ಬೆಳಗಾವಿ ಪತ್ರಕರ್ತರ ಕುರಿತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಯನ್ನು ಖಂಡಿಸಿದ ಪತ್ರಕರ್ತರು..
ಸಚಿವರ ವಿರುದ್ಧ ಅಸಹಕಾರ ಧೋರಣೆ ತಾಳಲು ಸಭೆಯಲ್ಲಿ ತೀರ್ಮಾನ..
ಖಂಡನಾ ಸಭೆಯಲ್ಲಿ ಕೆಲ ಷರತ್ತು ಹಾಗೂ ನಿಬಂಧನೆಗಳ ಬಗ್ಗೆ ತೀರ್ಮಾನಿಸಿದ ಪತ್ರಕರ್ತರು..
ಬೆಳಗಾವಿ : ಗುರುವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಪತ್ರಕರ್ತರು ಸೇರಿ ನಡೆಸಿದ ಸಭೆಯಲ್ಲಿ ಗಂಭೀರವಾದ ಚರ್ಚೆ ಹಾಗೂ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ಬೆಳಗಾವಿ ಗ್ರಾಮೀಣ ಶಾಸಕಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವೆಯಾದಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಬೆಳಗಾವಿಯ ಕನ್ನಡ ಭವನದಲ್ಲಿ, ಕಳೆದ ಶನಿವಾರ ದಿನಾಂಕ 11/11/2023ರಂದು, ಪತ್ರಕರ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಾ, ಬೆಳಗಾವಿ ಪತ್ರಕರ್ತರು ಬೇಜಾರಾಗುವ ಕೆಲ ಮಾತು ಆಡಿದ್ದರು..

ಅದೇ ಕಾರಣಕ್ಕೆ ಇಂದು, ಬೆಳಗಾವಿಯ ಪತ್ರಕರ್ತರು ಸಭೆ ಸೇರಿ, ಸ್ಥಳೀಯ ಪತ್ರಕರ್ತರ ಜೊತೆಗಿನ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಡೆಯನ್ನು ತೀವ್ರವಾಗಿ ಖಂಡಿಸಿ, ಸಚಿವೆಯವರು ಇತ್ತೀಚೆಗೆ ಬಹಳ ಸಲ ಪತ್ರಕರ್ತರಿಗೆ ಅವಮಾನ ಆಗುವ ರೀತಿಯಲ್ಲಿ ವರ್ತನೆ ಮಾಡಿದ್ದು, ಮೊನ್ನೆ ಪತ್ರಕರ್ತರ ಸನ್ಮಾನ ಸಭೆಯಲ್ಲೇ, ಪತ್ರಕರ್ತರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ್ದು, ಬೆಳಗಾವಿ ಪತ್ರಕರ್ತರ ಸ್ವಾಭಿಮಾನಕ್ಕೆ ದಕ್ಕೆ ಆದಂತಿದೆ…
ಆದಕಾರಣ ಸಚಿವೆಯವರ ವಿರುದ್ಧ, ಬೆಳಗಾವಿ ಪತ್ರಕರ್ತರು ಖಂಡನಾ ಸಭೆ ನಡೆಸಿ, ಒಕ್ಕಟ್ಟಿನ ನಿರ್ಣಯದ ತೀರ್ಮಾನ ಕೈಗೊಂಡಿದ್ದು, ಪ್ರಮುಖ ನಿರ್ಣಗಳೆಂದರೆ,

1) ಪತ್ರಕರ್ತರ ಬಗ್ಗೆ ಸಚಿವೆಯವರು ಹೇಳಿದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಲಾಯಿತು..
2) ಸಚಿವರು ತಮ್ಮ ಹೇಳಿಕೆ ಹಿಂಪಡೆದುಕೊಂಡು ಬೇಷರತ್ತು ಕ್ಷಮೆ ಯಾಚಿಸಬೇಕು ಎಂಬ ಒಕ್ಕೊರಲಿಂದ ಒತ್ತಾಯಿಸಲಾಯಿತು..
3) ಸಚಿವರ ಹೇಳಿಕೆ ವಿರುದ್ಧ, ಮುಖ್ಯಮಂತ್ರಿ, ಎಐಸಿಸಿ, ಕೆಪಿಸಿಸಿ, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗಳಿಗೆ ದೂರು ನೀಡಲು ನಿರ್ಧಾರ..
4) ಬೆಳಗಾವಿ ಪತ್ರಕರ್ತರ ಸಭೆಯಲ್ಲಿ ತಗೆದುಕೊಂಡು ಈ ನಿರ್ಣಯಗಳನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರ ಗಮನಕ್ಕೆ ತರುವ ನಿರ್ಧಾರ..
5) ಇಂದಿನ ಸಭೆಯ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಮಾಡಲು ನಿರ್ಧಾರ..
ಈ ಮೇಲಿನ ನಿರ್ಧಾರಗಳನ್ನು ಈ ಖಂಡನಾ ಸಭೆಯಲ್ಲಿ ಸರ್ವಾನುಮತದಲ್ಲಿ ಒಪ್ಪಿಕೊಂಡು, ಮುಂದಿನ ಕಾರ್ಯತಂತ್ರದತ್ತ ಬೆಳಗಾವಿ ಪತ್ರಕರ್ತರು ಹೆಜ್ಜೆ ಇಟ್ಟಿದ್ದು, ಮುಂದೆ ಇದು ಯಾವ ರೂಪ ಪಡೆದುಕೊಳ್ಳುತ್ತದೆ ಎಂದು ಕಾದುನೋಡಬೇಕು..
ವರದಿ ಪ್ರಕಾಶ ಕುರಗುಂದ..