ಬೆಳಗಾವಿಯ ತುಮ್ಮರಗುದ್ದಿ ಗ್ರಾಮದಲ್ಲಿ ಅಪ್ಪುವಿನ ಅಭಿಮಾನದ ದ್ವೀತಿಯ ಪುಣ್ಯಸ್ಮರಣೆ…

ಬೆಳಗಾವಿಯ ತುಮ್ಮರಗುದ್ದಿ ಗ್ರಾಮದಲ್ಲಿ ಅಪ್ಪುವಿನ ಅಭಿಮಾನದ ದ್ವೀತಿಯ ಪುಣ್ಯಸ್ಮರಣೆ..

ಅಭಿಮಾನಿಗಳ ಮನದಲ್ಲಿ ಅಪ್ಪು ಅಜರಾಮರ…

ಗ್ರಾಮದ ಪ್ರತಿ ಮನೆಯಲ್ಲಿಯೂ ಅಪ್ಪುವಿನ ಆರಾಧನೆ…

ಬೆಳಗಾವಿ : ರವಿವಾರ ದಿನಾಂಕ 29/10/23ರಂದು ನಾಡಿನ ಜನತೆಯ ಮನದಲ್ಲಿ ದುಃಖ ಮಡುಗಟ್ಟಿ, ಕಣ್ಣಲ್ಲಿ ಕಣ್ಣೀರು ತುಂಬಿಕೊಂಡ ಸನ್ನಿವೇಶ ಸಾಮಾನ್ಯವಾಗಿತ್ತು, ಕಾರಣ ಕನ್ನಡ ರತ್ನ, ನಗುಮುಖದ ಒಡೆಯ ಡಾ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಎರಡು ವರ್ಷಗಳು ಕಳೆದ ದಿನವಿದು..

ಅದೇ ಕಾರಣಕ್ಕೆ ಬೆಳಗಾವಿ ಜಿಲ್ಲೆಯ ತುಮ್ಮರಗುದ್ದಿ ಗ್ರಾಮದಲ್ಲಿ ಮೊದಲಿನಿಂದಲೂ ಡಾ ರಾಜ್ ಕುಟುಂಬದ ಮೇಲೆ ಅಪಾರ ಅಭಿಮಾನ ಇದ್ದು, ಆ ಅಭಿಮಾನ ಇಂದಿಗೂ ಕೂಡ ಪ್ರತಿ ಮನೆ, ಮನದಲ್ಲಿಯೂ ಕೂಡಾ ಹಚ್ಚ ಹಸಿರಾಗಿದೆ,,

ಪ್ರೀತಿಯ, ಅಭಿಮಾನದ ಅಪ್ಪುವಿನ ದ್ವಿತೀಯ ಪುಣ್ಯಸ್ಮರಣೆ ಆಚರಣೆಗಾಗಿ ರವಿವಾರ ಇಡೀ ಗ್ರಾಮವೇ ಸಿದ್ಧವಾಗಿ, ಪ್ರತಿ ಮನೆಯ ಮುಂದು ಸ್ವಚ್ಛಗೊಳಿಸಿ, ರಂಗೋಲಿ ಹಾಕಿ, ಅಪ್ಪುವಿನ ಇಷ್ಟದ ತಿಂಡಿ ತಿನಿಸು ತಯಾರಿಸಿ, ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಮಿಸಿ, ತಮ್ಮ ಅಭಿಮಾನದ ಆನಂದ ಬಾಷ್ಪ ಅರ್ಪಿಸಿದರು..

ಗ್ರಾಮದ ಬಸ್ ನಿಲ್ದಾಣದ ಹತ್ತಿರ ವಿಶೇಷವಾದ ಅಪ್ಪು ಬಸ್ ನಿಲ್ದಾಣದಲ್ಲಿ, ಸಂಜೆ ಜಮೆಯಾದ ಗ್ರಾಮದ ನೂರಾರು ಹಿರಿಯರು, ಯುವಕರು, ಮಕ್ಕಳು, ಮಹಿಳೆಯರು ಒಟ್ಟಿಗೆ ಸೇರಿ, ಅಪ್ಪುವಿನ ಪುಣ್ಯಸ್ಮರಣೆ ದಿನದಂದು ಭಾಗಿಯಾಗಿ ಅಪ್ಪುವಿನ ಅಭಿಮಾನದ ನಮನ ಸಲ್ಲಿಸಿದರು..

ಮನೆಗಳಲ್ಲಿ ಪೂಜೆ ಮಾಡಿದ ಅಭಿಮಾನಿಗಳು, ಪುನೀತ್ ಸ್ಮರಣೆ ಮಾಡಿ, ಈ ಅಭಿಮಾನ, ಗೌರವ, ಪುನೀತ್ ಮೇಲಿನ ಪ್ರೀತಿ, ಯಾವತ್ತೂ ಹೀಗೆ ಇರುತ್ತದೆ, ಅಪ್ಪು ನಮ್ಮ ಮನೆ ಮಗ, ನಮ್ಮ ಅಣ್ಣಾ, ಅವರು ನಮ್ಮ ಜೊತೆಗೆ ಇದ್ದಾರೆ ಎಂಬ ತಮ್ಮ ಅಭಿಪ್ರಾಯ ಹಂಚಿಕೊಂಡರು..

ಇನ್ನು ಈ ವಿಶೇಷ ಕಾರ್ಯಕ್ರಮದಲ್ಲಿ ಮಾರಿಹಾಳ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯಾದ ಚಂದ್ರಶೇಖರ, ಉದ್ಯಮಿಯಾದ ರಮೇಶ ಬಸರಿಮರದ, ರಾಜ್ ಮನೆತನದ ಅಪ್ಪಟ ಅಭಿಮಾನಿ ಹಾಗೂ ಜಿಲ್ಲಾ ಶಿವರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರಾದ ಶೇಖರ ಕಾಲೇರಿ, ಸುಭಾಸ ಸುತಗಟ್ಟಿ, ಶಿವಾಜಿ ತಳವಾರ, ಯಲ್ಲಪ್ಪ ಯಲ್ಲಪ್ಪ ಯದ್ದಲಗುಡ್ದ, ರಮೇಶ ಶಿನಗಿ, ಮಲ್ಲಪ್ಪ ಕಾಂವಿ, ರಮೇಶ ಸುಲದಾಳ,

ಕಲ್ಲಪ್ಪ ಮಾಲಂಗಿ, ಶಿವಶಂಕರ ಪಾಟೀಲ್, ಹಣಮಂತ ಕಪರಟ್ಟಿ
ಬಸವರಾಜ್ ಹೊಸುರಿ, ಯಲ್ಲಪ್ಪ ಸುಲದಾಳ, ಯಲ್ಲನ್ನ ನಾಯಿಕ, ಮತ್ತಿತರ ಸ್ನೇಹಿತರು ಅಭಿ ಮಾನಿಗಳು ಭಾಗಿಯಾಗಿದ್ದರು..

ವರದಿ ಪ್ರಕಾಶ ಕುರಗುಂದ..