ಬೆಳಗಾವಿಯ ಎಸ್ಪಿ ಸಂಜೀವ್ ಪಾಟೀಲ್ ಅವರ ದೀಡಿರ್ ವರ್ಗಾವಣೆ..
ಬೆಳಗಾವಿ : ನಗರ ಕಂಡ ಪ್ರಾಮಾಣಿಕ ಹಾಗೂ ದಕ್ಷ ಪೊಲೀಸ್ ಅಧಿಕಾರಿಯಾದ ಸಂಜೀವ್ ಪಾಟೀಲ್ ಅವರ ವರ್ಗಾವಣೆಯ ಆದೇಶ ರಾತ್ರಿ ಹೊರಬಿದ್ದಿದ್ದು, ಜಿಲ್ಲೆಯ ಜನತೆಗೆ ತುಂಬಾ ಬೇಸರದ ಸಂಗತಿಯಾಗಿದೆ..
ಜಿಲ್ಲೆಯಲ್ಲಿ ಎಂತಹದೇ ಅಪರಾಧ ಪ್ರಕರಕವಾದರೂ ತಮ್ಮ ಕರ್ತವ್ಯಪ್ರಜ್ಞೆಯಿಂದ ಕಡಿಮೆ ಅವಧಿಯಲ್ಲಿ ಭೇದಿಸುವ, ದಕ್ಷ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದು ಬೆಳಗಾವಿಯಂತಹ ದೊಡ್ಡ ಜಿಲ್ಲೆಗೆ ಅವರ ಸೇವೆ ಇನ್ನು ಬೇಕಾಗಿತ್ತು ಎಂಬ ಅಭಿಪ್ರಾಯವಿದೆ..
ಸಂಜೀವ್ ಪಾಟೀಲ್ ಅವರನ್ನು ರಾಜ್ಯ ಸರ್ಕಾರ ಬೆಂಗಳೂರು ಮಹಾನಗರದ ಉಪ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದು, ಬೆಳಗಾವಿ ಜಿಲ್ಲೆಗೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಡಾ ಭೀಮಾಶಂಕರ ಗುಳೇದ ಅವರನ್ನು ನೇಮಕ ಮಾಡಲಾಗಿದ್ದು, ಇವರು ಕರ್ನಾಟಕದ 2012ರ ಭ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದರು..
ವರದಿ ಪ್ರಕಾಶ ಕುರಗುಂದ…