ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಚರ್ಚೆ ಆಗಲಿ.

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಚರ್ಚೆ ಆಗಲಿ.

ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ ನಿರ್ಣಯಗಳು ಆಗಲಿ..

ಮಹೇಶ್ ಹೊಸೂರ, ವಿದ್ಯಾರ್ಥಿ ಮುಖಂಡ ಬೆಳಗಾವಿ..

ಬೆಳಗಾವಿ : ಇದೆ ಡಿಸೇಂಬರ ಎಂಟರಿಂದ ಹತ್ತೊಂಬತ್ತರ ವರೆಗೆ ಬೆಳಗಾವಿಯಲ್ಲಿ ಜರುಗುವ ಚಳಿಗಾಲ ಅಧಿವೇಶನ ನಡಿಯುತ್ತಿದ್ದು, ಈ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಕಾಳಜಿಪೂರ್ವಕ ಚರ್ಚೆ ಆಗಬೇಕು ಎಂದು ಬೆಳಗಾವಿಯಲ್ಲಿ ವಿದ್ಯಾರ್ಥಿ ಮುಖಂಡ ಮಹೇಶ್ ಹೊಸೂರ ಆಗ್ರಹಿಸಿದ್ದಾರೆ.

ಇಡೀ ಸರ್ಕಾರವೇ ಇಲ್ಲಿ ಹದಿನೈದು ದಿನಗಳ ಕಾಲ ಇರುವದರಿಂದ ಅದು ಈ ಭಾಗಕ್ಕೆ ಸಾರ್ಥಕತೆ ಆಗುವಂತ ಚರ್ಚೆಗಳು, ಅನುಮೋದನೆಗಳು ಆಗಬೇಕು, ಜಾತ್ರೆಗೆ ಬಂದೆ, ಹೋದೆ ಎಂಬ ಅರ್ಥದಲ್ಲಿ ಮಜಾ ಮಾಡಿ ಹೋಗುವಂತೆ ಆಗಬಾರದು, ಪ್ರಸ್ತುತ ಬೆಳಗಾವಿ ಚಳಿಗಾಲದ ಅಧಿವೇಶನಲ್ಲಿ ಅನವಶ್ಯಕ ಕಾಲಹರಣ ಆಗದೇ ಯುವಕರ ಭವಿಷ್ಯ ಹಾಗೂ ವಿದ್ಯಾರ್ಥಿ ಸಮಸ್ಯೆಗಳ ಕುರಿತು ಈ ಅಧಿವೇಶನದಲ್ಲಿ ಅರ್ಥಪೂರ್ಣವಾದ ಚರ್ಚೆ ಆಗಬೇಕು ಎಂದಿದ್ದಾರೆ..

ಬೆಳಗಾವಿ ಬಹು ದೊಡ್ಡ ಜಿಲ್ಲೆ ಆಗಿರುವದರಿಂದ ಇಲ್ಲಿನ ವಿದ್ಯಾರ್ಥಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಕೆಲ ವಿದ್ಯಾರ್ಥಿಗಳ ಪರಿಸ್ಥಿತಿ ನೋಡಲು ಸಹ ಆಗುತ್ತಿಲ್ಲ, ಈ ಚಳಿಗಾಲ ಅಧಿವೇಶನದಲ್ಲಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವ ಕೆಲಸವಾಗಬೇಕಿದೆ, ವಿದ್ಯಾರ್ಥಿಗಳಿಗೆ ಉತ್ತಮ ವಸತಿ ವ್ಯವಸ್ಥೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಸಂಖ್ಯೆಗಳನ್ನು ಹೆಚ್ಚಿಸಬೇಕಾಗಿದೆ, ನಮ್ಮ ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಸೌಲಭ್ಯಗಳನ್ನು ಹೆಚ್ಚುವರಿಯಾಗಿ ನೀಡಬೇಕು, ವಿದ್ಯಾರ್ಥಿಗಳ ಭವಿಷ್ಯವನ್ನು ಎತ್ತಿಹಿಡಿಯುವ ನಿರ್ಣಯಗಳನ್ನು ಈ ಅಧಿವೇಶನದಲ್ಲಿ ಆಗಬೇಕು ಎಂದರು.

ಈ ಸರ್ಕಾರ ಹಾಗೂ ವಿರೋಧ ಪಕ್ಷಗಳು ಕೂಡಲೇ ಇಲ್ಲಿನ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಿ ಈ ಚಳಿಗಾಲದ ಅಧಿವೇಶನದಲ್ಲಿ ವಿದ್ಯಾರ್ಥಿಗಳ ಪರವಾಗಿ ಚರ್ಚೆ ಮಾಡಬೇಕು, ಆ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಸಮಸ್ಯೆಗಳನ್ನು ದೂರ ಮಾಡಬೇಕೆಂದು ಒತ್ತಾಯ ಮಾಡುತ್ತೇನೆ ಎಂದಿದ್ದಾರೆ..

Leave a Reply

Your email address will not be published. Required fields are marked *