ಬೆಳಗಾವಿ ಜಿಲ್ಲಾ ಗ್ರಾಮೀಣ ಬಿಜೆಪಿ ಘಟಕದಿಂದ ಅಭಿನಂದನೆ…

ಬೆಳಗಾವಿ ಜಿಲ್ಲಾ ಗ್ರಾಮೀಣ ಬಿಜೆಪಿ ಘಟಕದಿಂದ ಅಭಿನಂದನೆ..

ಬಿಜೆಪಿಯ ನವ ಸಂಸದರು ಹಾಗೂ ಎಂಎಲ್ಸಿಗಳಿಗೆ ಶುಭಹಾರೈಕೆ..

ಬೆಳಗಾವಿ : 2024ರ ಲೋಕಸಭಾ ಚುನಾವಣೆಯಲ್ಲಿ ವಿಜಯಮಾಲೆ ಧರಿಸಿದ ನೂತನ ಲೋಕಸಭಾ ಸದಸ್ಯರಿಗೆ ಹಾಗೂ ವಿಧಾನ ಪರಿಷತ್ತಿಗೆ ಆಯ್ಕೆಗೊಂಡ ಬಿಜೆಪಿಯ ಮುಖಂಡರಿಗೆ ಬೆಳಗಾವಿಯ ಜಿಲ್ಲಾ ಗ್ರಾಮೀಣ ಘಟಕದ ಪರವಾಗಿ ಅಧ್ಯಕ್ಷರಾದ ಸುಭಾಸ ಪಾಟೀಲ ಅವರ ನೇತೃತ್ವದಲ್ಲಿ ಶುಭಾಶಯ ತಿಳಿಸಲಾಗಿದೆ..

ನಿನ್ನೆ ದೆಹಲಿಗೆ ತೆರಳಿದ ಬೆಳಗಾವಿ ಗ್ರಾಮೀಣ ಘಟಕದ ಸದಸ್ಯರು, ಶನಿವಾರ ದೆಹಲಿಯಲ್ಲಿ ಬಿಜೆಪಿಯ ಮಿತ್ರಪಕ್ಷ ಜೆಡಿಎಸ್ ಪಕ್ಷದ ನಾಯಕರಾದ ಎಚ್ ಡಿ ಕುಮಾರಸ್ವಾಮಿ, ಬೆಳಗಾವಿ ಸಂಸದರಾದ ಜಗದೀಶ್ ಶೆಟ್ಟರ್, ಹಾಗೂ ಡಾ, ಸಿ, ಮಂಜುನಾಥ ಅವರನ್ನು ಗೌರವಿಸಿ ಅಭಿನಂದಿಸಲಾಗಿದೆ..

ಇದೇ ವೇಳೆ ದೇಹಲಿಯಲ್ಲಿದ್ದ, ನೂತನವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಸಿ ಟಿ ರವಿ ಅವರನ್ನು ಬೇಟಿಯಾಗಿ ಅಭಿನಂದಿಸಿ, ಶುಭ ಕೋರಲಾಗಿದ್ದು, ಅಧ್ಯಕ್ಷರಾದ ಸುಭಾಸ ಪಾಟೀಲ, ಮಲ್ಲಿಕಾರ್ಜುನ ಮಾದಮ್ಮನವರ, ಮತ್ತಿತರರು ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..