ಬೆಳಗಾವಿಯ ಬೋಗಾರವೇಸನಲ್ಲಿ ಹಾಡುಹಗಲೇ ಕಾರ್ ಗ್ಲಾಸ್ ಒಡೆದು ಕಳ್ಳತನ..

ಬೆಳಗಾವಿಯ ಬೋಗಾರವೇಸನಲ್ಲಿ ಹಾಡುಹಗಲೇ ಕಾರ್ ಗ್ಲಾಸ್ ಒಡೆದು ಕಳ್ಳತನ..

ಐವತ್ತು ಸಾವಿರ ಹಣದೊಂದಿಗೆ ಮಹತ್ವದ ದಾಖಲೆಯುಳ್ಳ ಬ್ಯಾಗ್ ಕದ್ದ ಖದೀಮರು..

ಬೆಳಗಾವಿ : ಇಂದು ಮದ್ಯಾಹ್ನ 12-30ರ ಸುಮಾರಿಗೆ ನಗರದ ಬೋಗಾರ್ವೇಸ್ ವೃತ್ತದಲ್ಲಿ ಪೇ ಪಾರ್ಕಿಂಗಿನಲ್ಲಿ ನಿಲ್ಲಿಸಿದ ನಗರದ ಗುತ್ತಿಗೆದಾರರೊಬ್ಬರ ಕಾರಿನ ಗ್ಲಾಸ್ ಒಡೆದು, ಕಾರಿನಲ್ಲಿದ್ದ ಐವತ್ತು ಸಾವಿರ ನಗದು ಹಾಗೂ ಮಹತ್ವದ ದಾಖಲೆಗಳನ್ನು ಹಾಡುಹಗಲೇ ಕದ್ದೊಯ್ದ ಘಟನೆ ಜರುಗಿದೆ.

ನಗರದ ಗುತ್ತಿಗೆದಾರರೊಬ್ಬರು ನಗರದಲ್ಲಿರುವ ತಮ್ಮ ಖಾಸಗಿ ಕಾರ್ಯದ ನಿಮಿತ್ತ, ದುಂಡುಮಂಡಳಿಯ ಪೇ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ಕಾರನ್ನು ಪಾರ್ಕಿಂಗ್ ಮಾಡಿ ಹೋಗಿದ್ದು, ತಮ್ಮ ಕಾರ್ಯ ಮುಗಿಸಿ ಒಂದು ಗಂಟೆಯ ನಂತರ ಬಂದು ನೋಡುವಷ್ಟರಲ್ಲಿ ಕಾರಿನ ಗ್ಲಾಸ್ ಒಡೆದು, ಕಾರಿನಲ್ಲಿದ್ದ ಬ್ಯಾಗ್ ಅನ್ನು ಖದೀಮರು ದೋಚಿಕೊಂಡು ಹೋಗಿದ್ದಾರೆ.

ಇತ್ತ ಪಾರ್ಕಿಂಗ್ ವ್ಯವಸ್ಥೆಯ ಸಿಬ್ಬಂದಿಯನ್ನು ಕೇಳಿದಾಗ ತಮಗೆ ಏನು ತಿಳಿದಿಲ್ಲ, ಕಾರಿನ ಉಷ್ಣತೆಯಿಂದ ಗ್ಲಾಸು ಒಡೆದುರಬಹುದು, ನಮ್ಮ ನಿಯಮಗಳ ಪ್ರಕಾರ ಕಾರಿನಲ್ಲಿರುವ ವಸ್ತುಗಳಿಗೆ ನಾವು ಜವಾಬ್ದಾರರಲ್ಲ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದು, ಪಾರ್ಕಿಂಗ್ ಹಣ ಪಡೆಯುತ್ತಿರುವ ಗುತ್ತಿಗೆದಾರರು ತಮ್ಮ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂಬ ಕನಿಷ್ಠ ನಿಯಮವನ್ನು ಪಾಲಿಸದೇ ಇರುವದು ವಿಪರ್ಯಾಸ.

ನಗರದ ದುಂಡುಮಂಡಳಿಯವರು ಪಾರ್ಕಿಂಗ್ ಗುತ್ತಿಗೆ ನೀಡಿದ ನಿಯಮಗಳು ಸರಿಯಾಗಿ ಜಾರಿಯಲ್ಲಿವೆಯೇ ಎಂದು ಮೇಲಿಂದ ಮೇಲೆ ಪರಿಶೀಲನೆ ಮಾಡುತ್ತಿದ್ದರೆ ಸಾರ್ವಜನಿಕರಿಗೆ ಇಂತಹ ಸಮಸ್ಯೆ ಹಾಗೂ ನಷ್ಟಗಳು ಆಗಲಾರವು, ಇನ್ನು ಈ ಕುರಿತು ಕ್ಯಾಂಪ್ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ವರದಿ ಪ್ರಕಾಶ ಬಸಪ್ಪ ಕುರಗುಂದ.