ಬೆಳಗಾವಿಯ ನಾಗರಿಕರು ವಾರ್ಡ ಸಮಿತಿಯ ಕಾರ್ಯಕ್ಕೆ ಕೈಜೋಡಿಸಿ…

ಬೆಳಗಾವಿಯ ನಾಗರಿಕರು ವಾರ್ಡ ಸಮಿತಿಯ ಕಾರ್ಯಕ್ಕೆ ಕೈಜೋಡಿಸಿ..

ನಗರದ ಅಭಿವೃದ್ಧಿಯಲ್ಲಿ ನಾವು, ನೀವು ಎಲ್ಲರೂ ಭಾಗಿಯಾಗೋಣ..

ಪಾಲಿಕೆಯಲ್ಲಿ ಸಿಗುವ ಅರ್ಜಿ ಭರ್ತಿ ಮಾಡಿ, ವಾರ್ಡ ಸಮಿತಿಯ ಸದಸ್ಯರಾಗಿ..

ಪ್ರೇಮ ಚೌಗುಲೆ ಇಂಗಿತ..

ಬೆಳಗಾವಿ : ಗುರುವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಬೆಳಗಾವಿ ನಗರದ ವಾರ್ಡ ಸಮಿತಿ ರಚನಾ ತಂಡದ ಸದಸ್ಯರು ವಾರ್ಡ ಸಮಿತಿ ರಚನೆಯ ಕುರಿತಾಗಿ ತಮ್ಮ ಯೋಜನೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಬೆಳಗಾವಿ ನಾಗರಿಕರು ಆದಷ್ಟು ಬೇಗ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿ, ಈ ವಾರ್ಡ ಸಮಿತಿ ಕಾರ್ಯರೂಪಕ್ಕೆ ಬರುವಲ್ಲಿ ಸಹಕರಿಸಬೇಕು ಎಂಬ ಮನವಿ ಮಾಡಿಕೊಂಡರು..

ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾರ್ಡ ಸಮಿತಿ ರಚನಾ ತಂಡದ ಸದಸ್ಯರಾದ ಪ್ರೇಮ್ ಚೌಗುಲಾ ಅವರು, ಬೆಳಗಾವಿ ಪಾಲಿಕೆಯಲ್ಲಿ 58 ವಾರ್ಡುಗಳಲ್ಲಿ ಇದ್ದು, ಪ್ರತಿ ವಾರ್ಡಿಗೂ ಹತ್ತು ಸದಸ್ಯರನ್ನು ನೇಮಕ ಮಾಡುವ ನಿಯಮ ಇದ್ದು, ಡಿಸೆಂಬರ 05ರವರೆಗೆ ಅರ್ಜಿ ತುಂಬಬಹುದು, ಪಾಲಿಕೆಯಲ್ಲಿ ಅರ್ಜಿ ನಮೂನೆಗಳು ದೊರೆಯುತ್ತಿದ್ದು, ಆದಷ್ಟು ಬೇಗ ಬೆಳಗಾವಿಗರು ಸಮಿತಿ ಸದಸ್ಯರಾಗಲು ಅರ್ಜಿ ತುಂಬಿ ಪಾಲಿಕೆಗೆ ನೀಡಬೇಕು ಎಂಬ ಮನವಿ ಮಾಡಿದರು..

ಸದಸ್ಯರನ್ನು ಅವರ ಸಾಧನೆ ನೋಡಿ, ಆಯುಕ್ತರ ಮುಖಂಡತ್ವದಲ್ಲಿ ಆಯ್ಕೆ ಮಾಡಲಾಗುತ್ತಿದ್ದು, ಸರ್ಕಾರದ ಅನುದಾನದ ಸರಿಯಾದ ಬಳಕೆ ಹಾಗೂ ಸಾರ್ವಜನಿಕರ ವಸ್ತುನಿಷ್ಠ ಸಮಸ್ಯೆಗಳನ್ನು ಬಗೆಹರಿಸಲು ಈ ವಾರ್ಡ ಸಮಿತಿಯ ರಚನೆ ತುಂಬಾ ಮುಖ್ಯವಿದೆ ಎಂದ ಅವರು, ಬೆಳಗಾವಿ ನಗರದ ಸರ್ವಾಂಗೀಣ ಅಭಿವೃದ್ದಿ ದೃಷ್ಟಿಯಿಂದ ನಾವೆಲ್ಲರೂ ಒಗ್ಗಟ್ಟಾಗಿ ಸಮಿತಿ ರಚನೆ ಮಾಡೋಣ ಎಂದರು..

ಇನ್ನು ವಾರ್ಡ ಸಮಿತಿಯ ರಚನೆ ನಿಧಾನಗತಿಯಲ್ಲಿ ಆಗುತ್ತಿದ್ದು, ಅಧಿಕಾರಿಗಳು ಅದಕ್ಕೆ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ ಎಂಬ ಮಾತಿಗೆ ಉತ್ತರಿಸಿದ ಕನ್ನಡಪರ ಸಂಘಟನೆ ಪ್ರಮುಖರಾದ ಅಭಿಲಾಷ್ ಅವರು, ಇಲ್ಲಿ ಪಾಲಿಕೆ ಅಧಿಕಾರಿಗಳಿಗೆ, ನಗರ ಸೇವಕರಿಗೆ ಈ ವಾರ್ಡ ಸಮಿತಿ ರಚನೆ, ಈ ಸದಸ್ಯರು ಯಾರೂ ಬೇಕಾಗಿಲ್ಲ, ಇವರು ಆಯ್ಕೆ ಆದರೆ, ಅಭಿವೃದ್ದಿಯ ಕಾರ್ಯದ ಬಗ್ಗೆ ಪ್ರಶ್ನೆ ಮಾಡುತ್ತಾರೆ ಎಂದು, ಈ ವಾರ್ಡ ಸಮಿತಿ ರಚನೆಯ ಕಾರ್ಯವನ್ನು ಮುಂದೂಡುತ್ತಾ ಬಂದಿದ್ದಾರೆ ಎಂದು ಖಾರವಾಗಿ ತಮ್ಮ ಅಭಿಪ್ರಾಯ ತಿಳಿಸಿದರು..

ಈ ಸುದ್ದಿಗೋಷ್ಠಿಯಲ್ಲಿ ನಗರದ ಕನ್ನಡ ರಕ್ಷಣಾ ವೇದಿಕೆಯ ಸದಸ್ಯರು, ಮಾಜಿ ಸೈನಿಕ ಸಂಘದ ಸದಸ್ಯರು, ನ್ಯಾಯವಾದಿಗಳು, ಸಮಾಜ ಸೇವಕರು, ಉದ್ದಿಮೆದಾರರು ಹಾಗೂ ಜನಸಾಮಾನ್ಯರು ಭಾಗಿಯಾಗಿದ್ದರು..

ವರದಿ ಪ್ರಕಾಶ ಕುರಗುಂದ..