ಬೆಳಗಾವಿಯ ಬಿಮ್ಸ್ ಕಾಲೇಜಿನಲ್ಲಿ ಸಡಗರದ ಗಣೇಶೋತ್ಸವ…

ಬೆಳಗಾವಿಯ ಬಿಮ್ಸ್ ಕಾಲೇಜಿನಲ್ಲಿ ಸಡಗರದ ಗಣೇಶೋತ್ಸವ..

ಪ್ರತಿ ದಿನ ವಿಶೇಷ ಕಾರ್ಯಕ್ರಮಗಳ ಮೆರಗು..

ಬೆಳಗಾವಿ : ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯು ತನ್ನ ವೈದ್ಯಕೀಯಶಿಕ್ಷಣ ಹಾಗೂ ಸೇವೆಯಿಂದ ರಾಜ್ಯ ಹಾಗೂ ಹೊರ ರಾಜ್ಯಗಳ ಬಡ ಜನತೆಯ ಮನಸ್ಸಿನಲ್ಲಿ ಹಚ್ಚು ಹಸಿರಾಗಿದ್ದು, ಇಲ್ಲಿರುವ ವಿದ್ಯಾರ್ಥಿಗಳು, ವೈದ್ಯ ಅಧ್ಯಾಪಕರು ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ, ಇದರ ಜೊತೆ ಆಧ್ಯಾತ್ಮಿಕ ಆಚರಣೆಗಳನ್ನು ಅತೀ ಶಿಸ್ತಿನಿಂದ, ಶೃದ್ಧಾ ಭಕ್ತಿಯಿಂದ ಮಾಡುತ್ತಾರೆ ಎಂಬುದಕ್ಕೆ ಈಗ ನಡೆಸುತ್ತಿರುವ ಗಣೇಶ ಹಬ್ಬವೇ ಸಾಕ್ಷಿಯಾಗಿದೆ…

ಶನಿವಾರ ದಿನಾಂಕ 17/09/2024 ರಂದು ಅತೀ ವಿಜೃಂಭಣೆಯಿಂದ, ಹಾಡು, ಕುಣಿತ, ವಾಧ್ಯಮೇಳಗಳೊಂದಿಗೆ ಗಣೇಶನನ್ನು ಸ್ವಾಗತ ಮಾಡಿಕೊಂಡ ಬಿಮ್ಸ್ ಬಳಗ, ಅತ್ಯಂತ ಶೃದ್ಧಾ ಭಕ್ತಿಯಿಂದ ಐದು ‌ದಿನಗಳ‌ಕಾಲ‌‌ ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಿದೆ..

ಪತ್ರಿ ದಿನವೂ ವಿಶೇಷ ಕಾರ್ಯಕ್ರಮಗಳನ್ನು ‌ಆಯೋಜಿಸಲಾಗಿದ್ದು ಭಜನೆ, ಕೀರ್ತನೆ ಪುರಾಣಗಳ ಪಠಣೆ, ಸತ್ಯ ನಾರಾಯಣ ‌ಪೂಜೆ, ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ‌ಹಮ್ಮಿಕೋಳ್ಳಲಾಗುತ್ತಿದೆ.

ಪತ್ರಿ ವರ್ಷದಂತೆ ಈ‌ ವರ್ಷವು ಹಬ್ಬವನ್ನು ‌ಅದ್ದೂರಿಯಾಗಿ‌ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಶುಂಭಕರನ ಆಗಮನದಿಂದ ಕಾಲೇಜಿನಲ್ಲಿ ‌ಹಬ್ಬದ ಕಲರವ, ಮೆರುಗು ಎಲ್ಲೆಡೆ ಎದ್ದು ಕಾಣುತ್ತಿದೆ.

ಡೋಲ್ ತಾಸಾ ಮೆರವಣಿಗೆಯ ಮೂಲಕ ಅದ್ದೂರಿಯಾಗಿ ಗಣಪನ ಪತ್ರಿಸ್ಥಾಪನೆ‌‌ ಮಾಡಲಾಗಿದ್ದು,
ಮಹಾಮಂಗರಾತಿ, ಭಜನೆಯ ‌‌ಮೂಲಕ‌‌‌ ಸಂಜೆ ಪೂಜೆಯನ್ನು ಮಾಡಲಾಯಿತು. ಪತ್ರಿ ದಿನವೂ ಕಾರ್ಯಕ್ರಮಗಳನ್ನು ಏರ್ಪಡಲಾಗಿದೆ‌, ಸತ್ಯನಾರಾಯಣ ಪೂಜೆ, ನಾಟಕ, ಹಾಡು ಕುಣಿತ ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದ್ದು, ಐದು ದಿನವೊ ಹಬ್ಬವನ್ನು ವಿಶೇಷವಾಗಿ ಆಚರಿಸಲು ಬಿಮ್ಸ್ ಆಡಳಿಯಾಧಿಕಾರಿಗಳ ಒಪ್ಪಿಗೆ ಪಡೆದು, ಸಿಬ್ಬಂದಿಗಳ ಸಹಕಾರದಿಂದ ಅತ್ಯಂತ ಸೊಗಸಾಗಿ ಆಚರಿಸಲು ಸಕಲ ಸಿದ್ಧತೆಯನ್ನು ಮಾಡಿಕೊಂಡು, ಅದರಂತೆಯೇ ಉತ್ತಮ ರೀತಿಯಲ್ಲಿ ಗಣೇಶ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ..

ಗಣೇಶೋತ್ಸವದ ಐದು ದಿನಗಳ ಈ ವಿಶೇಷ ಕಾರ್ಯಕ್ರಮಗಳಲ್ಲಿ ಬಿಮ್ಸ್ ನ ನಿರ್ದೇಶಕರಾದ ಡಾ.ಅಶೋಕ ಕುಮಾರ ಶೆಟ್ಟಿ, ಸಹಾಯಕ ಆಡಳಿತ ಅಧಿಕಾರಿಗಳಾದ ಸಿದ್ದು ಹುಲ್ಲೋಳಿ, ಕಾಲೇಜಿನ ಎಲ್ಲ ವಿಭಾಗಗಳ ಮುಖ್ಯಸ್ಥರು, ಭೋದಕ ಹಾಗೂ ಭೋದಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ‌ಬಾಗಿಯಾಗಿ, ತುಂಬಾ ಸಂತಸದಿಂದ ಗಣೇಶ ಹಬ್ಬದ ಆಚರಣೆ ಮಾಡುತ್ತಿದ್ದಾರೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..