ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ದಿಯ ಬಗ್ಗೆ ವಿಶೇಷ ಗಮನ ಹರಿಸಬೇಕು
ಶಾಲೆ ನವೀಕರಣ ರಸ್ತೆ ಚರಂಡಿ ನೀರು ಮೂಲಭೂತ ಸೌಕರ್ಯಗಳನ್ನು ಪ್ರತಿ ಒಂದು ಹಳ್ಳಿ ಗ್ರಾಮ ನಗರಕ್ಕೆ ಒದಗಿಸಬೇಕು
ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರದ ಸ್ಕೀಮ್ ನಂ 61ರ ಅಬಿವೃದ್ಧಿ ಯೋಜನೆ ಪ್ರಾರಂಭವಾಗಬೇಕು
ಪ್ರತಿ ವರ್ಷ ಚಳಿಗಾಲ ಅಧಿವೇಶನದಲ್ಲಿ ಕೋಟ್ಯಾಂತರ ರೂಪಾಯಿಗಳ ಕರ್ಚು ವೆಚ್ಚ ತೋರಿಸುವ ಜೊತೆಗೆ ಜನರ ಅಹವಾಲುಗಳಿಗೆ ಎಷ್ಟರ ಮಟ್ಟಿಗೆ ಸ್ಪಂದಿಸಿದ್ದಾರೆ ಎನ್ನುವ ಮಾಹಿತಿ ನೀಡಬೇಕು
ಯುವ ಹೋರಾಟಗಾರ ಮಹೇಶ ಎಸ್ ಶಿಗೀಹಳ್ಳಿ ಸ್ಪಷ್ಟನೆ.
ಬೆಳಗಾವಿ : ಪ್ರತಿ ವರ್ಷದಂತೆ ನಡೆಯುವ ಬೆಳಗಾವಿ ಚಳಿಗಾಲ ಅಧಿವೇಶನ ಮತ್ತೆ ಈ ಬಾರಿ ಬೆಳಗಾವಿ ಯಲ್ಲಿ ಚಳಿಗಾಲದ ಅಧಿವೇಶನ ಕಾವು ಹೆಚ್ಚಾಗಿದ್ದು ಈ 2024 ಬೆಳಗಾವಿ ಅಧಿವೇಶನದತ್ತ ಜನರ ಚಿತ್ತನೆಟ್ಟಿದೆ. ಕಾರಣ ಜನ ಸಾಮಾನ್ಯರ ಜೀವನ ನಡೆಸುವುದು ತುಂಬಾ ಕಠಿಣವಾಗಿದೆ ಸರಿಯಾದ ರಸ್ತೆ ಸಂಪರ್ಕ ಚರಂಡಿ ನೀರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಾಲೆ ಹಾಗೂ ಉತ್ತರ ಕರ್ನಾಟಕದಲ್ಲಿ ಸಮಗ್ರ ಅಬಿವೃದ್ಧಿ ತುಂಬಾ ಮುಖ್ಯವಾಗಿದೆ.
ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಕಣಬರಗಿ ಸ್ಕೀಮ್ ನಂ 61 50:50 ಅನುಪಾತದಲ್ಲಿ ಬುಡಾ ಲೇಔಟ್ ಅಭಿವೃದ್ದಿಗಾಗಿ. ರೈತರಿಂದ ಭೂಮಿ ಪಡೆದು ಕಳೆದ 17 ವರ್ಷಗಳಿಂದ ರೈತರಿಗೆ ಯಾವುದೇ ಬುಡಾ ಪ್ಲಾಟ್ ನೀಡದೆ ಅನ್ಯಾಯ ಮಾಡಿದ್ದಾರೆ, ಇಂತಹ ನಿರ್ಲಕ್ಷ್ಯದಿಂದ ರೈತರಿಗೆ ನಗರಾಭಿವೃದ್ದಿ ಪ್ರಾಧಿಕಾರದ ಮೇಲೆ ವಿಶ್ವಾಸ ಕುಂದಿದ್ದು ಈ ಚಳಿಗಾಲದ ಅಧಿವೇಶನ ಒಳಗೆ ಸ್ಕೀಮ್ ನಂ 61 ರ ಬುಡಾ ಲೇಔಟ್ ಕಾರ್ಯ ಆರಂಭವಾಗಬೇಕು ಇಲ್ಲವಾದಲ್ಲಿ ರೈತರಿಗೆ ಭೂಮಿ ವಾಪಸ್ಸು ಜೊತೆಗೆ 17 ವರ್ಷದ ನಷ್ಟದ ಪರಿಹಾರ ಒದಗಿಸಬೇಕು ಎಂದು ರೈತರು ಆಕ್ರೋಶದಲ್ಲಿ ಬುಡಾ ವಿರೋಧವಾಗಿ ನಿಂತಿದ್ದಾರೆ.
ಬುಡಾ ಅಧಿಕಾರಿಗಳಿಗೆ ಅಧ್ಯಕ್ಷರಿಗೆ ಇದು ಮಾಡು ಇಲ್ಲವೇ ಮಡಿ ಎನ್ನುವ ಪ್ರಶ್ನೆ ಮೂಡಿದೆ, ಹಾಗೆ ಚಳಿಗಾಲದ ಅಧಿವೇಶನದಲ್ಲಿ ಹಲವು ಸಂಘಟನೆಗಳು ನ್ಯಾಯಕ್ಕಾಗಿ ಹಕ್ಕುಗಳಿಗಾಗಿ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಇಟ್ಟುಕೊಂಡು ಸುವರ್ಣ ಸೌಧದ ಮುಂದೆ ಹೋರಾಟಕ್ಕೆ ಕುಳಿತುಕೊಂಡು ಅಧಿಕಾರಿಗಳಿಗೆ ಶಾಸಕರಿಗೆ ಸಚಿವರಿಗೆ ಮನವಿ ಸಲ್ಲಿಸುತ್ತಾರೆ. ಈ ಹೋರಾಟದಲ್ಲಿ ಸಂಘಟನೆಗಳು ಕರ್ಚು ವೆಚ್ಚ ಮಾಡಿ ನ್ಯಾಯಕ್ಕಾಗಿ ಹೋರಾಟ ನಡೆಸಿದರು ಅವರ ಮನವಿಗಳಿಗೆ ಯಾವುದೇ ರೀತಿಯ ಸ್ಪಂದನೆ ಇರುವುದಿಲ್ಲ, ಚಳಿಗಾಲದ ಅಧಿವೇಶನ ಮುಗಿಯುತ್ತಿದ್ದಂತೆ ಚಳಿಗಾಲ ಅಧಿವೇಶನದ ಕರ್ಚು ವೆಚ್ಚಗಳನ್ನು ಮಾಹಿತಿ ನೀಡುತ್ತಾರೆ. ಆದರೆ ಜನರ ಅಹವಾಲುಗಳಿಗೆ ಎಷ್ಟರ ಮಟ್ಟಿಗೆ ಸ್ಪಂದಿಸಿದ್ದೇವೆ ಎಂಬ ಯಾವುದೇ ಹಿಂಬರಹ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸುವುದಿಲ್ಲ . ಇದು ಖಂಡನೀಯ. ಚಳಿಗಾಲದ ಅಧಿವೇಶನ ಜನರ ಹಿತವನ್ನು ಕಾಪಾಡಬೇಕು ಹೊರತು ಜನರ ತಾಳ್ಮೆ ಪರೀಕ್ಷಿಸಬಾರದು, ಪ್ರತಿ ವರ್ಷ ಬೆಳಗಾವಿ ಚಳಿಗಾಲ ಅಧಿವೇಶನದ ಕೊನೆಯ ದಿನದ ನಂತರ ಬಹಿರಂಗವಾಗಿ ಎಷ್ಟರ ಮಟ್ಟಿಗೆ ಜನರಿಗೆ ನ್ಯಾಯ ದೊರಕಿಸಿದ್ದಾರೆ ಎಷ್ಟು ಅಬಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಿದ್ದಾರೆ ಹಾಗೂ ನಿಗಮದಲ್ಲಿ ನಡೆದ ಹಗರಣದ ಹಣವನ್ನು ಮರು ನಿಯೋಗ ಮಾಡಿ ಜನರಿಗೆ ಎಷ್ಟು ಯೋಜನೆಗಳನ್ನು ತಲುಪಿಸಿದ್ದಾರೆ ಪ್ರತಿ ಒಂದು ಮಾಹಿತಿ ದಾಖಲಾತಿಗಳ ಸಮೇತ ಸುದ್ದಿ ಗೋಷ್ಠಿ ಮುಂದೆ ತಿಳಿಸಬೇಕು.
ಜನರು ಸರ್ಕಾರಕ್ಕೆ ಕಟ್ಟುವ ತೆರಿಗೆ ಹಣ ವ್ಯರ್ಥ ವಾಗಬಾರದು ಚಳಿಗಾಲ ಅಧಿವೇಶನ ಪ್ರವಾಸಿ ಸ್ಥಳ ಆಗಬಾರದು ಎಂದು ಯುವ ಹೋರಾಟಗಾರ ಮಹೇಶ ಎಸ್ ಶಿಗೀಹಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.