ಬೆಳಗಾವಿಯ ಸಹೃದಯಿ ವೈದ್ಯ ಡಾ ಸತೀಶ್ ಆರ್ ಚೌಲಿಗೇರ ಅವರಿಗೆ ಕರುನಾಡ ಕೆಣ್ಮಣಿ 2025ರ ಪ್ರಶಸ್ತಿ..
ಸಮಾಜದ ವಿವಿಧ ಕ್ಷೇತ್ರಗಳ ಸೇವೆಗೆ ಸಂದ ಗೌರವ.
ಬೆಳಗಾವಿ : ವೃತ್ತಿಯಲ್ಲಿ ಜನಪ್ರಿಯ ವೈದ್ಯರಾಗಿದ್ದು, ತಮ್ಮ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಾ, ಮಾನವೀಯತೆಯಿಂದ, ಬಡವರ ಬಗ್ಗೆ ಕಾಳಜಿಯಿಂದ, ಜನತೆಯ ಸಂಕಷ್ಟಕ್ಕೆ ಸ್ಪಂದಿಸಿ ಜನಮಾನಸದಲ್ಲಿ ಯಶಸ್ವೀ ವೈದ್ಯರೆಂದು ಹೆಸರುವಾಸಿಯಾದ ಡಾ ಸತೀಶ ಆರ್ ಚೌಲಿಗೇರ ಅವರಿಗೆ ‘ಕನ್ನಡದ ಕಣ್ಮಣಿ 2025″ ಪ್ರಶಸ್ತಿ ನೀಡಿ ಗೌರವಿಸಲಾಗಿದೆ..
ರಾಜ್ಯದ ಪ್ರಮುಖ ಸ್ಯಾಟಲೈಟ್ ಖಾಸಗಿ ಸುದ್ದಿ ವಾಹಿನಿಯಾದ ಪವರ್ ಟಿವಿ ಪ್ರತಿವರ್ಷ ನೀಡುವ, ಕನ್ನಡದ ಪರವಾಗಿ, ಕನ್ನಡಿಗರಿಗಾಗಿ ವಿಶೇಷ ಸಾಮಾಜಿಕ ಸೇವೆಗೈದ ಸಾಧಕರನ್ನು ಗುರ್ತಿಸಿ, “ಕನ್ನಡ ಕಣ್ಮಣಿ” ಎಂಬ ಮಹಾ ಪ್ರಶಸ್ತಿಯ ಗೌರವವನ್ನು ನೀಡುತ್ತಾ ಬಂದಿದ್ದು, ಈ ವರ್ಷ ಬೆಳಗಾವಿಯ ಖ್ಯಾತ ವೈದ್ಯರು ಹಾಗೂ ಸಮಾಜ ಸೇವಕರಾದ ಡಾ ಸತೀಶ್ ಆರ್ ಚೌಲಿಗೇರ ಅವರಿಗೆ ದೊರಕಿದ್ದು ಬೆಳಗಾವಿಗಾರಲ್ಲಿ ಹರ್ಷ ತಂದಿದೆ..
ಬುಧವಾರ ದಿನಾಂಕ 05/11/2025 ರಂದು ಸಂಜೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟನ ಖಾಸಗಿ ಹೋಟೆಲಿನಲ್ಲಿ, ವಾಹಿನಿಯ ಮುಖ್ಯಸ್ಥರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ ಅವರ ಸಮ್ಮುಖದಲ್ಲಿ ಸಾಧಕರಿಗೆ ಗೌರವ ನೀಡುವ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ.
ಇನ್ನೂ ಪ್ರಶಸ್ತಿ ಪುರಸ್ಕೃತ ಡಾಕ್ಟರ್ ಸತೀಶ್ ಅವರು, ಹತ್ತಾರು ವರ್ಷಗಳಿಂದ ತಮ್ಮ ವೃತ್ತಿಯ ಮೂಲಕ ಜನಸೇವೆ ಮಾಡುತ್ತಾ ಬಂದಿದ್ದು, ಕನ್ನಡದ ಕಾರ್ಯ, ಕ್ರೀಡೆ, ಶಿಕ್ಷಣ, ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ, ಸಂಸ್ಕೃತಿಕ, ಕಲೆ ಹಾಗೂ ಸಾಹಿತ್ಯಕ ಮುಂತಾದ ಕ್ಷೇತ್ರಗಳಿಗೆ ತಮ್ಮದೇ ಆದ ಕೊಡುಗೆಯನ್ನು, ಸಹಾಯವನ್ನು ನೀಡುತ್ತಾ ಬಂದಿದ್ದು ಎಲ್ಲಾ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ, ಇಂತಹ ಸಮಾಜಮುಖಿ ಕಾರ್ಯದಲ್ಲಿ ನಿರತರಾದ, ಸಾಮಾಜಿಕ ಕಳಕಳಿಯ ಗುಣದ ಡಾಕ್ಟರ್ ಸತೀಶ್ ಆರ್ ಚೌಲಿಗೇರ ಅವರ ಸಾಮಾಜಿಕ ಕೊಡುಗೆಯನ್ನು ಗುರ್ತಿಸಿ, ಗೌರವ ನೀಡಿರುವ ಪವರ್ ಸುದ್ದಿ ವಾಹಿನಿಗೆ ಬೆಳಗಾವಿಗರ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು..
ವರದಿ ಪ್ರಕಾಶ ಬಸಪ್ಪ ಕುರಗುಂದ..