ಬೆಳಗಾವಿ ಕಲಾಸಕ್ತರರಿಗೆ ವಿಭಿನ್ನ ಬಗೆಯ ನಾಟಕಗಳ ನಾಟಕೋತ್ಸವ…

ಬೆಳಗಾವಿ ಕಲಾಸಕ್ತರರಿಗೆ ವಿಭಿನ್ನ ಬಗೆಯ ನಾಟಕಗಳ ನಾಟಕೋತ್ಸವ..

ನಾಟ್ಯ ಭೂಷಣ ಏಣಗಿ ಬಾಳಪ್ಪನವರ ಸ್ಮರಣೋತ್ಸವ ಈ ನಾಟಕೋತ್ಸವ..

ಬೆಳಗಾವಿ : ನಗರದ ರಾಮದೇವ ಹೋಟೆಲ್ ಹಿಂಬಾಗದಲ್ಲಿ ಇರುವ ಕನ್ನಡ ಭವನದ ರಂಗಮಂದಿರದಲ್ಲಿ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಬೆಳಗಾವಿ ಹಾಗೂ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸವದತ್ತಿ ಇವರ ಸಹಯೋಗದಲ್ಲಿ, ಇದೇ ಅಕ್ಟೋಬರ್ ತಿಂಗಳ 06/07/08 ನೆಯ ತಾರೀಖಿನ ಈ ಮೂರು ದಿನಗಳ ಕಾಲ ವಿಭಿನ್ನ ಕಥಾಹಂದರ ಇರುವ ಮೂರು ನಾಟಕಗಳ ಪ್ರದರ್ಶನ ಆಗುತ್ತಿವೆ..

ನಾಟ್ಯ ಭೂಷಣ ಏಣಗಿ ಬಾಳಪ್ಪ ಅವರ ಸ್ಮರಣಾರ್ಥ ಪ್ರದರ್ಶನಗೊಳ್ಳುವ ಈ ಮೂರು ನಾಟಕಗಳು, ಉತ್ತಮ ಸಾಮಾಜಿಕ ಸಂದೇಶ ಹೊಂದಿದ್ದು, ಬೆಳಗಾವಿಯ ಕಲಾಪ್ರೆಮಿಗಳು ಆಗಮಿಸಿ ಈ ನಾಟಕಗಳನ್ನು ವೀಕ್ಷಣೆ ಮಾಡಬೇಕೆಂದು ನಾಟಕಗಳ ರಚನೆ ಮತ್ತು ನಿರ್ದೇಶನ ಮಾಡಿರುವ ಝಾಕಿರ್ ನದಾಫ್ ಅವರು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ..

ಆರನೆಯ ತಾರೀಕು ಶುಕ್ರವಾರ ವೇದಿಕೆ ಮೇಲೆ, ಬೆಳಗಾವಿಯ ರಂಗಕರ್ಮಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಈ ನಾಟಕೋತ್ಸವ ಉದ್ಘಾಟನೆ ಆಗಿ, ನಾಟಕಗಳ ಕೆಲ ಪುಸ್ತಕಗಳು ಬಿಡುಗಡೆಗೊಂಡು, ಸಂಜೆ ಸರಿಯಾಗಿ 6-30ಕ್ಕೆ “ಸೋರುತಿಹುದು ಸಂಬಂಧ” ಎಂಬ ನಾಟಕ ಪ್ರದರ್ಶನವಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ..

ಇನ್ನು ಶನಿವಾರ ದಿನಾಂಕ 07 ರಂದು, ಝಾಕಿರ್ ನದಾಫ್ ಅವರ ನಿರ್ದೇಶನದ “ನಮ್ದು ಹಳೆ ಕಥೆ” ಎಂಬ ಸಾಮಾಜಿಕ ನಾಟಕ ಪ್ರದರ್ಶನವಾಗುತ್ತಿದ್ದು, ರವಿವಾರ 08 ನೇ ತಾರಿಕಿನಂದು ಸಂಜೆ 6-30ಕ್ಕೆ ವೇದಿಕೆ ಮೇಲೆ ಗಣ್ಯರ ಸಮ್ಮುಖದಲ್ಲಿ ಸಮಾರೋಪ ಸಮಾರಂಭ ಜರುಗಿ, “ಬಾಸಿಂಗ ಬಲ” ಎಂಬ ನಾಟಕ ಪ್ರದರ್ಶನಗೊಳ್ಳುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ..

ರಂಗಭೂಮಿ ದಂತಕತೆಯಾಗಿದ್ದಂತ ನಾಟ್ಯಭೂಷಣ ಏಣಗಿ ಬಾಳಪ್ಪ ಅವರ ಸ್ಮರಣಾರ್ಥವಾಗಿ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಬೆಳಗಾವಿ ಹಾಗೂ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ, ಸವದತ್ತಿ ಅವರ ಸಹಯೋಗದಲ್ಲಿ ನಡೆಯುವ ಈ ನಾಟಕೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕುಂದಾನಗರಿಯ ಕಲಾಪ್ರೆಮಿಗಳು ಆಗಮಿಸಿ ಪ್ರೋತ್ಸಾಹಿಸಬೇಕು ಎಂದು ಕಲಾತಂಡ ಮನವಿ ಮಾಡಿಕೊಂಡಿದ್ದಾರೆ..

ಈ ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ ಗದಗ, ಯ ರು ಪಾಟೀಲ್, ಗಿರೀಶ್ ಜೋಶಿ, ಶಟಣಗೌಡ ಪಾಟೀಲ್, ಬಸವರಾಜ್ ಗಾರ್ಗಿ ಹಾಗೂ ಅನಂತ ಪಪ್ಪು ಉಪಸ್ಥಿತರಿದ್ದರು..

ವರದಿ ಪ್ರಕಾಶ ಕುರಗುಂದ..