ಬೆಳಗಾವಿ ಜಿಲ್ಲಾ ಕ್ರೈಸ್ತ ಸಮುದಾಯದಿಂದ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಅಭಿನಂದನಾ ಸನ್ಮಾನ..
ಬೆಳಗಾವಿ : ರವಿವಾರ ನಗರದ ಮೇತೋಡಿಕ್ಸ್ ಮಿಷನ್ನಿನ ಸಿಮನ್ಸ್ ಹಾಲನಲ್ಲಿ, ಜಿಲ್ಲಾ ಕ್ರೈಸ್ತ ಸಮುದಾಯ ಆಯೋಜನೆ ಮಾಡಿದ ಜನಪ್ರತಿನಿಧಿಗಳ ಅಭಿನಂದನಾ ಸಮಾರಂಭವು ಅತ್ಯಂತ ಕೃತಜ್ಞತಾ ಪೂರ್ವಕವಾಗಿ ಹಾಗೂ ಅರ್ಥಪೂರ್ಣವಾಗಿ ಜರುಗಿದೆ..
ಈ ಕಾರ್ಯಕ್ರಮದಲ್ಲಿ ಮೊದಲಿಗೆ ಬೆಳಗಾವಿ ನಗರ ಶಾಸಕರಾದ ಆಶಿಫ್ ಶೇಟ್ ಅವರು ಮಾತನಾಡಿ, ಕಾರ್ಯಕ್ರಮ ಆಯೋಜನೆ ಮಾಡಿದವರಿಗೆ ಧನ್ಯವಾದ ತಿಳಿಸಿ, ಅದೇ ರೀತಿ ಇಂದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದ ಎಲ್ಲಾ ಕ್ರೈಸ್ತ ಬಾಂಧವರಿಗೆ ಧನ್ಯವಾದ ತಿಳಿಸಿದರು..

ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ ಕ್ರೈಸ್ತ ಸಮುದಾಯ ಹಾಗೂ ಮಶಿನರಿಗಳ ಪಾತ್ರ ತುಂಬಾ ಮುಖ್ಯ ಎಂದ ಅವರು, ಅದಕ್ಕೆ ಸರಿಯಾದ ಉದಾಹರಣೆ ಎಂದರೆ ಸತೀಶ ಅಣ್ಣಾ ಜಾರಕಿಹೊಳಿ ಅವರು, ಅವರೂ ಕೂಡ ಸಮಾಜ ಸೇವೆ ಎಂದರೆ ಏನು, ಅದಕ್ಕೆ ಎಷ್ಟು ವರ್ಷಗಳ ಪ್ರಯತ್ನ ಬೇಕಾಗುತ್ತದೆ ಎಂದು ಅವರನ್ನು ನೋಡಿದರೆ ತಿಳಿಯುತ್ತದೆ ಎಂದ ಶಾಸಕರು, ಮುಂದೆ ಅವರ ಸ್ಥಾನ ಬೇರೆಯೇ ಇದೆ, ಅವರು ಮಾಡಿದ ಸಮಾಜ ಸೇವೆಗೆ ಅವರು ರಾಜ್ಯದ ಮುಖ್ಯಮಂತ್ರಿ ಆಗುವದರಲ್ಲಿ ಸಂಶಯವೇ ಇಲ್ಲ ಎಂದರು..
ಇನ್ನು ಯುವನಾಯಕ ರಾಹುಲ್ ಜಾರಕಿಹೊಳಿ ಅವರು ಮಾತನಾಡಿ, ಬಹಳ ಉತ್ಸಾಹದಿಂದ ಈ ಕಾರ್ಯಕ್ರಮ ಮಾಡಿದ್ದೀರಾ, ಅದು ಇಂದು ಯಶಸ್ವಿಯಾಗಿದೆ, ಅದಕ್ಕೆ ತಮಗೆ ಧನ್ಯವಾದ, ಕ್ರೈಸ್ತ ಸಮುದಾಯದ ಬಾಂಧವರು ಯಾವತ್ತೂ ಕಾಂಗ್ರೆಸ್ ಪರವಾಗಿ ಇದ್ದಾರೆ, ಅದೇ ರೀತಿ ಕಾಂಗ್ರೆಸ್ ಸರ್ಕಾರವೂ ಕೂಡ ಕ್ರೈಸ್ತರಿಗೆ ವಿಶೇಷ ಪ್ಯಾಕೆಜ್ ನೀಡಿ ಆ ಸಮುದಾಯವನ್ನು ಬೆಳೆಸುವ ಕಾರ್ಯ ಮಾಡುತ್ತಿದೆ, ಅದರ ಸದುಪಯೋಗವನ್ನು ಕ್ರೈಸ್ತ ಬಾಂಧವರು ಪಡೆದುಕೊಳ್ಳಬೇಕು ಎಂಬ ಮನವಿ ಮಾಡಿದರು…

ತಂದೆಯವರು ಕೂಡಾ ಮಾನವ ಬಂದುತ್ವ ವೇದಿಕೆಯಿಂದ ಬುದ್ಧ ಬಸವ ಅಂಬೇಡ್ಕರ ಸಿದ್ಧಾಂತಗಳನ್ನು ಸಮಾಜದಲ್ಲಿ ಬೆಳೆಸುತ್ತಾ, ಮೌಢ್ಯತೆಯನ್ನು ದೂರ ಮಾಡುತ್ತಿದ್ದಾರೆ ಎಂದರು..
ಇನ್ನು ಸಚಿವ ಸತೀಶ ಜಾರಕಿಹೊಳಿ ಅವರು ಮಾತನಾಡಿ, ಇಂದು ನಿಮ್ಮ ಆತ್ಮೀಯ ಸನ್ಮಾನಕ್ಕೆ ನಮ್ಮ ಹೃದಯಪೂರ್ವ ಧನ್ಯವಾದ ಎಂದ ಅವರು, ಇವತ್ತು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಹಾಗೂ ಅಧಿಕಾರ ಬರಲು ಕ್ರೈಸ್ತ ಸಮುದಾಯದ ಕೊಡುಗೆ ತುಂಬಾ ಇದೆ ಎಂದರು, ಇವತ್ತು ತಮ್ಮ ಮುಖಂಡರು ಹೇಳಿದ ಹಾಗೆ ಸಮುದಾಯದಲ್ಲಿ ತುಂಬಾ ಸಮಸ್ಯೆಗಳಿವೆ, ಅದಕ್ಕೆ ನಾವು, ನಮ್ಮ ಶಾಸಕರು ಎಲ್ಲರೂ ಸೇರಿ, ಕ್ರೈಸ್ತ ಸಮುದಾಯಕ್ಕೆ ಸಲ್ಲಬೇಕಾದ ಎಲ್ಲಾ ಸೌಲಭ್ಯ ನೀಡುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತೇವೆ ಎಂದರು..

ಕ್ರೈಸ್ತ ಸಮುದಾಯದ ಶಿಕ್ಷಣ ಮತ್ತು ವೈದ್ಯಕೀಯ ಸೇವೆಯ ಸಾಧನೆ ಅಗಾಧವಾಗಿದೆ, ಅದಕ್ಕೆ ಉತ್ತಮ ಉದಾಹರಣೆ ಎಂದರೆ, ಮದರ ತೇರೇಶಾ ಅವರು, ಮಾಡಿದ ಸಾಮಾಜಿಕ ಸೇವೆ, ಬಡ ರೋಗಿಗಳಿಗೆ ಮಿಡಿದ ಅವರ ಮನಸ್ಸು ನಮಗೆಲ್ಲಾ ಸ್ಪೂರ್ತಿ ಎಂದರು..
ನಮ್ಮಲ್ಲಿ ಆಸ್ತಿ ಹೆಚ್ಚು ಇರುವದು ಅಲ್ಪಸಂಖ್ಯಾತರಲ್ಲಿಯೇ, ಬಹುಸಂಖ್ಯಾತರು ಕೇವಲ ಮಾತಾಡುತ್ತಾ, ಹೋರಾಟ ಕಿರುಚಾಟ ಮಾಡುವದಾಗಿದೆ, ಈ ದೇಶದಲ್ಲಿ ಯಾರು ಸಮರ್ಥರೋ ಅವರೇ ಬಾಳುವರು, ನಿಮಗೇನು ಕೊರತೆ ಇಲ್ಲಾ, ಸಾಮರ್ಥತೆ ನಿಮ್ಮಲ್ಲಿ ತುಂಬಾ ಇದೆ, ಸಾಧನೆ ಮಾಡಿದವರಿಗೆ ಈ ನೆಲದಲ್ಲಿ ಸನ್ಮಾನ ಇದ್ದೆ ಇದೆ ಎಂದರು..

ಸಿದ್ದರಾಮಯ್ಯ ಅವರ ಸರ್ಕಾರ ನಿಮ್ಮ ಸರ್ಕಾರ, ನಿಮಗೆ ಗೌರವ, ಪ್ರೀತಿ ನೀಡುವದು ಇದೇ ಸರ್ಕಾರ, ಕಾಂಗ್ರೆಸ್ ಪಕ್ಷವೇ ಎಲ್ಲಾ ಜಾತಿ ಸಮುದಾಯಗಳನ್ನು ಬೆಳೆಸುವ ಪಕ್ಷ, ಅದನ್ನು ಗಟ್ಟಿ ಗೊಳಿಸುವ ಕೆಲಸ ನಿಮ್ಮದಾಗಲಿ ಎಂದರು..
ಈಗ ನಿಮಗೆ ಸಮಸ್ಯ ಇರುವ ಈ ನಿಮ್ಮ ಆಸ್ತಿಯ ಬಗ್ಗೆ ಹೇಳಬೇಕೆಂದರೆ, ನಿಮ್ಮಲ್ಲಿ ಒಗ್ಗಟ್ಟಿದ್ದರೆ ನಿಮ್ಮ ಆಸ್ತಿಗಳನ್ನು ಯಾರೂ ಕಬಳಿಸಲು ಸಾಧ್ಯವಿಲ್ಲ, ಕೆಲವು ಹೊರಗಿನ ಜನರು ಬಂದು ದಾಖಲೆ ಸೃಷ್ಟಿಸಿ, ಇದು ನಮ್ಮದೆಂದೆ ಇಂದು ನ್ಯಾಯಾಂಗ ಹೋರಾಟ ಮಾಡುತ್ತಿದ್ದಾರೆ, ಇದರ ಬಗ್ಗೆ ನಮಗೆ ಎಸ್ಟು ತಿಳಿದಿದೆ ಎಂದರೆ ಈ ವಿಷಯದ ಮೇಲೆ ಮೂರು ಸಿನಿಮಾ ಮಾಡಬಹುದು, ವಕೀಲರಿಗೂ ತಿಳಿಯದೇ ಇರುವ ಮಾಹಿತಿ ನಮಗೆ ಇದರ ಬಗ್ಗೆ ತಿಳಿದಿದೆ, ಅಷ್ಟು ಈ ಆಸ್ತಿಯ ವಿಷಯವನ್ನು ನಾವು ಅರಿತಿದ್ದೇವೆ ಎಂದರು..

ಕೆಲವರು ಸುಳ್ಳು ದಾಖಲೆ ಸೃಷ್ಟಿಸಿ, ನಿಮ್ಮ ಸಮುದಾಯದ ಎಲ್ಲಾ ಆಸ್ತಿ ಹೊಡೆಯಲು ಪ್ಲಾನ್ ಮಾಡಿದ್ದರು, ಆದರೆ ಮೊದಲಿನಿಂದಲೂ ನಾವು ನಿಮ್ಮ ಜೊತೆ ಇದ್ದೇವೆ, ಮುಂದೆಯೂ ಇರುತ್ತೇವೆ, ಯಾರಿಗೂ ಹೆದರುವ ಅವಶ್ಯಕತೆ ಇಲ್ಲ, ನಿಮ್ಮ ಆಸ್ತಿ ನಿಮಗೆ ಉಳಿಯುವುದು ಎಂಬ ಭರವಸೆ ಮಾತು ಆಡಿದರು..
ಅಲ್ಪಸಂಖ್ಯಾತ ಬಹುಸಂಖ್ಯಾತ ಎಂಬುದು ಏನೂ ಇಲ್ಲಾ, ಯಾರು ದುಡಿತಿರಿ ಅವರಿಗೆ ಶ್ರೇಯಸ್ಸು, ಈ ದೇಶದಲ್ಲಿ ಅಂಬೇಡ್ಕರ ಸಂವಿಧಾನದ ಮುಂದೆ ಯಾರು ದೊಡ್ಡವರಿಲ್ಲ ಯಾರೂ ಸನ್ನವರಿಲ್ಲ, ಎಲ್ಲರೂ ಸಮಾನರು ಎಂಬ ಆಶಯ ವಿರುವ ಸಂವಿಧಾನವನ್ನು ನಾವು ಗೌರವಿಸಬೇಕು, ಮತ್ತು ಸಂರಕ್ಷಿಸಬೇಕು, ಅದು ಇರುವ ವರೆಗೆ ನಮಗೆ ಗೌರವ ಎಂದರು..
ಇನ್ನು ಈ ಅಭಿನಂದನಾ ಕಾರ್ಯಕ್ರಮದಲ್ಲಿ ಸಚಿವರ ಜೊತೆಯಾಗಿ ಶಾಸಕರಾದ ರಾಜು ಶೆಟ್, ವಿಶ್ವಾಸ ವೈದ್ಯ, ಯುವ ನಾಯಕರಾದ ರಾಹುಲ್ ಜಾರಕಿಹೊಳಿ, ಯುವ ಕಾಂಗ್ರೆಸ್ ಘಟಕದ ಪದಾಧಕಾರಿಯಾದ ಮೃಣಾಲ ಹೆಬ್ಬಾಳ್ಕರ್, ಕ್ರೈಸ್ತ ಪಾದ್ರಿಗಳು, ಸಮುದಾಯದ ಪ್ರಮುಖರು, ಸಾವಿರಾರು ಕ್ರೈಸ್ತ ಬಾಂಧವರು ಬಾಗಿಯಾಗಿದ್ದರು..
ವರದಿ ಪ್ರಕಾಶ ಕುರಗುಂದ..