ಬೆಳಗಾವಿ ಪಾಲಿಕೆಯಿಂದ ಅರ್ಥಪೂರ್ಣವಾಗಿ ಆಚರನೆಯಾದ 2023ರ ಪೌರ ಕಾರ್ಮಿಕ ದಿನಾಚರಣೆ..
ಬೆಳಗಾವಿ : ಶನಿವಾರ ದಿನಾಂಕ 23-09-2023 ರಂದು ಸರ್ಕಾರದ ಆದೇಶದಂತೆ ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ಪೌರಕಾರ್ಮಿಕರ ದಿನಾಚರಣೆಯನ್ನು ಆಯುಕ್ತರು ಮಹಾನಗರ ಪಾಲಿಕೆ ಬೆಳಗಾವಿ ಇವರ ನಿರ್ದೇಶನದಂತೆ ಜಿಲ್ಲಾ ಪೊಲೀಸ್ ಆರಕ್ಷರ ಮೈದಾನದಲ್ಲಿ ಕ್ರೀಡಾಕೂಟಗಳನ್ನು ಹಾಗೂ ಕುಮಾರ್ ಗಂಧರ್ವ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸದರಿ ಪೌರಕಾರ್ಮಿಕರ ದಿನಾಚರಣೆಯಲ್ಲಿ ಉತ್ತರ ಮತಕ್ಷೇತ್ರದ ಶಾಸಕರಾದ ರಾಜು (ಆಶಿಫ) ಸೇಠ, ಪಾಲಿಕೆಯ ಉಪ ಮಹಾಪೌರರು, ಬೆಳಗಾವಿಯ ನಗರ ಸೇವಕರು, ಆಯುಕ್ತರು, ಪಾಲಿಕೆ ಸಿಬ್ಬಂದಿ ಹಾಗೂ ವಿಶೇಷವಾಗಿ ಪಾಲಿಕೆಯ ಎಲ್ಲಾ ಪೌರಕಾರ್ಮಿಕರು ಉಪಸ್ಥಿತರಿದ್ದರರು.

ಸನ್ಮಾನ್ಯ ಶಾಸಕರು, ಪೂಜ್ಯ ಉಪ ಮಹಾಪೌರರು ಜ್ಯೋತಿ ಬೆಳಗುವ ಮೂಲಕ ಹಾಗೂ ಬಲೂನಗಳನ್ನು ಗಾಳಿಗೆ ಬಿಡುವ ಮೂಲಕ ಸದರಿ ಕ್ರೀಡಾಕೂಟ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಅಲ್ಪೋಪಹಾರದ ನಂತರ ಮಹಿಳಾ ಪೌರಕಾರ್ಮಿಕರಿಗೆ ನಿಂಬು ಚಮಚೆ, ಸೂಜಿದಾರ, ಸಂಗೀತ ಖುರ್ಚಿಹಾಗೂ 100 ಮೀಟರ್ ಓಟದ ಕ್ರೀಡೆಯನ್ನು ಆಯೋಜಿಸಲಾಗಿತ್ತು ಮಹಿಳೆ ಪೌರಕಾರ್ಮಿಕರು ಪ್ರಶಸ್ತಿಗಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಅದೇ ರೀತಿ ಪುರುಷ ಪೌರಕಾರ್ಮಿಕರಿಗೆ ಕ್ರಿಕೆಟ್ ಕಬ್ಬಡ್ಡಿ,ಹಗ್ಗ ಜಗ್ಗಾಟ, ಶಾರ್ಟ್ ಪುಟ್ ಹಾಗೂ 100 ಮೀಟರ್ ಊಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಪುರುಷ ಪೌರಕಾರ್ಮಿಕರು ಪ್ರಶಸ್ತಿಗಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಎಲ್ಲಾ ಪೌರಕಾರ್ಮಿಕರಿಗೆ ಕ್ರೀಡಾ ಮೈದಾನದಲ್ಲಿಯೇ ಹೆಲ್ತ್ ಚೆಕ್ ಅಪ್ ಕ್ಯಾಂಪ್ ಆಯೋಜಿಸಲಾಗಿತ್ತು.

ಊಟದ ನಂತರ ಕುಮಾರ ಗಂಧರ್ವ ರಂಗಮಂದಿರದಲ್ಲಿ ಪೌರಕಾರ್ಮಿಕರ ಮನೋರಂಜನೆಗಾಗಿ ಹಾಸ್ಯ, ಸಂಗೀತ ಹಾಗೂ ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಸಾಯಂಕಾಲ 4:00 ಗಂಟೆಗೆ ಸನ್ಮಾನ್ಯ ಶಾಸಕರು ಉತ್ತರ ಮತಕ್ಷೇತ್ರ, ಉಪ ಮಹಾಪೌರರು, ಬೆಳಗಾವಿ ಎಲ್ಲಾ ನಗರಸೇವಕರು ಹಾಗೂ ಮಾನ್ಯ ಆಯುಕ್ತರು ಆದರ್ಶ ಪೌರಕಾರ್ಮಿಕರಿಗೆ ಸನ್ಮಾನ್ಯ ಮಾಡಿದರು..

ಕ್ರೀಡಾಕೂಟಗಳಲ್ಲಿ ಪ್ರಥಮ ದ್ವಿತೀಯ ಮತ್ತು ತೃತ್ತಿಯ ಸ್ಥಾನಗಳನ್ನು ಪಡೆದ ಪೌರಕಾರ್ಮಿಕರಿಗೆ ಪ್ರಮಾಣ ಪತ್ರ, ಪ್ರಶಸ್ತಿ ಹಾಗೂ ನಗದು ಬಹುಮಾನಗಳನ್ನು ವಿತರಿಸಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರ ದಿನಾಚರಣೆಯನ್ನು ವಿಜ್ರಂಭಣೆದಿಂದ ಆಚರಿಸಲಾಯಿತು.
ವರದಿ ಪ್ರಕಾಶ ಕುರಗುಂದ..