ಬೆಳಗಾವಿ ಪಾಲಿಕೆಯಲ್ಲಿ 23ನೇ ಅವಧಿಯ ಸ್ಥಾಯಿ ಸಮಿತಿಗಳ ಚುನಾವಣೆ..
ಐದು ನಮಗೆ, ಎರಡು ನಿಮಗೆ ಎಂಬ ಹೊಂದಾಣಿಕೆ ನೀತಿಯಲ್ಲಿ ಸಮಿತಿಗಳ ರಚನೆ..
ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಚುನಾವಣೆಯು ಸರಳ ರೀತಿಯಲ್ಲಿ ಜರುಗಿದ್ದು, ಆಡಳಿತ ಪಕ್ಷ ಬಿಜೆಪಿಯ ಐದು ಹಾಗೂ ವಿರೋಧ ಪಕ್ಷದ ಎರಡು ಸದಸ್ಯರನ್ನು ಸೇರಿಸಿ ಒಟ್ಟು ಏಳು ಸದಸ್ಯರನ್ನು ನಾಲ್ಕು ಸ್ಥಾಯಿ ಸಮಿತಿಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ..

ಮಂಗಳವಾರ ದಿನಾಂಕ 12/08/2025ರಂದು ಬೆಳಗಾವಿ ಮಹಾನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ತೆರಿಗೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ, ನಗರ ಯೋಜನೆ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆದಿದ್ದು, ಮೇಲಿನ ನಾಲ್ಕು ಸ್ಥಾಯಿ ಸಮಿತಿಗಳಿಗೆ ತಲಾ ಏಳು ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಆಡಳಿತ ಪಕ್ಷದ ಲಕ್ಷ್ಮಿ ರಾಥೋಡ್, ಅಭಿಜಿತ್ ಜಾವಕ್ಕರ್, ರೂಪಾ ಚಿಕ್ಕಲದಿನ್ನಿ, ನಿತಿನ್ ಜಾಧವ, ಹಾಗೂ ಪ್ರೀತಿ ಕಾಮಕರ ಎಂಬ ಐದು ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ವಿರೋಧ ಪಕ್ಷದ ಮೋದಿನಸಾಬ ಮತವಾಲೆ ಹಾಗೂ ವೈಶಾಲಿ ಬಾತಕಾಂಡೆ ಅವರನ್ನು ಆಯ್ಕೆ ಮಾಡಲಾಗಿದೆ. ತೆರಿಗೆ ಹಣಕಾಸು ಸ್ಥಾಯಿ ಸಮಿತಿಗೆ ಆಡಳಿತ ಪಕ್ಷದ ಸಂತೋಷ ಪೆಡನೆಕರ್, ರಮೇಶ್ ಮೈಲ್ಯಾಗೊಳ್, ಜಯಂತ ಜಾಧವ, ಸಾರಿಕಾ ಪಾಟೀಲ್ ಹಾಗೂ ರೇಖಾ ಹೂಗಾರ ಎಂಬ ಐದು ಸದಸ್ಯರನ್ನು ಹಾಗೂ ವಿರೋಧ ಪಕ್ಷದ ಅಜೀಮ ಪಟವೆಗಾರ ಹಾಗೂ ಅಪ್ರೊಜ್ ಮುಲ್ಲಾ ಅವರನ್ನು ಆರಿಸಲಾಗಿದೆ.

ನಗರ ಯೋಜನೆ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿಗೆ ಆಡಳಿತ ಪಕ್ಷದ ಸಂದೀಪ್ ಜೀರಾಗ್ಯಾಳ, ರಾಜು ಬಾತಕಂಡೆ, ದೀಪಾ ತೋಪಗಿ, ಶ್ರೇಯಸ್ ನಾಕಾಡಿ ಹಾಗೂ ಮಾಧವಿ ರಾಗೋಚೆ ಎಂಬ ಸದಸ್ಯರನ್ನು ಹಾಗೂ ವಿರೋಧ ಪಕ್ಷದ ಜ್ಯೋತಿ ರಾಜು ಕಡೋಲ್ಕರ ಹಾಗೂ ಶಾಹಿದಖಾನ ಪಠಾಣ್ ಅವರನ್ನು ಆಯ್ಕೆ ಮಾಡಿದ್ದು, ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಆಡಳಿತ ಪಕ್ಷದ ನಂದು ಮಿರಜಕರ, ರವಿ ದೋತ್ರೆ, ನೇತ್ರಾವತಿ ಭಾಗವತ, ವೀಣಾ ವಿಜಾಪುರೆ ಹಾಗೂ ರವಿರಾಜ್ ಸಂಬ್ರೇಕರ್ ಎಂಬ ಸದಸ್ಯರನ್ನು ಹಾಗೂ ವಿರೋಧ ಪಕ್ಷದ ಆಸ್ಮಿತ ಬೈರಗೌಡ ಪಾಟೀಲ್ ಹಾಗೂ ಶಿವಾಜಿ ಪುಂಡಲೀಕ ಮಂಡೋಳಕರ ಅವರನ್ನು ಆಯ್ಕೆ ಮಾಡಲಾಗಿದೆ.

ಮುಂದಿನ ಒಂದು ವರ್ಷದ ಅವಧಿಗೆ ಪಾಲಿಕೆಯ ಅಭಿವೃದ್ಧಿ ಕಾರ್ಯಗಳಲ್ಲಿ ಹಾಗೂ ಸಾರ್ವಜನಿಕ ಸೇವೆಗಳಲ್ಲಿ ಗುಣಮಟ್ಟದ ಪ್ರಗತಿಯನ್ನು ಸಾಧಿಸಲು ಈ ಮೇಲಿನ ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ಸಮಿತಿಗಳ ಹೊಸ ಸದಸ್ಯರು ಮತ್ತಷ್ಟು ಅಭಿವೃದ್ಧಿಪರ ಕಾರ್ಯ ಮಾಡಲೆಂಬುದು ಸಾರ್ವಜನಿಕರ ಆಶಯವಾಗಿದೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..