ಬೆಳಗಾವಿ ಪಾಲಿಕೆಯಿಂದ ಮತದಾರರ ಪಟ್ಟಿಯ ಪರಿಷ್ಕರಣೆಯ ಜಾಗೃತಿ ಜಾಥಾ..
ನಗರದ ವಿವಿಧ ಕಾಲೇಜುಗಳಲ್ಲಿ ಪಾಲಿಕೆ ಆಯುಕ್ತರಿಂದ ಚಾಲನೆ..
ಬೆಳಗಾವಿ : ಶುಕ್ರವಾರ ಮುಂಜಾನೆ ನಗರದ ಸಮಿತಿ ವಾಣಿಜ್ಯ ಮಹಾವಿದ್ಯಾಲಯದ ಸಹಭಾಗಿತ್ವದಲ್ಲಿ, ಬೆಳಗಾವಿ ಮಹಾನಗರ ಪಾಲಿಕೆಯು, ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2024ರ ಜಾಗೃತ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು..

ಭಾರತ ಚುನಾವಣಾ ಆಯೋಗ ಮುಖ್ಯ ಚುನಾವಣಾಧಿಕಾರಿ ಕರ್ನಾಟಕ ಇವರ ಆದೇಶದಂತೆ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾವಣಿ, ತಿದ್ದುಪಡಿ, ಸ್ಥಳಾಂತರ ಹೀಗೆ ಮುಂತಾದ ಕಾರ್ಯಗಳನ್ನು ಮಾಡುವ ಅವಕಾಶ ಪ್ರಾರಂಭವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ವ್ಯವಸ್ಥಿತವಾಗಿ ನೊಂದಾಯಿಸಿಕೊಳ್ಳಲಿ ಎಂಬುದೇ ಈ ಜಾಗೃತಿ ಅಭಿಯಾನದ ಉದ್ದೇಶ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ…
ಈ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ವಿವಿಧ ಪ್ರಕಾರದ ಅರ್ಜಿಗಳು ಲಭ್ಯವಿದ್ದು, ನಮೂನೆ 6ರಲ್ಲಿ ಹೊಸ ಮತದಾರರು, 7ರಲ್ಲಿ ಪಟ್ಟಿಯಿಂದ ಹೆಸರು ತಗೆದು ಹಾಕುವದು, 6bರಲ್ಲಿ ಆಧಾರ ಸಂಖ್ಯೆ ಲಿಂಕ ಮಾಡುವದು, ನಮೂನೆ 8ರಲ್ಲಿ ತಿದ್ದುಪಡಿಯ ಅವಕಾಶ, ವಿಳಾಸ ಬದಲಾವಣೆ, ಅಂಗವಿಕಲರನ್ನು ಗುರ್ತಿಸುವ ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕರು ಈ ಎಲ್ಲಾ ಸೇವೆಗಳನ್ನು ಪಡೆಯಲು, ವೋಟರ್ ಹೆಲ್ಪ್ ಲೈನ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಅಥವಾ htpp://voters.eci.gov.in ವೆಬ್ ಸೈಟ್ ಗೆ ಲಾಗಿನ್ ಆಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಬೂತ್ ಮಟ್ಟದ ಅಧಿಕಾರಿ ಅಥವಾ ಮತದಾರರ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಬಹುದು ಎಂಬ ಮಾಹಿತಿ ನೀಡಿದ್ದಾರೆ..
ಬೆಳಗಾವಿ ನಗರದ ಪ್ರತಿ ಕಾಲೇಜಿಗೆ ತೆರಳಿ 18 ವರ್ಷ ಮುಗಿದ ವಿಧ್ಯಾರ್ಥಿಗಳ ನೋಂದಾವಣಿ ಕಾರ್ಯಮಾಡುತ್ತಿದ್ದು, ಕಾಲೇಜಿನ ಸಹಯೋಗದಲ್ಲಿ ವಿದ್ಯಾರ್ಥಿಗಳನ್ನು ಒಳಗೊಂಡಂತೆ ನಮ್ಮ ಪಾಲಿಕೆ ಸಿಬ್ಬಂದಿಗಳು ಈ ಮತದಾರ ಪಟ್ಟಿ ಪರಿಷ್ಕರಣೆ ಜಾಥಾ ಮಾಡುತ್ತಿದ್ದು, ದಿನಾಂಕ 09/12/2023ರ ವರೆಗೆ ಈ ಪರಿಷ್ಕರಣೆಗೆ ಅವಕಾಶ ಇದೆ ಎಂದು ಈ ಸಂದರ್ಭದಲ್ಲಿ ಆಯುಕ್ತರು ತಿಳಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯ ಉತ್ತರ ಶಾಖೆಯ, ಕಂದಾಯ ವಿಭಾಗದ ಸಿಬ್ಬಂದಿಗಳು ಈ ಜಾಗೃತಿ ಜಾಥಾದಲ್ಲಿ ಭಾಗಿಯಾಗಿದ್ದರು..
ವರದಿ ಪ್ರಕಾಶ ಕುರಗುಂದ..