ಬೆಳಗಾವಿ ಪಾಲಿಕೆಗೆ ಒಂದು ವಾರದ ಗಡುವು ನೀಡಿದ ಕರವೇ..

ಬೆಳಗಾವಿ ಪಾಲಿಕೆಗೆ ಒಂದು ವಾರದ ಗಡುವು ನೀಡಿದ ಕರವೇ..

ಬೆಳಗಾವಿಯ ರಾಜಕೀಯ ನಾಯಕರೇ ಸರ್ಕಾರದ ಆದೇಶ ಉಲ್ಲಂಘಿಸುತ್ತಿದ್ದಾರೆ..

ನಾಮಫಲಕ ಹಾಗೂ ಜಾಹೀರಾತು ಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಬೇಕು..

ದೀಪಕ್ ಗುಡಗನಟ್ಟಿ, ಕರವೇ ಜಿಲ್ಲಾಧ್ಯಕ್ಷರು ಬೆಳಗಾವಿ..

ಬೆಳಗಾವಿ : ಜಿಲ್ಲೆಯಾದ್ಯಂತ ಹಾಗೂ ಮಹಾನಗರ ಪಾಲಿಕೆಯ ವ್ಯಾಪ್ತಿಯೊಳಗೆ ನಾಮಫಲಕ ಹಾಗೂ ಜಾಹೀರಾತು ಫಲಕಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು, ಇಲ್ಲವಾದರೆ ಸರ್ಕಾರದ “ಕನ್ನಡ ಕಡ್ಡಾಯ ಬಳಕೆಯ ಆದೇಶವನ್ನು” ಕರವೇ ಕಾರ್ಯಕರ್ತರೇ ಬೀದಿಗಿಳಿದು ಪಾಲಿಸಬೇಕಾಗುತ್ತದೆ ಎಂದು ಬೆಳಗಾವಿಯ ಕರವೇ ಜಿಲ್ಲಾಧ್ಯಕ್ಷರಾದ ದೀಪಕ್ ಗುಡಗನಟ್ಟಿ ಅವರು ಗುಡುಗಿದ್ದಾರೆ..

ಸೋಮವಾರ ದಿನಾಂಕ 30/09/2024ರಂದು, ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರ ಮುಂದಾಳತ್ವದಲ್ಲಿ ನೂರಾರು ಕರವೇ ಕಾರ್ಯಕರ್ತರು ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಗುವದರ ಮೂಲಕ ಕನ್ನಡ ಭಾಷೆಯನ್ನು ಕಡ್ಡಾಯ ಗೊಳಿಸಬೇಕು ಎಂಬ ಮನವಿ ಮಾಡಿದ್ದಾರೆ, ರಾಜ್ಯ ಸರ್ಕಾರ ನಾಮಫಲಕ ಹಾಗೂ ಜಾಹೀರಾತು ಫಲಕಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕೆಂದು ಆದೇಶ ಹೊರಡಿಸಿದ್ದರೂ ಪಾಲಿಕೆ ವ್ಯಾಪ್ತಿಯಲ್ಲಿ ಆದೇಶ ಪಾಲನೆ ಆಗುತ್ತಿಲ್ಲವಾದ್ದರಿಂದ ಇಂದು ಕರವೇ ಕಿಡಿ ಕಾರತೊಡಗಿತ್ತು..

ಈ ವೇಳೆ ಜಿಲ್ಲಾಧ್ಯಕ್ಷರು ಮಾತನಾಡಿ, ಬೆಳಗಾವಿ ಮಹಾನಗರದಲ್ಲಿ ರಾಜಕೀಯ ನಾಯಕರು ಅನ್ಯಭಾಷೆಗಳಲ್ಲಿ ಶುಭಾಶಯ ಕೋರಿದ ಬ್ಯಾನರ್ ಹಚ್ಚುತ್ತಿದ್ದು, ರಾಜಕಾರಣಿಗಳೇ ಸರ್ಕಾರದ ಆದೇಶ ಉಲ್ಲಂಘಿಸುತ್ತಿದ್ದಾರೆ, ಅಧಿಕಾರಿಗಳು ರಾಜಕೀಯ ನಾಯಕರ ಪ್ರಭಾವಕ್ಕೆ ಒಳಗಾಗದೇ ಮುಲಾಜಿಲ್ಲದೇ ಅನ್ಯ ಭಾಷಿಯ ನಾಮಫಲಕಗಳನ್ನು ತೆಗೆದುಹಾಕಬೇಕು ಎಂದರು.

ಈ ವಿಷಯದಲ್ಲಿ ಪಾಲಿಕೆ ನಿರ್ಲಕ್ಷ್ಯ ತೋರಿದರೆ, ಕರವೇ ಕಾರ್ಯಕರ್ತರು ಅನ್ಯಭಾಷೆಯ ಫಲಕಗಳನ್ನು ಕಿತ್ತೆಸೆಯುವ ಆಂದೋಲನ ಮಾಡುತ್ತೇವೆ, ಸರ್ಕಾರದ ಆದೇಶ ಎಲ್ಲರೂ ಪಾಲಿಸಬೇಕು, ಕಾನೂನು ಎಲ್ಲರಿಗೂ ಒಂದೇ, ಕನ್ನಡ ಕಡ್ಡಾಯದ ವಿಚಾರದಲ್ಲಿ ಬೆಳಗಾವಿ ಪಾಲಿಕೆ ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ, ಸರ್ಕಾರದ ಆದೇಶ ಪಾಲಿಸುವ ಸಲುವಾಗಿ ಕರವೇ ಕಾರ್ಯಕರ್ತರು ಬೀದಿಗಿಳಿದು ಅನ್ಯಭಾಷೆಯ ನಾಮಫಲಕಗಳನ್ನು ಕಿತ್ತೆಸೆಯ ಬೇಕಾಗುತ್ತದೆ ಎಂದು ನಮ್ಮ ಮನವಿಯಲ್ಲಿ ತಿಳಿಸಿದ್ದೇವೆ ಎಂದಿದ್ದಾರೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..