ಬೆಳಗಾವಿಯಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ 2024ರ ಸಮಾರೋಪ ಸಮಾರಂಭ..

ಬೆಳಗಾವಿಯಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ 2024ರ ಸಮಾರೋಪ ಸಮಾರಂಭ..

ಬುಧವಾರ ಕೆಎಲ್ಇ ಜಿರ್ಗೆ ಸಭಾಂಗಣದಲ್ಲಿ ಅದ್ದೂರಿ ಸಮಾರಂಭ..

ಬೆಳಗಾವಿ : 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಮಾರೋಪ ಸಮಾರಂಭವನ್ನು ಬುಧವಾರ ದಿನಾಂಕ 20/11/2024ರಂದು ನಗರದ ಕೆಎಲ್ಇ ಸಂಸ್ಥೆಯ ಡಾ ಜೀರ್ಗೆ ಸಭಾಂಗಣದಲ್ಲಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ ಅಧ್ಯಕ್ಷರಾದ ಜಿ ನಂಜನಗೌಡ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸೋಮವಾರ ದಿನಾಂಕ 18/11/2024ರಂದು ನಗರದ ಖಾಸಗಿ ಹೋಟೆಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷರು, 71ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಧ್ಯೇಯ, “ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಘಗಳ ಪಾತ್ರ” ಅದೇರೀತಿ ಉತ್ತಮ ವಿಶ್ವ ನಿರ್ಮಾಣ ಹಾದಿಗಾಗಿ ಹಾಗೂ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ” ಎಂಬ ವಿಷಯಗಳ ಬಗ್ಗೆ ಸಮಾರಂಭದಲ್ಲಿ ವಿಷಯ ಮಂಡನೆ ಆಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಹಕಾರ ಸಪ್ತಾಹ ಸಮಾರೋಪ ಸಮಾರಂಭವನ್ನು ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾ ಮಂಡಳಿ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ, ಇವರ ನೇತೃತ್ವದಲ್ಲಿ ಹಾಗೂ ಎಲ್ಲಾ ರೀತಿಯ ಸಹಕಾರ ಸಂಘಗಳ ಸಹಯೋಗದಲ್ಲಿ ಆಚರಣೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ..

ಬುಧವಾರ 20 ನೆಯ ತಾರಿಕಿನಂದು ನಡೆಯುವ ಸಮಾರಂಭಕ್ಕೆ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಸಹಕಾರ ದ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡುತ್ತಿದ್ದು, ಜಿಲ್ಲೆಯ ಮತ್ತೊಬ್ಬ ಸಚಿವೆಯರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ವಸ್ತು ಪ್ರದರ್ಶನದ ಮಳಿಗೆ ಉದ್ಘಾಟನೆ ಮಾಡುವರು, ಸಮಾರಂಭದ ಉದ್ಘಾಟನೆಯನ್ನು ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ಮಾಡುತ್ತಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಬೆಳಗಾವಿ ಉತ್ತರದ ಶಾಸಕರಾದ ಆಸಿಫ್ (ರಾಜು) ಸೇಠ್ ವಹಿಸಲಿದ್ದಾರೆ..

ಈ ಸಮಾರೋಪ ಸಮಾರಂಭದಲ್ಲಿ ಸಹಕಾರಿಗಳಿಗೆ ಸಹಕಾರಿ ಸಂಸ್ಥೆಗಳಿಗೆ ಸನ್ಮಾನ, ಸಹಕಾರ ಚಳುವಳಿಯ ಪ್ರಗತಿಯ ಪಕ್ಷಿನೋಟ, ಸಹಕಾರ ಕ್ಷೇತ್ರದ ಪ್ರಗತಿ, ವಿವಿಧ ಕ್ಷೇತ್ರಗಳ ಸಹಕಾರಿ ಸಂಘಗಳ ಪರಿಚಯ, ಸೌಹಾರ್ದ ಸಹಕಾರಿ, ಸಂಯುಕ್ತ ಸಹಕಾರಿ ಕಾರ್ಯಚಟುವಟಿಕೆಗಳ ಬಗ್ಗೆ ವಿವರವಾದ ಮಾಹಿತಿ ಹಂಚಿಕೊಳ್ಳಲಾಗುತ್ತದೆ ಎಂದಿದ್ದಾರೆ.

ಈ ಸುದ್ದಿಗೋಷ್ಠಿಯಲ್ಲಿ ಜಿ ನಂಜನಗೌಡ, ಜಗದೀಶ್ ಕವಟಗಿಮಠ, ಅಪ್ಪಾಸಾಹೇಬ ಮಾರುತಿ ಕುಲಗುಡೆ, ಬಿ ಡಿ ಪಾಟೀಲ್, ಸುರೇಶ್ ಗೌಡ, ರವೀಂದ್ರ ಪ ಪಾಟೀಲ, ಸುರೇಶ್ ಅಳಗುಂಡಿ, ವಿ ಎಸ್ ಶ್ರೀಕಾಂತ, ಹಾಲಪ್ಪ ಜಗ್ಗಿನವರ, ಬಸವರಾಜ ಹೊಂಗಲ ಮತ್ತಿತರರು ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ.