ಬೆಳಗಾವಿ ತಾಲೂಕು ಕರವೇ ಘಟಕ ಮತ್ತಷ್ಟು ಬಲಿಷ್ಠವಾಗಬೇಕು..

ಬೆಳಗಾವಿ ತಾಲೂಕು ಕರವೇ ಘಟಕ ಮತ್ತಷ್ಟು ಬಲಿಷ್ಠವಾಗಬೇಕು..

ಗ್ರಾಮ ಹಾಗೂ ಹೋಬಳಿ ಮಟ್ಟದಲ್ಲಿ ವ್ಯವಸ್ಥಿತವಾಗಿ ಸಂಘಟಿತವಾಗಲಿ..

ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಸೂಚನೆ..

ಬೆಳಗಾವಿ : ಬೆಳಗಾವಿ ತಾಲೂಕಿನಲ್ಲಿ ಸಂಘಟನೆಯನ್ನು ಬಲಪಡಿಸುವ ಹಾಗೂ ಸಮರ್ಥವಾಗಿ ಕಾರ್ಯನಿರ್ವಹಿಸುವ ದೃಷ್ಟಿಕೋನದಿಂದ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕೆಲಸ ಮಾಡಬೇಕೆಂದು ಕರವೇ ಜಿಲ್ಲಾ ಅಧ್ಯಕ್ಷರಾದ ದೀಪಕ ಗುಡಗನಟ್ಟಿ ಅವರು ಬೆಳಗಾವಿ ತಾಲೂಕು ಕರವೇ ಘಟಕದ ಪದಾಧಿಕಾರಿಗಳಿಗೆ ಕರೆ ನೀಡಿದ್ದಾರೆ.

ರವಿವಾರ ದಿನಾಂಕ 22/06/2025 ರಂದು ನಗರದ ಪ್ರವಾಸಿ ಮಂದಿರ (ಸರ್ಕ್ಯೂಟ್ ಹೌಸ್) ದಲ್ಲಿ ನಡೆದ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ತಾಲೂಕಾ ಪಧಾದಿಕಾರಿಗಳ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಬೆಳಗಾವಿ ತಾಲೂಕಿನಾಧ್ಯಂತ ಎಲ್ಲಾ ಗ್ರಾಮ ಘಟಕಗಳನ್ನು ರಚಿಸಿ, ವ್ಯವಸ್ಥಿತವಾದ ಹೋಬಳಿ ಮಟ್ಟದಲ್ಲಿ ಸಂಘಟನೆ ಮಾಡಿ, ಮಹಿಳಾ ಘಟಕ , ರೈತ ಘಟಕ, ಕಾರ್ಮಿಕ ಘಟಕ, ಯುವ ಘಟಕಗಳನ್ನು ನಿರ್ಮಿಸಿ, ಸಾಮಾಜಿಕ ಜಾಲತಾನವನ್ನು ಬಲಿಷ್ಠ ಪಡಿಸಬೇಕೆಂದು ಕರೆ ನೀಡಿದರು..

ಇದೇ ಸಂದರ್ಭದಲ್ಲಿ ನೂತನವಾಗಿ ಬೆಳಗಾವಿ ತಾಲೂಕಾ ಮಹಿಳಾ ಅಧ್ಯಕ್ಷರಾಗಿ ಕುಮಾರಿ ತೇಜಸ್ವಿನಿ ಮಾಣೆ ಅವರನ್ನು ಆಯ್ಕೆ ಮಾಡಲಾಯಿತು..

ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ಸುರೇಶ್ ಗವನ್ನವರ , ಗಣೇಶ ರೋಕಡೆ, ದಶರಥ ಬನೋಶಿ , ಬಾಳು ಜಡಗಿ , ಉದಯ ಚಿಕ್ಕಣ್ಣವರ , ತಾಲೂಕಾಧ್ಯಕ್ಷರಾದ ಸತೀಶ ಗುಡದವರ್, ಮಂಜುನಾಥ ರಾಠೋಡ, ಅರ್ಜುನ ಕಾಂಬ್ಳೆ, ಪ್ರಕಾಶ ಲಮಾಣಿ, ಬಸವರಾಜ ಅವರೊಳ್ಳಿ ಸೇರಿದಂತೆ ತಾಲೂಕಾ ಪದಾಧಿಕಾರಿಗಳು ಉಪಸ್ಥಿತರಿದ್ದರು..