ಬೆಳಗಾವಿ ಪಾಲಿಕೆಗೆ ದೀಡಿರ್ ಲೋಕಾಯುಕ್ತ ದಾಳಿ..
ಲೋಕಾಯುಕ್ತ ಎಸ್ಪಿಯವರ ನೇತೃತ್ವದಲ್ಲಿ ದಾಳಿ..
ಎಲ್ಲಾ ವಿಭಾಗದಲ್ಲಿ ಪರಿಶೀಲನೆ ನಡೆಸಿ, ದಾಖಲೆ ಸಂಗ್ರಹಿಸಿದ ಅಧಿಕಾರಿಗಳು..
ಬೆಳಗಾವಿ : ಮಂಗಳವಾರ ಮುಂಜಾನೆಯೇ ಮಹಾನಗರ ಪಾಲಿಕೆಯ ಮುಖ್ಯ ಕಚೇರಿಗೆ ಲೋಕಾಯುಕ್ತ ಎಸ್ಪಿ ಹನುಮಂತರಾಯಪ್ಪ ನೇತೃತ್ವದ ತಂಡ ದಾಳಿ ನಡೆಸಿದ್ದು, ಪಾಲಿಕೆಯ ವಿವಿಧ ವಿಭಾಗಗಳಲ್ಲಿ ದಾಖಲೆಗಳನ್ನು ಸಂಗ್ರಹಿಸಿದೆ..
ಸುಮಾರು ಎಂಟು ಹತ್ತು ಜನರ ತಂಡ ಪಾಲಿಕೆಯ ವಿವಿಧ ವಿಭಾಗಗಳಾದ, ಲೋಕೋಪಯೋಗಿ, ನಗರ ಯೋಜನೆ, ಆರೋಗ್ಯ ಶಾಖೆ, ಕಂದಾಯ, ಹೀಗೆ ಹಲವು ಶಾಖೆಗಳಿಗೆ ದಾಳಿ ಮಾಡಿ, ದಾಖಲೆ ಪರಿಶೀಲನೆ ಮಾಡುವದರ ಜೊತೆಗೆ, ಸಾರ್ವಜನಿಕರ ಸಮಸ್ಯೆಗಳನ್ನು ವಿಚಾರಿಸಿದೆ..

ಆರೋಗ್ಯ ವಿಭಾಗದಲ್ಲಿ ವ್ಯವಸ್ಥಿತ ದಾಖಲೆ ಇಲ್ಲದ, ದರಪಟ್ಟಿ ಇಲ್ಲದ, ಜನರಿಗೆ ಸಮಸ್ಯೆ ಆಗುವ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳ ವಿರುದ್ಧ ರೇಗಿದ ಲೋಕಾಯುಕ್ತರು, ಇದ್ದುಕೊಳ್ಳುವ ಸಂಗತಿಗಳನ್ನು ತಿಳಿಸಿ, ಕೆಲ ದಾಖಲೆಗಳನ್ನು ಸಂಗ್ರಹಿಸಿದರು..
ನಗರ ಯೋಜನೆ ವಿಭಾಗಕ್ಕೆ ಸ್ವತಃ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗಳೇ ಬೇಟಿ ನೀಡಿ, ಪಾಲಿಕೆಯ ಆಯುಕ್ತರ ಎದುರಿಗೆ ಕೆಲ ದಾಖಲೆಗಳನ್ನು ಸಂಗ್ರಹಿಸಿದ್ದಾರೆ, ಪಾಲಿಕೆಯಲ್ಲಿ ಸುಮಾರು ಮೂರು ತಾಸುಗಳಿಂದ ಪರಿಶೀಲನೆ ನಡೆಯುತ್ತಿದ್ದು, ಲೋಕಾಯುಕ್ತ ಅಧಿಕಾರಿಗಳಿಂದ ಪಾಲಿಕೆ ಅಧಿಕಾರಿಗಳ ವಿಚಾರಣೆ ಇನ್ನೂ ಮುಂದುವರೆದಿದೆ..

ಕಳೆದೆರಡು ತಿಂಗಳಿನಿಂದ ಪಾಲಿಕೆಯ ವಿವಿಧ ವಿಭಾಗಗಳಲ್ಲಿಯ ಕಡತಗಳು ಬಾಕಿ ಇರುವದು, ಅಧಿಕಾರಿಗಳು ಅನುಮೋದನೆಗೆ ಹಿಂದೇಟು ಹಾಕುತ್ತಿರುವುದು, ಸಾರ್ವಜನಿಕರ ಕೆಲಸದಲ್ಲಿ ವಿಳಂಬ ಆಗುತ್ತಿರುವುದು ಈ ದಾಳಿಗೆ ಕಾರಣ ಇರಬಹುದು ಎಂಬ ಅನುಮಾನವಿದೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..