ಬೆಳಗಾವಿಯ ಮಠ ಗಲ್ಲಿಯಲ್ಲಿ ಬ್ರಹತ್ ಸಿದ್ದಚಕ್ರ ಮಹಾಮಂಡಲ ವಿಧಾನ..

ಬೆಳಗಾವಿಯ ಮಠ ಗಲ್ಲಿಯಲ್ಲಿ ಬ್ರಹತ್ ಸಿದ್ದಚಕ್ರ ಮಹಾಮಂಡಲ ವಿಧಾನ..

ಸುಖ, ಶಾಂತಿ, ಸಮಾಧಾನ ಮಾರುಕಟ್ಟೆಯಲ್ಲಿ ಸಿಗುವದಿಲ್ಲ, ದೇವರ ಆರಾಧನೆಯಿಂದ ಸಿಗುತ್ತದೆ..

ಮಾಜಿ ಶಾಸಕ ಸಂಜಯ ಪಾಟೀಲ..

ಬೆಳಗಾವಿ : ನಗರದ ಮಠ ಗಲ್ಲಿಯ ಶ್ರೀ 1008 ಪಾರ್ಶ್ವನಾಥ ಸ್ವಾಮಿ ದಿಗಂಬರ ಜೈನ ಬಸದಿಯ ವತಿಯಿಂದ ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನವನ್ನು ಹಮ್ಮಿಕೊಳ್ಳಲಾಗಿದೆ.

ಬೆಳಗಾವಿಯ ಮಠ ಗಲ್ಲಿಯ ಶ್ರೀ 1008 ಪಾರ್ಶ್ವನಾಥ ಸ್ವಾಮಿ ದಿಗಂಬರ ಜೈನ ಬಸದಿ, ಚಿಕ್ಕ ಬಸದಿ ಟ್ರಸ್ಟ್ ಕಮೀಟಿ ಮತ್ತು ಆರಾಧನಾ ಮಹಿಳಾ ಮಂಡಳದ ಸಹಯೋಗದಲ್ಲಿ ಕಳೆದ ಅಕ್ಟೋಬರ್ 29 ರಿಂದ ಗುರುವಾರ ನವೆಂಬರ್ 6ರ ವರೆಗೆ ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನವನ್ನು ಹಮ್ಮಿಕೊಳ್ಳಲಾಗಿದೆ.

ಆಚಾರ್ಯ ಶ್ರೀ ಬಾಹುಬಲಿ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಎಲ್ಲ ವಿಧಾನಗಳಲ್ಲೇ ದೊಡ್ಡದಾದ ಬೃಹತ್ ಸಿದ್ಧಚಕ್ರ ಮಹಾಮಂಡಲವನ್ನು ನಡೆಸಲಾಗುತ್ತಿದೆ.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು ಮಾತನಾಡಿ ರಾಜಕೀಯದಲ್ಲಿ ಹಲವಾರು ತಪ್ಪುಒಪ್ಪುಗಳಾದರೂ ಧರ್ಮವನ್ನು ಕಾಯಲು ಪ್ರಾಮಾಣಿಕ ಪ್ರಯತ್ನವನ್ನು ನಿರಂತರವಾಗಿ ಮಾಡಲಾಗುತ್ತಿದೆ, ಸುಖ ಶಾಂತಿ ಸಮಾಧಾನ ಯಾವುದೇ ಮಾರುಕಟ್ಟೆಯಲ್ಲಿ ಸಿಗಲ್ಲ. ಅದು ಕೇವಲ ದೇವರ ಆರಾಧನೆಯಲ್ಲಿ ಮಾತ್ರ ಸಿಗುತ್ತದೆ ಎಂದರು.

ಇನ್ನು ವಿಧಾನಾಚಾರ್ಯ ಗೋಮಟೇಶ್ ಪಂಡಿತರು ಮತ್ತು ಅವರ ಸಮೂಹದಿಂದ ವೈಭವದಿಂದ ಸುಂದರವಾದ ವಿಧಾನವನ್ನು ನಡೆಸಲಾಗಿದೆ. ನಮೋಕಾರ ಮಂತ್ರದ ಮೂಲಕ 5 ಜನ ಪರಮೇಶ್ವರರಿಗೆ ವಂದನೆಗಳನ್ನು ಸಲ್ಲಿಸಲಾಗುತ್ತದೆ. ಅಂತಹ ಸಿದ್ಧ ಗುಣಗಳು ಪ್ರಾಪ್ತವಾಗಲೆಂದು ಈ ವಿಧಾನವನ್ನು ಆಯೋಜಿಸಲಾಗಿದೆ ಎಂದು ಸುರೇಖಾ ಗೌರಗೊಂಡಾ ಹೇಳಿದ್ದಾರೆ..

ಈ ಸಂದರ್ಭದಲ್ಲಿ ಅನೇಕ ಶ್ರಾವಕ ಶ್ರಾವಕಿಯರು ಭಾಗಿಯಾಗಿದ್ಧರು. ಗುರುವಾರ ನವೆಂಬರ್ 6 ರಂದು ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ ವಿಸರ್ಜನೆಯಾಗಲಿದೆ.