ಬೆಳಗಾವಿ ಪಾಲಿಕೆಗೆ ನೂತನ ಕಾನೂನು ಸಲಹೆಗಾರ..

ಬೆಳಗಾವಿ ಪಾಲಿಕೆಗೆ ನೇಮಕಗೊಂಡ ನೂತನ ಕಾನೂನು ಸಲಹೆಗಾರ..

ಮಹಾಂತ ಶೆಟ್ಟಿ ರಾಜೀನಾಮೆ ನೀಡಿದ ಸ್ಥಾನಕ್ಕೆ ಜಿಂಗ್ರಾಳ್ಕರ್ ಆಗಮನ..

ಬೆಳಗಾವಿ : ನಿವೃತ ಜಿಲ್ಲಾ ನ್ಯಾಯಾಧೀಶರಾದ ಜಿಂಗ್ರಾಳ್ಕರ್ ಅವರನ್ನು ಪಾಲಿಕೆಯ ನೂತನ ಕಾನೂನು ಸಲಹೆಗಾರರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ..

ಈ ಹಿಂದೆ ಪಾಲಿಕೆಯ ಕಾನೂನು ಸಲಹೆಗಾರರಾಗಿದ್ದ ಮಹಾಂತ ಶೆಟ್ಟಿ ಅವರ ಕಾಲಾವಧಿಯಲ್ಲಿ ಪಾಲಿಕೆಗೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ದೊರೆಯದ ಮತ್ತು ಹಲವು ಬಹುಮುಖ್ಯ ಪ್ರಕರಣಗಳಲ್ಲಿ ಪಾಲಿಕೆಗೆ ನಷ್ಟ ಮತ್ತು ಮುಜುಗರ ಆಗುವ ರೀತಿಯಲ್ಲಿ ಕಾನೂನಿನ ಪ್ರಸಂಗಗಳು ಜರುಗಿದ್ದು, ಪ್ರಸ್ತುತ ವಯಕ್ತಿಕ ಕಾರಣಕ್ಕಾಗಿ ಕಾನೂನು ಸಲಹೆಗಾರ ಸ್ಥಾನಕ್ಕೆಅವರು ರಾಜೀನಾಮೆ ನೀಡಿದ್ದರು.

ಇದರಿಂದಾಗಿ ಪಾಲಿಕೆಗೆ ಮತ್ತು ಸರ್ಕಾರಕ್ಕೆ ಯೋಗ್ಯವಾದ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಿಂಗ್ರಾಳ್ಕರ್ ಎಂಬ ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ಪಾಲಿಕೆಯ ನೂತನ ಕಾನೂನು ಸಲಹೆಗಾರರಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ..

ವರದಿ ಪ್ರಕಾಶ ಬಸಪ್ಪ ಕುರಗುಂದ..