ಬೆಳಗಾವಿ ಜಿಲ್ಲಾ ವಿಭಜನೆಯಲ್ಲಿ ರಾಜಕೀಯ ಉದ್ದೇಶ ಇಟ್ಟುಕೊಂಡು ತಪ್ಪು ಮಾಡಬೇಡಿ..
ಜಿಲ್ಲಾ ವಿಭಜನೆಯಲ್ಲಿ ಹುಂಡೆಕಾರ ವರದಿಯನ್ನು ಅನುಸರಿಸಿ..
ಏಳು ತಾಲೂಕುಗಳ ವಿಸ್ತರವಾದ ಬೈಲಹೊಂಗಲ ಉಪವಿಭಾಗ ಜಿಲ್ಲೆಯಾಗಲಿ..
ನ್ಯಾಯವಾದಿ ಎಫ್ ಎಸ್ ಸಿದ್ದನಗೌಡರು..
ಬೈಲಹೊಂಗಲ: ರಾಜ್ಯದ ಆಡಳಿತ ಶಕ್ರಿ ಕೇಂದ್ರ ರಾಜ್ಯದ ದೊಡ್ಡ ಜಿಲ್ಲೆ ಮಹಾರಾಷ್ಟ್ರ ಗಡಿ ಹಂಚಿಕೊಂಡ ಕನ್ನಡ ಮರಾಠಿ ಭಾಷಾ ವಿರಸ ಹಾಗೂ ಸಾಮರಸ್ಯದ ಬೆಳಗಾವಿ ಜಿಲ್ಲೆಯು ಹತ್ತು ಹಲವು ವಿಶೇಷ ಹೊಂದಿದ್ದು ಇಂದು ನಾನಾ ರಾಜಕೀಯ ನಾಯಕರು ಜಿಲ್ಲಾ ವಿಭಜನೆ ಬಗ್ಗೆ ಮಾತನಾಡುತ್ತಿದ್ದಾರೆ..

ಬೆಳಗಾವಿ ಜಿಲ್ಲಾ ವಿಭಜನೆ ವಿಷಯವಾಗಿ ನ್ಯಾಯವಾದಿ ಸಿದ್ದನ ಗೌಡರ ಅವರು ಮಾತನಾಡಿ, ಬೆಳಗಾವಿ ಜಿಲ್ಲೆ ಅಖಂಡವಾಗಿರಲಿ ಇಲ್ಲವೆ ಹುಂಡೆಕಾರ ಆಯೋಗದ ಪ್ರಕಾರ
ಜಿಲ್ಲಾ ವಿಭಜನೆಯಾಗಲಿ ಎಂದಿದ್ದಾರೆ. ಹುಂಡೇಕಾರ ಜೊತೆಗೆ ಮೂರು ಸದಸ್ಯರ ಸಮಿತಿಯ ವರದಿಯ ಪ್ರಕಾರ, ಒಂದು ಜಿಲ್ಲಾ ವಿಭಜನೆ ಆಗಬೇಕಾದರೆ ಜಿಲ್ಲೆಯಲ್ಲಿರುವ ದೊಡ್ಡ ಉಪವಿಭಾಗವನ್ನು ಜಿಲ್ಲೆ ಮಾಡಲು ಮೊದಲು ಆಧ್ಯತೆ ನೀಡಬೇಕು ಎಂಬ ನಿಯಮವಿದೆ..
ಬೆಳಗಾವಿ ಜಿಲ್ಲೆಯಲ್ಲಿ ದೊಡ್ಡ ಉಪವಿಭಾಗಗಳಾದ ಬೈಲಹೊಂಗಲ ಮತ್ತು ಚಿಕ್ಕೋಡಿ ಉಪವಿಭಾಗಗಳು ಜಿಲ್ಲೆಯಾಗಲಿ, ಇದನ್ನು ಮೀರಿ ಜಿಲ್ಲೆಯನ್ನ ವಿಭಜನೆ ಮಾಡುವವರು ರಾಜ್ಯದ ಹಿಂದಿನ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲರೆ ತಮ್ಮ ಆದೇಶ ಹಿಂಪಡೆದಿರುವದನ್ನು ಜಿಲ್ಲಾ ವಿಭಜನೆಗೆ ಕೈ ಹಾಕುವವರು ಮೊದಲು ಅದನ್ನ ಅರಿತುಕೊಳ್ಳಲಿ ಮತ್ತು ನೆನಪು ಮಾಡಿಕೊಳ್ಳಲಿ ಎಂದಿದ್ದಾರೆ..

ಬೆಳಗಾವಿ ಜಿಲ್ಲಾ ವಿಭಜನೆಯಲ್ಲಿ ತಪ್ಪುಗಳು ಮತ್ತೆ ಮತ್ತೆ ಮರುಕಳಿಸಿದರೆ ಬೈಲಹೊಂಗಲ ಉಪವಿಭಾಗದ ಜನತೆ ಸುಮ್ಮನೆ ಇರದೇ ತಕ್ಕ ಉತ್ತರ ಕೊಡಲು ಸಿದ್ದರಿದ್ದಾರೆ. ತಮ್ಮ ರಾಜಕೀಯ ಉದ್ದೇಶಕ್ಕಾಗಿ, ಅಸ್ತಿತ್ವಕ್ಕಾಗಿ ಜನರಿಗೆ ತಪ್ಪು ಸಂದೇಶ ನೀಡಿದರೆ ಸಹಿಸಲಾಗುವದಿಲ್ಲ, ಜಿಲ್ಲಾ ವಿಭಜನೆ ಕೈ ಬಿಡಿ, ಇಲ್ಲವೇ 7ತಾಲೂಕಗಳನ್ನೊಳಗೊಂಡ ಬೈಲಹೊಂಗಲ ಉಪ ವಿಭಾಗವವನ್ನು ಮೊದಲು ಜಿಲ್ಲೆಯನ್ನಾಗಿಸಿ ರಾಜಕೀಯ ನಾಯಕರು ವಾಸ್ತವಿಕವಾಗಿ ಮಾತನಾಡಬೇಕು ಎಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ ಪ್ರಕಾಶ ಬಸಪ್ಪ ಕುರಗುಂದ..