ಬೆಳಗಾವಿ ಜಿಲ್ಲಾ ಹಿಂದುಳಿದ ವರ್ಗಗಳ ಕಚೇರಿಗೆ ಹಿಡಿದಿರುವ ಗ್ರಹಣ ಯಾವುದು??
ಆಹಾರ ಅನುದಾನ ಕೂಡಾ ನೀಡದಷ್ಟು ಇಲಾಖೆ ಬಡವಾಯಿತೆ ??
ಜಿಲ್ಲೆಯ 157 ವಸತಿ ನಿಲಯಗಳ ವಿಧ್ಯಾರ್ಥಿಗಳ ಗತಿಯೇನು??
ಬೆಳಗಾವಿ : ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯು ಹಿಂದಿನಿಂದಲೂ ಸರ್ಕಾರದ ಅನೇಕ ಯೋಜನೆಗಳನ್ನು ಹಾಗೂ ಸೌಲಭ್ಯಗಳನ್ನು ಒಬಿಸಿ ಸಮುದಾಯಕ್ಕೆ ಒದಗಿಸುವ ಮೂಲಕ ಆ ಸಮುದಾಯದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಏಳಿಗೆಗೆ ಕಾರಣವಾದ ಅನೇಕ ನಿದರ್ಶನಗಳಿವೆ..
ಈ ಹಿಂದೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡಾ ತಮ್ಮ ಶಿಸ್ತು ಹಾಗೂ ವೃತ್ತಿ ಸಾಮರ್ಥ್ಯದಿಂದ ಉತ್ತಮ ಕಾರ್ಯ ಮಾಡುತ್ತಾ, ಸಾರ್ವಜನಿಕರಿಗೂ ಹಾಗೂ ಇಲಾಖೆಗೂ ಉತ್ತಮ ಹೆಸರು ತಂದು ಕೊಟ್ಟಿದ್ದರು, ಆದರೆ ಇತ್ತೀಚೆಗೆ ಬೆಳಗಾವಿಯ ಈ ಜಿಲ್ಲಾ ಮಟ್ಟದ ಕಚೇರಿಗೆ ಯಾವ ಗ್ರಹಣ ಹಿಡಿದಿದೆಯೋ ಗೊತ್ತಿಲ್ಲ, ಅವ್ಯವಸ್ಥೆಯ ಆಗರವಾಗಿದೆ..

ಜಿಲ್ಲೆಯಲ್ಲಿ ಇಲಾಖೆಗೆ ಸಂಬಂದಿಸಿದ ಒಟ್ಟು 157 ವಸತಿ ನಿಲಯಗಳು ಇದ್ದು, 57 ಮೆಟ್ರಿಕ್ ಪೂರ್ವ ಹಾಗೂ ಉಳಿದ 100 ಮೆಟ್ರಿಕ್ ನಂತರದ ವಸತಿ ನಿಲಯಗಳು ಇವೆ, ಈ ವಸತಿ ನಿಲಯಗಳಲ್ಲಿ ವಿಧ್ಯಾಭ್ಯಾಸ ಮಾಡುವ ಮಕ್ಕಳೆಲ್ಲ ಮಧ್ಯಮ ಹಾಗೂ ಬಡಕುಟುಂಬದ ವಿಧ್ಯಾರ್ಥಿಗಳು..
ಮೂಲಗಳ ಪ್ರಕಾರ ಕಳೆದ ಡಿಸೆಂಬರ್ ಅಂದರೆ, 2023ರ ಡಿಸೆಂಬರ್ ನಿಂದ ಬೆಳಗಾವಿ ತಾಲೂಕಿನ ವಸತಿ ನಿಲಯಗಳಿಗೆ ಆಹಾರದ ಬಿಲ್ ಆಗಿಲ್ಲ ಎಂಬ ಮಾಹಿತಿ ಇದ್ದು, ಉಳಿದ ತಾಲೂಕುಗಳಿಗೆ ಸುಮಾರು ಮೂರ್ನಾಲ್ಕು (ಫೆಬ್ರುವರಿಯಿಂದ) ತಿಂಗಳುಗಳಿಂದ ಆಹಾರದ ಬಿಲ್ ಆಗದೇ ಇರುವದು ಶೋಚನೀಯ..
ಇಲಾಖೆಯ ಬೇರೆ ಜಿಲ್ಲೆಗಳ ವಸತಿ ನಿಲಯಗಳಿಗೆ ಸರಿಯಾಗಿ ಆಹಾರದ ವೆಚ್ಚ ಸಂದಾಯ ಆಗುತ್ತಿರುವಾಗ ಬೆಳಗಾವಿ ಜಿಲ್ಲೆಯ ಬಿಲ್ ಮಾತ್ರ ಯಾಕೆ ನಿಲ್ಲುತ್ತಿದೆ ?? ಇದರಲ್ಲಿ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿಯಾದ ಶಿವಪ್ರಿಯಾ ಕಡೆಚೂರ ಅವರ ಅಸಮರ್ಥತೆ ಇದೆಯಾ ? ಯಾರಾದರೂ
ಉದ್ದೇಶಪೂರ್ವಕವಾಗಿ ಅನುದಾನ ತಡೆಯುತ್ತಿದ್ದಾರಾ? ಅನುದಾನದ ದುರುಪಯೋಗ ಆಗಿದೆಯಾ? ಹೀಗಾದರೆ ಬಡ ಮಕ್ಕಳು ವಸತಿ ನಿಲಯದಲ್ಲಿ ಇದ್ದು ಹೇಗೆ ಅಧ್ಯಯನ ಮಾಡಬೇಕು ??
ನಿಲಯ ಪಾಲಕರು ಎಲ್ಲಿಂದ ಆಹಾರ ತಂದು ಒದಗಿಸಬೇಕು?? ಸಿಬ್ಬಂದಿ ಅನುಭವಿಸುತ್ತಿರುವ ಕಿರುಕುಳ ನಿಜವೇ?? ಎಂಬ ಹಲವಾರು ಪ್ರಶ್ನೆಗಳಿಗೆ ಇಲಾಖಾ ಜಿಲ್ಲಾ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉತ್ತರಿಸಬೇಕಿದೆ..

ಒಂದು ಕಡೆ, ಇಲಾಖೆಯ ಇತರ ಅಭಿವೃದ್ದಿ ಕಾರ್ಯಗಳಿಗೆ, ವಸತಿ ನಿಲಯಗಳ ಪೀಠೋಪಕರಣಗಳಿಗೆ ಹಣ ಸಂದಾಯ ಆಗಿರುವ ಮಾಹಿತಿ ಇದ್ದು, ಮೂಲಭೂತ ಅವಶ್ಯಕತೆ ಆದ ಆಹಾರದ ಬಿಲ್ ಸಮಯಕ್ಕೆ ಸರಿಯಾಗಿ ಮಾಡದೇ ಇರುವದು ಸಂಶಯಕ್ಕೆ ದಾರಿಯಾಗಿದೆ..
ಇನ್ನು ಜಿಲ್ಲಾ ಹಂತದ ಇಲಾಖೆಯ ಸಿಬ್ಬಂದಿಗಳಲ್ಲಿ ಹೊಂದಾಣಿಕೆ, ಸಹಕಾರ ಇಲ್ಲದಿರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಲಾಖೆಯ ಜಿಲ್ಲಾ ಅಧಿಕಾರಿಗಳು, ಇತ್ತೀಚೆಗೆ ಸಣ್ಣ ಪುಟ್ಟ ವಿಷಯಕ್ಕೆ ಸಿಬ್ಬಂದಿಗಳನ್ನು ಬೆದರಿಸುವ ಅವರ ಮೇಲೆ ಕ್ರಮ ಜರುಗಿಸುವ, ಅಮಾನತ್ತೆ ಮಾಡಿಬಿಡುವ ವರ್ತನೆಯಿಂದ, ಸಿಬ್ಬಂದಿಗಳಲ್ಲಿ ಉಸಿರುಗಟ್ಟಿದ ವಾತಾವರಣದಲ್ಲಿ ಕೆಲಸ ಮಾಡುವ ಅನುಭವ ಆಗಿರಬಹುದೆಂಬ ಸಂಶಯವಿದೆ..
ಯಥಾ ರಾಜಾ, ತಥಾ ಪ್ರಜಾ, ಎನ್ನುವ ಹಾಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಮೃದು ಧೋರಣೆಯಿಂದ, ವಸ್ತುನಿಷ್ಠವಾಗಿ, ಇಲಾಖೆಯ ನಿಬಂಧನೆಗಳ ಅನುಗುಣವಾಗಿ, ಕಾರ್ಯ ಮಾಡಿದರೆ, ತಮ್ಮ ಜೊತೆ ಇಡೀ ಇಲಾಖೆಗೂ ಗೌರವ, ಇಲ್ಲವಾದರೆ ಜನರಿಗೆ ತೊಂದರೆಯ ಜೊತೆಗೆ ಇಲಾಖೆಗೂ ಕೆಟ್ಟ ಹೆಸರು ಬರಬಹುದು..
ವರದಿ ಪ್ರಕಾಶ ಬಸಪ್ಪ ಕುರಗುಂದ….