ಬೆಳಗಾವಿ ನಗರದ ಸುವ್ಯವಸ್ಥೆಗಾಗಿ ಬೆಳಿಗ್ಗೆನೇ ಫೀಲ್ಡಿಗಿಳಿದ ಆಯುಕ್ತರು..!!!
ನಗರದ ತುಂಬಾ ಸೈಕಲ್ ಮೇಲೆ ಸಂಚರಿಸಿ, ಆಗಬೇಕಾದ ಕಾರ್ಯಗಳ ಪರಿಶೀಲನೆ ಮಾಡಿದರು..!!!
ಬೆಳಗಾವಿ : ಮಂಗಳವಾರ ಮುಂಜಾನೆ 5-30 ಗಂಟೆಗೆ ಪಾಲಿಕೆಯ ಆಯುಕ್ತರು ಸದಾಶಿವ ನಗರದಲ್ಲಿನ ವಾಹನ ಶಾಖೆಗೆ ಸೈಕಲ್ಲಿನಲ್ಲಿ ತೆರಳಿ, ವಾಹನಗಳನ್ನು ಪರಿಶೀಲಿಸಿ, ವಾಹನ ಚಾಲಕರ ಹಾಜರಾತಿ ಪರಿಶೀಲನೆ ಮಾಡಿ, ಬಯೋಮೆಟ್ರಿಕ ಅಳವಡಿಸುವಂತೆ ಹಾಗು ಎಲ್ಲ ವಾಹನ ಚಾಲಕರಿಗೆ ಹಾಗು ಕ್ಲೀನರ್ಸ ಇವರು ಬೆಳಿಗ್ಗೆ 5-30 ಕರ್ತವ್ಯಕ್ಕೆ ಹಾಜರಾಗಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿ,ಸ್ವತ: ಪಾಲಿಕೆಯ ಕಸದ ವಾಹನದಲ್ಲಿ ಕುಳಿತುಕೊಂಡು ಕಚೇರಿ ಗಲ್ಲಿ ಶಹಾಪೂರ ಭೇಟಿ ನೀಡಿ ಪೌರಕಾರ್ಮಿಕರ ಹಾಜರಾತಿ ಪರಿಶೀಲಿಸಿದರು..
ಗಿರೀಶ ಧೊಂಗಡಿ ನಗರ ಸೇವಕರು ಹಾಗು ರಾಜು ಭಾತಖಾಂಡೆ ನಗರ ಸೇವಕರು ಇವರೊಂದಿಗೆ ವಾರ್ಡ ನಂ24 ರ ಖಡೆಬಜಾರ ಶಹಾಪೂರದಲ್ಲಿ ಕಸ ವಿಲೇವಾರಿ ಕುರಿತು ಪರಿಶೀಲಿಸಿ, ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಿದರು ಮತ್ತು ಸಾರ್ವಜನಿಕರ ಅಹವಾಲುಗಳ ಕುರಿತು ಚರ್ಚಿಸಿ, ಸಂಬಂದಪಟ್ಟವರಿಗೆಲ್ಲ ನಿರ್ದೇಶನ ನೀಡಿದರು. ಶಿವಾಜಿ ಉದ್ಯಾನವನಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸ್ವಚ್ಜತೆ ಕಾಪಾಡುವಂತೆ ಸೂಚಿಸಿದರು.

ಹುಲಬತ್ತೆ ಕಾಲನಿ ಹಾಗು ಶಾಸ್ತ್ರಿ ನಗರದಲ್ಲಿನ ಕಚ್ಛಾ ನಾಲಾಗಳನ್ನು ಪರಿಶೀಲನೆ ಮಾಡಿ ಸಂಬಂಧಿತರಿಗೆ ಸೂಕ್ತ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು. ಶಾಸ್ತ್ರಿನಗರ 6,7 &8 ಕ್ರಾಸದಲ್ಲಿನ ಖುಲ್ಲಾ ಜಾಗೆಗಳಲ್ಲಿ ಗಿಡಗಂಟಿ ಬೆಳೆದು, ಅಲ್ಲಿನ ಜನರಿಗೆ ಡೆಂಗ್ಯೂ ಆಗುತ್ತಿರುವುದರಿಂದ ಸಂಬಂಧಿಸಿದ ಮಾಲೀಕರುಗಳಿಗೆ ಹೇಳಿ ಸ್ವಚ್ಛಗೊಳಿಸಲು ಸೂಚಿಸುವಂತೆ ನಿರ್ದೇಶನ ನೀಡಿದರು..
ವಿದ್ಯುತ ಕಂಬಗಳನ್ನು ಸರಿಪಡಿಸುವಂತೆ ಸೂಚನೆ ನೀಡಿ, ರೇಲ್ವೆ ನಿಲ್ದಾಣಕ್ಕೆ ಭೇಟಿ ಸ್ವಚ್ಜತೆ ಕುರಿತು ಪರಿಶೀಲಿಸಿ ಸಂಬಂಧಿತರಿಗೆ ಸೂಕ್ತ ನಿರ್ದೇಶನ ನೀಡಿದರು..

ಅನಂತರ ರಾಜು ಭಾತಖಾಂಡೆ ನಗರ ಸೇವಕರು ಇವರೊಂದಿಗೆ ಆಟೋದಲ್ಲಿ ಸಂಚರಿಸಿ ಭಾಜಿ ಮಾರ್ಕೇಟ್ ಹಾಗೂ ರವಿವಾರ ಪೇಠ ಪ್ರದೇಶಕ್ಕೂ ಭೇಟಿ ನೀಡಿ ಸ್ವಚ್ಜತೆ ಕೆಲಸದ ಪರಿಶೀಲನೆ ಮಾಡಿ ಸಂಬಂಧಿತರಿಗೆ ಸೂಕ್ತ ನಿರ್ದೇಶನ ನೀಡಿದರು.
ವರದಿ ಪ್ರಕಾಶ ಕುರಗುಂದ…