ಬೆಳಗಾವಿಯ ಪ್ರಯತ್ನ ಸಂಘಟನೆಯಿಂದ ಸಮಾಜಮುಖಿ ಕಾರ್ಯ..
ಸರ್ಕಾರಿ ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ಸೌಕರ್ಯಕ್ಕೆ ಸಹಾಯ..
ಬೆಳಗಾವಿ : ಬುಧವಾರ ದಿನಾಂಕ 30/01/2024ರಂದು ಬೆಳಗಾವಿಯ ಚನ್ನಮ್ಮ ನಗರದಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ಕುಡಿಯುವ ನೀರಿನ ಟ್ಯಾಂಕ್ ಖರೀದಿಸಲು 15, ಸಾವಿರ ರೂಪಾಯಿ ಹಣವನ್ನು ದೇಣಿಗೆ ನೀಡುವುದರ ಮೂಲಕ ಅರ್ಥಪೂರ್ಣ ಕಾರ್ಯಕ್ಕೆ ನಿದರ್ಶನವಾಗಿದ್ದಾರೆ..

ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳ ಸ್ಥಿತಿಗತಿಯನ್ನು ಅರಿತು, ಅವರಿಗೆ ಅವಶ್ಯಕವಿರುವ, ಹಾಗೂ ಅವರ ಆರೋಗ್ಯ, ವಿಧ್ಯಾಭ್ಯಾಸಕ್ಕೆ ಅನುಕೂಲಕರವಾದ ಅನೇಕ ಸೌಲಭ್ಯಗಳನ್ನು ಈ “ಪ್ರಯತ್ನ ಸಂಘಟನೆಯು” ಹಿಂದಿನಿಂದಲೂ ಒದಗಿಸುತ್ತಾ ಬಂದಿದ್ದು, ಸಮಾಜಕ್ಕೆ ಮಾದರಿ ಸಂಸ್ಥೆಯಾಗಿದೆ ಎನ್ನಬಹುದು..
ಇದೇ ಸಂದರ್ಭದಲ್ಲಿ ಸಂಘಟನೆ ಕಡೆಯಿಂದ ಶಾಲಾ ಮಕ್ಕಳಿಗೆ ಬಿಸ್ಕೆಟಗಳನ್ನು ವಿತರಿಸಲಾಯಿತು..

ಶಾಲೆಗೆ ಸಹಾಯ ನೀಡುವ ಈ ಸಂದರ್ಭದಲ್ಲಿ ಪ್ರಯತ್ನ ಸಂಘಟನೆಯ ಅಧ್ಯಕ್ಷರಾದ ಶಾಂತಾ ಆಚಾರ್ಯ, ಸದಸ್ಯರಾದ ಬೀನಾ, ಶೀಲಾ, ಆರತಿ ಕೆ, ಆರತಿ ಭಟ್, ಲತಾ, ಉಷಾ, ಪದ್ಮಾ, ಶ್ವೇತಾ, ವರದ, ಶುಭಾ ಕೆ, ಶುಭಾ ಹೆಗಡೆ, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು…
ವರದಿ ಪ್ರಕಾಶ ಕುರಗುಂದ..