ಬೆಳಗಾವಿ ಪಾಲಿಕೆಗೆ ಐದು ನಾಮನಿರ್ದೇಶಿತ ಸದಸ್ಯರ ನೇಮಕ…

ಬೆಳಗಾವಿ ಪಾಲಿಕೆಗೆ ಐದು ನಾಮನಿರ್ದೇಶಿತ ಸದಸ್ಯರ ನೇಮಕ..

ಪಕ್ಷದ ಸಂಘಟನೆಗಾಗಿ ಶ್ರಮಿಸಿದವರಿಗೆ ಕಾಂಗ್ರೆಸ್ ಸರ್ಕಾರದ ಕೊಡುಗೆ..

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಗೆ ಬಹು ದಿನಗಳಿಂದ ನಾಮನಿರ್ದೇಶಿತ ಸದಸ್ಯರಾಗಲು ಪ್ರಬಲ ಪೈಪೋಟಿಗಳು ನಡೆದಿದ್ದು, ಅದರಂತೆಯೇ ಹಲವಾರು ಸಾರಿ ಆಯ್ಕೆ ಬಯಸಿದವರ ಪಟ್ಟಿಗಳ ಬದಲಾವಣೆ ಕೂಡಾ ಆಗಿದ್ದು, ಈಗ ಐದು ಸ್ಥಾನಗಳಿಗೆ ಅರ್ಹ ವ್ಯಕ್ತಿಗಳನ್ನು ನೇಮಕ ಮಾಡುವ ಮೂಲಕ ಅಂತಿಮ ಪಟ್ಟಿಗೆ ಸರ್ಕಾರ ಅನುಮೋದನೆ ನೀಡಿದೆ..

ಕಳೆದ ಬಾರಿ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ದೆ ಮಾಡಿ, ಕಡಿಮೆ ಅಂತರದಿಂದ ಸೋತಿರುವ ಅಭ್ಯರ್ಥಿಗಳಿಗೆ ಅವಕಾಶ ನೀಡಿದ್ದು, ಜೊತೆಗೆ ಈ ಐವರು ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿಯೂ ತಮ್ಮ ಕೊಡುಗೆ ನೀಡಿರುವ ಹಿನ್ನೆಲೆಯಲ್ಲಿ, ಬೆಳಗಾವಿ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ..

ಬೆಳಗಾವಿಯ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ, ರಮೇಶ್ ಸೊಂಟಕ್ಕಿ, ಉತ್ತರದ ಡಾ ದಿನೇಶ್ ನಾಶಿಪುಡಿ, ಸಿದ್ರಾಯಿ ಮೇತ್ರಿ, ಮಹ್ಮದ ಸಲೀಂ ಸನದಿ, ಹಾಗೂ ಮುಸ್ತಾಕ್ ಮುಲ್ಲಾ, ಎಂಬುವವರು ಬೆಳಗಾವಿ ಪಾಲಿಕೆಯ ನೂತನ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..