ಬೆಳಗಾವಿ ನಗರದ ಆಧ್ಯಾತ್ಮಿಕ ಸ್ಥಳಗಳಿಗೆ ಬೇಟಿ ನೀಡಿದ ಆರ್ ಅಶೋಕ್…

ಬೆಳಗಾವಿ ನಗರದ ಆಧ್ಯಾತ್ಮಿಕ ಸ್ಥಳಗಳಿಗೆ ಬೇಟಿ ನೀಡಿದ ಆರ್ ಅಶೋಕ್..

ರಾಜ್ಯ ವಿಪಕ್ಷ ನಾಯಕನಿಗೆ ಸಾಥ್ ನೀಡಿದ ಅಭಯ ಪಾಟೀಲ್, ಸಂಜಯ ಪಾಟೀಲ ಹಾಗೂ ಅನಿಲ್ ಬೇನಕೆ..

ಬೆಳಗಾವಿ : ಮಂಗಳವಾರ ದಿನಾಂಕ 25/06/2024ರಂದು, “ತುರ್ತು ಪರಿಸ್ಥಿತಿ ಸಂವಿಧಾನಕ್ಕೆ ಅಪಚಾರ” ಎಂಬ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಳಗಾವಿಗೆ ಆಗಮಿಸಿದ ರಾಜ್ಯ ಸರ್ಕಾರದ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಹಾಗೂ ಎಂಎಲ್ ಸಿ ಛಲವಾದಿ ನಾರಾಯಣ ಸ್ವಾಮಿ ಅವರು, ತಮ್ಮ ಬಿಡುವಿನ ವೇಳೆಯಲ್ಲಿ ನಗರದ ಕೆಲ ಆಧ್ಯಾತ್ಮಿಕ ಸ್ಥಳಗಳಿಗೆ ಬೇಟಿ ನೀಡಿ, ಧನ್ಯತಾ ಭಾವ ತೋರಿದ್ದಾರೆ..

ಬೆಳಿಗ್ಗೆ ನಗರದ ಅಂಜಂತಾ ಹೋಟೆಲಿನಲ್ಲಿ ಉಪಹಾರ ಸವಿದು, ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಿಗದಿತ ಕಾರ್ಯಕ್ರಮಕ್ಕೆ ಇನ್ನೂ ಕಾಲಾವಕಾಶ ಇದ್ದ ಕಾರಣ, ಶಾಸಕ ಅಭಯ ಪಾಟೀಲ ಹಾಗೂ ಮಾಜಿ ಶಾಸಕರಾದ ಸಂಜಯ ಪಾಟೀಲ ಹಾಗೂ ಅನಿಲ ಬೆನಕೆ ಅವರು ನಗರದ ಕೆಲ ಸ್ಥಳಗಳ ವೀಕ್ಷಣೆ ಮಾಡುವ ಕೋರಿಕೆಯನ್ನು ಮುಂದಿಟ್ಟಾಗ, ಕಮಲ ಬಸದಿ ನೋಡುವ ಇಂಗಿತವನ್ನು ಆರ್ ಅಶೋಕ್ ಅವರು ವ್ಯಕ್ತಪಡಿಸಿದ ತಕ್ಷಣವೇ ಇಡೀ ತಂಡ ಹೊರಟಿತು..

ಮೊದಲಿಗೆ ಕಿಲ್ಲಾ ಕೋಟೆಯಲ್ಲಿಯ ರಾಮಕೃಷ್ಣ ಆಶ್ರಮಕ್ಕೆ ತೆರಳಿ, ಅಲ್ಲಿ ಸ್ವಾಮಿ ವಿವೇಕಾನಂದರು ಆಗಮಿಸಿ, ನೆಲಸಿದ ಸ್ಥಳಕ್ಕೆ ಬೇಟಿ ನೀಡಿದರು, ಸ್ವಲ್ಪ ಹೊತ್ತು ಅಲ್ಲಿರುವ ಚಿತ್ರಗಳು, ಮಾಹಿತಿಗಳ ಪಠಗಳನ್ನು ಓದಿದ ಬಿಜೆಪಿ ನಾಯಕರು, ಸ್ವಾಮಿ ವಿವೇಕಾನಂದರು ಭಾರತದಾದ್ಯಂತ ಪ್ರವಾಸ ಮಾಡಿದ ಮಾರ್ಗಗಳನ್ನು, ನೆಲೆಸಿದ ಸ್ಥಳಗಳನ್ನು ಅಲ್ಲಿಯ ನಕ್ಷೆಯ ಅಧ್ಯಯನದಿಂದ ತಿಳಿದು, ತಮ್ಮ ಸಹಪಾಠಿಗಳೊಂದಿಗೆ ಚರ್ಚೆ ಮಾಡಿದರು, ವಿವೇಕಾನಂದರು ಇದ್ದ ಮನೆಯಲ್ಲಿ ನಿರ್ಮಿತವಾದ ಅವರ ದಿವ್ಯ ಮೂರ್ತಿಯನ್ನು ನೋಡಿ ಭಾವುಕರಾದರು..

ಇದೇ ವೇಳೆ ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳು ಬೇಟಿ ಆದಾಗ ಅವರ ಆಶೀರ್ವಾದ ಪಡೆದು, ಮಾತುಕತೆ ನಡೆಸಿ, ಆಸ್ರಮದ ಕುರಿತು ಮಾಹಿತಿ ಪಡೆದುಕೊಂಡು, ಆಶ್ರಮಕ್ಕೆ ಅವಶ್ಯಕವಿರುವ ಮತ್ತಷ್ಟು ಕೆಲಸ ಕಾರ್ಯ ಮಾಡಿಕೊಡುವುದಾಗಿ ಭರವಸೆ ನೀಡಿದರು..

ನಂತರ ಪಕ್ಕದಲ್ಲೇ ಇರುವ ಪ್ರಸಿದ್ಧ ಐತಿಹಾಸಿಕ ಕಮಲ ಬಸದಿಗೆ ಬೇಟಿ ನೀಡಿದ ನಾಯಕರು, ಅಲ್ಲಿಯ ಶಿಲ್ಪಕಲಾ ಶೈಲಿಗೆ, ಹಾಗೂ ಮೂರ್ತಿಗಳ ವೈಶಿಷ್ಟ್ಯಕ್ಕೆ ಬೇರಗಾಗಿದ್ದು, ಜೈನ ಪರಂಪರೆಯ ಆಧ್ಯಾತ್ಮಿಕತೆಗೆ ನಿದರ್ಶನವಾದ ಹಾಗೂ ಇಡೀ ಸಮಾಜಕ್ಕೆ ಹೆಮ್ಮೆಯ ಐತಿಹಾಸಿಕ ನೆಲೆಯಾದ ಕಮಲ ಬಸದಿಯ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು..

ಬಸದಿಯ ನಿರ್ಮಾಣಕ್ಕೆ ಬಳಸಿದ ಶಿಲೆಗಳು, ಕಲಾಕೃತಿಗಳು, ವಾಸ್ತು, ಆಗಿನ ತಂತ್ರಜ್ಞಾನ ಹಾಗೂ ಮುಂದಾಲೋಚನೆಯಿಂದ ಜನೋಪಯೋಗಿ ನೆಲೆಯನ್ನು ಇಡೀ ಮನುಕುಲಕ್ಕೆ ನೀಡಿದ ಆಗಿನ ಮಹನೀಯರ ಕೊಡುಗೆಯನ್ನು, ಎಂಎಲ್ ಸಿ ಛಲವಾದಿ ನಾರಾಯಣಸ್ವಾಮಿ ಮುಕ್ತ ಕಂಠದಿಂದ ಪ್ರಶಂಸಿದರು..

ಈ ಐತಿಹಾಸಿಕ ಕಮಲ ಬಸದಿಯ ಕುರಿತಾಗಿ ಶಾಸಕ ಅಭಯ ಪಾಟೀಲ, ಹಾಗೂ ಸಂಜಯ ಪಾಟೀಲ ಅವರೂ ಕೂಡಾ ಕೆಲ ಮಹತ್ವದ ಸಂಗತಿಗಳನ್ನು ಬಿಜೆಪಿ ನಾಯಕರ ಜೊತೆ ಚರ್ಚೆ ಮಾಡಿದರು.

ಇದಾದ ನಂತರ ನಗರದ ಸುಪ್ರಸಿದ್ದ ದೇವಸ್ಥಾನದ ಕಪಿಲೇಶ್ವರ ಮಂದಿರಕ್ಕೆ ಬೇಟಿ ನೀಡಿದ ತಂಡವು, ದೇವಸ್ಥಾನದ ವಿಶೇಷತೆಗಳನ್ನು ಗಮನಿಸಿ, ಒಂದೇ ದೇವಸ್ಥಾನದಲ್ಲಿ ಹತ್ತು ಹಲವಾರು ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಶಿವನ ದಂತಕಥೆಗಳ, ಅವತಾರಗಳನ್ನು ಪ್ರದರ್ಶಿಸುವ ಗೋಡೆ ವೀಕ್ಷಿಸಿದ ನಾಯಕರು, ಹಲವಾರು ವಿಶೇಷತೆಗಳ ಈ ಬ್ರಹತ್ ದೇವಸ್ಥಾನವನ್ನು ಮೆಚ್ಚಿಕೊಂಡು, ಕಪಿಲನಾಥನಿಗೆ ನಮಿಸಿ, ಆಶೀರ್ವಾದ ಪಡೆದಿದ್ದಾರೆ..

ಹೀಗೆ ಬೆಳಗಾವಿ ನಗರದ ಕೆಲ ಪುಣ್ಯ ಸ್ಥಳಗಳಿಗೆ ಭೇಟಿ ನೀಡಿದ ಬಿಜೆಪಿ ನಾಯಕರು, ಬರುವ ದಿನಗಳಲ್ಲಿ ಬಿಡು ಮಾಡಿಕೊಂಡು ಬಂದಾಗ, ಈ ಭಾಗದ ಮತ್ತಷ್ಟು ಸ್ಥಳಗಳ ವೀಕ್ಷಣೆ ಮಾಡಿ ಅವುಗಳ ಬಗ್ಗೆ ತಿಳಿದುಕೊಳ್ಳುವ ಆಶಯ ವ್ಯಕ್ತಪಡಿಸಿದ್ದಾರೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..