ಬೆಳಗಾವಿ ಪಾಲಿಕೆಯಲ್ಲಿ ಸೇವಾ ನಿವೃತ್ತಿಯ ಸಂಭ್ರಮ..

ಬೆಳಗಾವಿ ಪಾಲಿಕೆಯಲ್ಲಿ ಸೇವಾ ನಿವೃತ್ತಿಯ ಸಂಭ್ರಮ..

ಐದು ಸಿಬ್ಬಂದಿಗಳ ಸೇವಾ ನಿವೃತ್ತಿಯಲ್ಲಿ ಭಾಗಿಯಾದ ಮೇಯರ್ ಉಪಮೇಯರ್ ಅಧಿಕಾರಿಗಳು..

ಬೆಳಗಾವಿ : ಮಹಾನಗರ ಪಾಲಿಕೆ ಬೆಳಗಾವಿಯಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿ, ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ಅನ್ವಯ ಇಂದು ಅಂದರೆ ಮೇ 31ರಂದು ಪಾಲಿಕೆಯ ಐದು ಸಿಬ್ಬಂದಿಗಳು ತಮ್ಮ ಸೇವೆಯಿಂದ ನಿವೃತ್ತರಾಗುತ್ತಿದ್ದು, ಅವರಿಗೆ ಪಾಲಿಕೆಯಿಂದ ಗೌರವಾಯುಕ್ತ ಹೃದಯಸ್ಪರ್ಶಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಪಾಲಿಕೆಯಲ್ಲಿ ಹಲವಾರು ವರ್ಷಗಳಿಂದ ತಮ್ಮ ಸೇವೆ ಸಲ್ಲಿಸಿದ, ಮಂಗಳಾ ಜೀರಗಿಹಾಳ, (ಪೌರ ಕಾರ್ಮಿಕರು,) ಗೋವಿಂದ ಬಿ ಕಾಂಬಳೆ, (ಪೌರ ಕಾರ್ಮಿಕರು) ಮಹಾದೇವ ಕಾಂಬಳೆ, (ಪೌರ ಕಾರ್ಮಿಕರು) ಉದಯಕುಮಾರ ಕಡೊಲ್ಕರ, (ವಾಹನ ಚಾಲಕರು) ಹಾಗೂ ಗಜಾನನ ಕಾಂಬಳೆ, (ದ್ವಿ ದ ಸ) ಇಂದು ತಮ್ಮ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.

ಐದು ಜನ ಸೇವಾ ನಿವೃತ್ತರಿಗೆ ಬೆಳಗಾವಿ ಮಹಾನಗರ ಪಾಲಿಕೆ ನೌಕರರ ಪರಿಷತ್ ಹಾಗೂ ಎಸ್ಸಿ, ಎಸ್ಟಿ ನೌಕರರ ಸಂಘಗಳ ವತಿಯಿಂದ ವಿಶೇಷವಾದ ಬೀಳ್ಕೊಡುಗೆ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಶಾಲು ಹಾರ ಮೈಸೂರ್ ಪೆಠ ತೊಡಿಸಿ, ನೆನಪಿನ ಕಾಣಿಕೆ ನೀಡಿ ಗೌರವೀಯ ಸತ್ಕಾರದ ಮೂಲಕ ಬೀಳ್ಕೊಡುಗೆ ನೆರವೇರಿಸಲಾಗಿದೆ.

ಈ ವಿಶೇಷ ಸೇವಾ ನಿವೃತ್ತಿ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಲಿಕೆಯ ಮಹಾಪೌರರಾದ ಮಂಗೇಶ್ ಪವಾರ್ ಅವರು ವಹಿಸಿಕೊಂಡಿದ್ದು, ಉಪ ಮಹಾಪೌರರಾದ ವಾಣಿ ವಿಲಾಸ ಜೋಶಿ, ಪಾಲಿಕೆ ಆಡಳಿತ ಪಕ್ಷದ ನಗರ ಸೇವಕರಾದ ಗಿರೀಶ ಡೋಂಗಡಿ, ಜಯತೀರ್ಥ ಸವದತ್ತಿ, ಶಂಕರ, ನಾಮನಿರ್ದೇಶಿತ ನಗರ ಸೇವಕರಾದ ಗಿರೀಶ್ ನಾಶಿಪುಡಿ, ಪಾಲಿಕೆಯ ಉಪ ಆಯುಕ್ತರಾದ (ಆಡಳಿತ) ಉದಯಕುಮಾರ ತಳವಾರ, ಉಪ ಆಯುಕ್ತರಾದ (ಕಂದಾಯ) ರೇಷ್ಮಾ ತಾಳಿಕೋಟೆ, ಪರಿಸರ ಅಭಿಯಂತರರಾದ ಹಣಮಂತ ಕಲಾದಗಿ, ಆರೋಗ್ಯ ಅಧಿಕಾರಿಯಾದ ಸಂಜಯ ನಾಂಡ್ರೆ, ಅಭಿಯಂತರರಾದ ಸಚಿನ ಕಾಂಬಳೆ, ಪಾಲಿಕೆ ಸಿಬ್ಬಂದಿಗಳಾದ ಮಲ್ಲಿಕ್ ಗುಂಡಪ್ಪಗೊಳ, ಭರತ ತಳವಾರ, ಸಂತೋಷ ಕಾಂಬಳೆ, ರಮೇಶ, ಆನಂದ ಪಿಂಪ್ರೆ, ಸುಶಾಂತ, ಅನಿಲ ಬೋರಗಾವಿ ಮತ್ತಿತರರು ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..