸಮುದಾಯಕ್ಕೆ ಅನೇಕ ಯೋಜನೆ ನಿಡಿದೆ, ಎಲ್ಲಾ ಇಲಾಖೆಗಳಿಂದ ಈ ಸಮುದಾಯಕ್ಕೆ ನ್ಯಾಯ ನೀಡುವ ಅನೇಕ ಯೋಜನೆಯನ್ನು ನಮ್ಮ ಸರ್ಕಾರ ತಂದಿದೆ ಎಂದರು..

ಇನ್ನು ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಚಿವರಾದ ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕ ರಾಜು ಸೇಠ, ಪಾಲಿಕೆ ಆಯುಕ್ತರಾದ ಅಶೋಕ್ ದುಡಗುಂಟಿ, ಅಪರ ಜಿಲ್ಲಾಧಿಕಾರಿಗಳಾದ ಹೋಣಕೆರಿ, ವಿದ್ಯಾವತಿ ಭಜಂತ್ರಿ, ಸಮಾಜದ ಮುಖಂಡರು, ಹಿರಿಯರು, ನೂರಾರು ಸಮುದಾಯದ ಬಾಂಧವರು ಭಾಗಿಯಾಗಿದ್ದರು.
ವರದಿ ಪ್ರಕಾಶ ಕುರಗುಂದ..