ಬೆಳಗಾವಿ ಅಧಿವೇಶನದ ಸಿದ್ಧತೆಯಲ್ಲಿ ನಿರತರಾದ ಅಧಿಕಾರಿಗಳು..

ಬೆಳಗಾವಿ ಅಧಿವೇಶನದ ಸಿದ್ಧತೆಯಲ್ಲಿ ನಿರತರಾದ ಅಧಿಕಾರಿಗಳು..

ಚುರುಕುಗೊಂಡ ಸಾರಿಗೆ ಇಂಧನ ಸಮಿತಿ ಸದಸ್ಯರ ಪರಿಶೀಲನಾ ಕಾರ್ಯ..

ಬೆಳಗಾವಿ : ಇನ್ನೇನು ಎರಡ್ಮೂರು ದಿನಗಳಲ್ಲಿ ಬೆಳಗಾವಿಯ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಅಧಿವೇಶನಕ್ಕಾಗಿ ಇಡೀ ಆಡಳಿತ ಯಂತ್ರವೇ ಬೆಳಗಾವಿಗೆ ಆಗಮಿಸುತ್ತಿದ್ದು, ಅದರ ಸೂಕ್ತ ಸಿದ್ಧತೆಗಾಗಿ ಬೆಳಗಾವಿಯ ಅಧಿಕಾರಿಗಳೆಲ್ಲಾ ಹಗಲಿರುಳು ಕಾರ್ಯ ನಿರ್ವಹಿಸುತ್ತಿದ್ದಾರೆ.

ಆ ನಿಟ್ಟಿನಲ್ಲಿ ಸಾರಿಗೆ ಇಂಧನ ಸಮಿತಿಯ ಸದಸ್ಯರಾದ ಪರಶುರಾಮ ದುಡಗುಂಟಿ ಅವರು ಕೂಡಾ ಇಂದು ತಮ್ಮ ಸಮಿತಿಯ ಕಾರ್ಯ ಸ್ಥಳಕ್ಕೆ ಬೇಟಿ ನೀಡಿ, ಪರಿಶೀಲನೆ ನಡೆಸಿ, ಸಲಹೆ ಸೂಚನೆ ನೀಡಿದ್ದಾರೆ, ಅಧಿವೇಶನದ ಕರ್ತವ್ಯದಲ್ಲಿದ್ದ ವಾಹನಗಳಿಗೆ ಇಂಧನ ಭರಿಸುವ ನಿಮಿತ್ತ ಆಗಮಿಸುವ ಸಿಬ್ಬಂದಿಗಳಿಗೆ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ, ನೋಂದಣಿಯ ಸ್ಥಳಾವಕಾಶ, ಕುಡಿಯುವ ನೀರಿನ ಹಾಗೂ ಸ್ವಚ್ಛತೆಯ ವಿಷಯವಾಗಿ ಸಮಿತಿಯ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಿದ್ದು, ಬರುವಂತ ವಾಹನ ಚಾಲಕರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂಬ ಸೂಚನೆ ನೀಡಿದ್ದಾರೆ..

ಕಾರ್ಯದರ್ಶಿ ಹಾಗೂ ವಿವಿಧ ಹಂತದ ಅಧಿಕಾರಿ ವರ್ಗಗಳಿಗೆ ಸುಮಾರು 450 ವಾಹನಗಳನ್ನು ಪೂರೈಕೆ ಮಾಡುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಸಜ್ಜಿತವಾದ ವಾಹನಗಳು ಆಗಮಿಸಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ವಾಹನಗಳಲ್ಲಿ ಅಚ್ಚುಕಟ್ಟಾದ ಸೇವೆ ನೀಡಲು ಯೋಜನೆ ರೂಪಿಸಿಕೊಳ್ಳಲಾಗಿದೆ ಎಂಬ ಮಾಹಿತಿಯಿದೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..