ಬೆಳಗಾವಿ ಪಾಲಿಕೆಯ ಪರಿಷತ್ ಸಭೆಯಲ್ಲಿ ಮತ್ತೆ ಕೋಳಿ ಜಗಳ…

ಬೆಳಗಾವಿ ಪಾಲಿಕೆಯ ಪರಿಷತ್ ಸಭೆಯಲ್ಲಿ ಮತ್ತೆ ಕೋಳಿ ಜಗಳ..

ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯ ಕೆಸರೆರಚಾಟದಲ್ಲಿ ಅಭಿವೃದ್ಧಿ ವಿಷಯ ಮಾಯ..

ಮಹಾಪೌರರ ಸ್ಥಾನ ಮೌಲ್ಯಯುತವಾದದ್ದು, ಅದಕ್ಕೆ ದಕ್ಕೆ ಆಗದಂತೆ ನಡೆದುಕೊಳ್ಳಬೇಕು..

ರಾಜು (ಆಶೀಫ್) ಸೇಠ್..

ಬೆಳಗಾವಿ : ಬುಧವಾರ ದಿನಾಂಕ 29/11/2023ರಂದು ನಗರದ ಮಹಾನಗರ ಪಾಲಿಕೆಯ ಸಭಾಭವನದಲ್ಲಿ ನಡೆದ ಪಾಲಿಕೆಯ ಪರಿಷತ್ ಸಭೆಯಲ್ಲಿ ಅಭಿವೃದ್ಧಿ ಪರವಾದ ಚರ್ಚೆಗಳ ಕೊರತೆ ಇದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ಅಭ್ಯರ್ಥಿಗಳು ಒಬ್ಬರ ಮೇಲೆ ಮತ್ತೊಬ್ಬರ ಕೆಸರೆರಚಾಟವೇ ಹೆಚ್ಚಾಗಿದ್ದಂತೆ ಕಾಣುತ್ತಿತ್ತು…

ಮೊದಲಿಗೆ ಮಹಾಪೌರರು ಸಭೆಗೆ ಎಲ್ಲರಲ್ಲೂ ಸ್ವಾಗತಿಸಿದ ನಂತರ, ಬಿಜೆಪಿ ನಗರ ಸೇವಕಿ ವಾಣಿ ಜೋಶಿ ಅವರು, ನಗರ ಸೇವಕ ಅಭಿಜಿತ್ ಜವಳಕರ ಮೇಲೆ ಆದ ಹಲ್ಲೆಯ ಕುರಿತಾಗಿ ವಿವರಿಸಿ, ನಮಗೆ ಎಲ್ಲಾ ನಗರಸೇವಕರಿಗೂ ಕೆಲಸ ಮಾಡಲು ಭದ್ರತೆ ಬೇಕು, ಹೀಗಾದರೆ ನಾವು ಹೇಗೆ ಕೆಲಸ ಮಾಡಬೇಕು? ಇದಕ್ಕೆ ಪರಿಹಾರವನ್ನು ಈ ಸಭೆಯಲ್ಲಿ ನೀಡಬೇಕು ಎಂದು ಒತ್ತಾಯಿಸಿದರು..

ಬಿಜೆಪಿ ನಗರ ಸೇವಕಿ ವೀಣಾ ಹಿರೇಮಠ ಹಾಗೂ ಸರಿತಾ ಪಾಟೀಲ್ ಕೂಡಾ ಇದೆ ವಿಷಯದ ಕುರಿತಾಗಿ ಮಾತನಾಡಿ ಹಲ್ಲೆ ನಡೆಸಿದವರ ಕ್ರಮ ಜರುಗಿಸಬೇಕು ಎಂದರು, ಹಲ್ಲೆಗೊಳಗಾದ ನಗರ ಸೇವಕ ಅಭಿಜಿತ್ ಜವಳಕರ ಕೂಡಾ ತಮ್ಮ ಮೇಲೆ ನಡೆದ ಹಲ್ಲೆಯ ಬಗ್ಗೆ ವಿವಿರಣೆ ನೀಡಿ, ಹಲ್ಲೆ ನಡೆದ ನಂತರ, ಆಸ್ಪತ್ರೆಯಲ್ಲಿ ಹಾಗೂ ನನ್ನ ವಿಚಾರಣೆ ಮಾಡಿದ ರೀತಿ, ಜೈಲಿಗೆ ಕರೆದೊಯ್ದ ರೀತಿಯ ಬಗ್ಗೆ ತುಂಬಾ ಅಸಮಾಧಾನ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ವಿಷಯದ ಕುರಿತಾಗಿ ಮಾತನಾಡಿದ ಶಾಸಕ ಅಭಯ ಪಾಟೀಲ ಅವರು, ಮೊಬೈಲ್ ಟವರ್ ನಿಲ್ಲಿಸುವ ಬಗ್ಗೆ ಸಾರ್ವಜನಿಕರ ತಕರಾರು ಇದ್ದ ಕಾರಣ, ನಗರ ಸೇವಕ ಅಲ್ಲಿ ವಿಚಾರಣೆ ಮಾಡಲು ಹೋದಾಗ, ಅವನ ಮೇಲೆ ಹಲ್ಲೆ ಆಗಿದೆ, ಅದರ ಬಗ್ಗೆ ಪೊಲೀಸ್ ಇಲಾಖೆಯಿಂದ ಯಾವ ಕ್ರಮವೂ ಆಗಲಿಲ್ಲ, ಇನ್ನು ಆಸ್ಪತ್ರೆಯಲ್ಲಿ ಟ್ರಿಟಮೆಂಟ್ ತಗೆದುಕೊಳ್ಳುವ ಸಮಯದಲ್ಲಿ ಪೊಲೀಸರು ಏಕೆ ಮಧ್ಯಪ್ರವೇಶ ಮಾಡಬೇಕು? ಟ್ರೀಟ್ಮೆಂಟ್ ಇದ್ದಾಗಲೂ ಯಾಕೆ ಡಿಸ್ಚಾರ್ಜ್ ಮಾಡಬೇಕು? ಡಿಸ್ಚಾರ್ಜ್ ಸಮರಿ ಪೊಲೀಸರಿಗೆ ಯಾಕೆ ಬೇಕು? ವೈದ್ಯರು ಮಾಹಿತಿ ನೀಡಿ, ನ್ಯಾಯ ಕೇಳಲು ಹೋದಾಗ ಕಮಿಷನರ್ ವೈದ್ಯರಿಗೆ ಬೆದರಿಕೆ ಹಾಕೋದು ಎಷ್ಟು ಸರಿ ಎಂದರು, ಈ ಪೊಲೀಸ್ ಅಧಿಕಾರಿಗಳು ನ್ಯಾಯದ ಪರ ಇದ್ದಾರೋ ಅಥವಾ ಪ್ರಭಾವಿಗಳ ಪರ ಇದ್ದಾರೋ.

ಅರೆಸ್ಟ್ ಮಾಡಿದ್ದರ ಬಗ್ಗೆ ನಮಗೆ ಪ್ರಶ್ನೆ ಇಲ್ಲಾ, ಆದರೆ ಚಿಕಿತ್ಸೆ ನಡೆಯುವಾಗ ನೀವು ಏಕೆ ಅರೆಸ್ಟ್ ಮಾಡೋದು? ಇದರ ಬಗೆ ಮಹಾಪೌರರಿಗೆ ಪತ್ರ ಬರೆದರೆ ಸಾಲದು, ರಾಜ್ಯಪಾಲರಿಗೆ ಪತ್ರ ಬರೆಯಬೇಕು ಮಾನವ ಹಕ್ಕು ಆಯೋಗಕ್ಕೆ ದೂರು ನೀಡಬೇಕು.

ವೈದ್ಯರು ಸಿಪಿಐ ಮೇಲೆ ಇಷ್ಟು ದೂರು ನೀಡಿದರು ಆ ಸಿಪಿಐನನ್ನು ಇನ್ನು ಅಮಾನತ್ತು ಮಾಡಿಲ್ಲ, ಆದಷ್ಟು ಬೇಗ ಪೋಲಿಸ್ ಕಮಿಷನರ್ ಸಿಪಿಐನನ್ನು ಸಸ್ಪೆಂಡ್ ಮಾಡಬೇಕು, ಇಲ್ಲಾ ಅಂದರೆ ಇಡೀ ತಪ್ಪನ್ನು ಕಮಿಷನರ್ ತಮ್ಮ ಮೇಲೆ ಹಾಕಿಕೊಂಡಂತೆ ಆಗುತ್ತದೆ ಎಂದರು.

ಈ ವಿಷಯದ ಕುರಿತಾಗಿ, ರಾಜ್ಯ ಸರ್ಕಾರದ ಗೃಹ ಮಂತ್ರಿ ಹಾಗೂ ಕೇಂದ್ರದ ಗೃಹಮಂತ್ರಿ ದೂರು ನೀಡಬೇಕು, ಹೀಗೆ ಮುಂದುವರೆದರೆ ಎಲ್ಲಾ ನಗರ ಸೇವಕರ ಮೇಲೆಯೂ ದಬ್ಬಾಳಿಕೆ ಆಗುತ್ತದೆ ಎಚ್ಚರವಾಗಿ ಇದ್ದು, ಇದರ ವಿರುದ್ಧ ಹೋರಾಟ ಮಾಡಿ ಎಂದರು..

ಮಹಾಪೌರರು ಹೋದಾಗ ಪೊಲೀಸ್ ಕಮಿಷನರ್ ಕಚೇರಿ ಸಿಬ್ಬಂದಿಯವರು ಅವರನ್ನು ಗೌರವಿತವಾಗಿ ನಡೆಸಿಕೊಳ್ಳುವ ಅವಮಾನ ಗೊಳಿಸಿದ್ದಾರೆ ಎಂದು ನಗರ ಸೇವಕರು ಆರೋಪಿಸಿದಾಗ,

ಈ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಪಕ್ಷದ ಶಾಸಕ ರಾಜು ಸೇಠ್ ಅವರು, ನಗರ ಸೇವಕರ ಮೇಲಿನ ಹಲ್ಲೆಯನ್ನು ನಾವೂ ಕೂಡಾ ಖಂಡಿಸುತ್ತೇವೆ, ಆದರೆ ತನಿಖೆ ಆಗದ ಹೊರತು ಯಾರ ಮೇಲೂ ತಪ್ಪು ಹಾಕೋದು ಸರಿ ಅಲ್ಲಾ, ಅಧಿಕಾರಿಗಳು ತಪ್ಪು ಮಾಡಿದರು ಎನ್ನುವದು ತನಿಖೆಯ ಮೇಲೆಯೇ ಗೊತ್ತಾಗುತ್ತದೆ, ತನಿಖಾ ವರದಿ ಬಂದ ನಂತರ ಯಾರು ತಪ್ಪು ಮಾಡಿದ್ದರೆ ಅವರ ಮೇಲೆ ಕ್ರಮ ಜರುಗುತ್ತೆ ಎಂದರು..

ಇನ್ನು ಮಹಾಪೌರರಿಗೆ ಆದ ಅವಮಾನ ನಮಗೆಲ್ಲ ಆದ ಅನುಮಾನ, ಹಾಗೆ ಆಗಬಾರದು, ಮಹಾಪೌರರು ತಾವು, ತಮ್ಮ ಸ್ಥಾನದ ಘನತೆಗೆ ತಕ್ಕಂತೆ, ಎಲ್ಲಾ ಅಧಿಕಾರಿ, ಜನಪ್ರತಿನಿಧಿಗಳನ್ನು ತಾವು ಇದ್ದ ಕಡೆಗೆ ಕರೆಸಿಕೊಂಡು ಮಾಹಿತಿ ಪಡೆದರೆ ಸೂಕ್ತ, ತಾವೊಬ್ಬ ಗೌರವೀಯ ಸ್ಥಾನದಲ್ಲಿ ಇದ್ದವರು ಎಲ್ಲಾ ಕಡೆಗೂ ಹೊಗುವದು ಸೂಕ್ತ ಅಲ್ಲಾ ಎಂದರು..

ನಗರ ಸೇವಕರು ತಮ್ಮ ವಾರ್ಡಿನಲ್ಲಿ ನಮ್ಮ ಅನುಮತಿ ಮೇಲೆಯೇ ಕಟ್ಟಡ ಪರವಾನಿಗೆ ಹಾಗೂ ಕಟ್ಟಡ ಮುಕ್ತಾಯ ಸರ್ಟಿಫಿಕೇಟ್ ನೀಡಬೇಕು ಎಂದು ಕೆಲ ನಗರ ಸೇವಕರು ನಿಯಮ ಮಾಡಿದ್ದಾರೆ ಇದು ಯಾವ ನ್ಯಾಯ? ಇದರ ಬಗ್ಗೆ ಅಧಿಕಾರಿಗಳು ಸ್ಪಷ್ಟೀಕರಣ ನೀಡಬೇಕು ಎಂದು ವಿರೋಧ ಪಕ್ಷದ ನಗರ ಸೇವಕ ಪ್ರಶ್ನೆ ಮಾಡಿದರು..

ಇದರ ಬಗ್ಗೆ ಚರ್ಚೆ ಆಗಿ, ಕೊನೆಗೆ ಇದರಲ್ಲಿ ನಗರ ಸೇವಕರ ಕೈವಾಡ ಏನೂ ಇಲ್ಲಾ, ಬದಲಾಗಿ ಅಧಿಕಾರಿ ಕಳ್ಳಾಟದಿಂದ ಎಲ್ಲರಿಗೂ ಸಮಸ್ಯೆ ಆಗುತ್ತಿದೆ, ಅದಕ್ಕಾಗಿ ಅಧಿಕಾರಿಗಳು ಈ ವಿಷಯದ ಕುರಿತಾಗಿ ಮಾಹಿತಿ ನೀಡಿ ಎಂದು ಶಾಸಕ ಅಭಯ ಪಾಟೀಲ್ ಹೇಳಿದರು..

ಕಟ್ಟಡ ನಿರ್ಮಾಣ ಪರವಾನಿಗೆ ಸಿಕ್ಕ ನಂತರ ಅಧಿಕಾರಿ ಎಸ್ಟು ಸಲ ಬೇಟಿ ನೀಡಬೇಕು? ಸಮೀಕ್ಷೆ ಏನು ಮಾಡಬೇಕು? ಕಟ್ಟಡ ಪೂರ್ಣ ಪ್ರಮಾಣಪತ್ರ ಯಾವ ಆಧಾರದ ಮೇಲೆ ನೀಡುವಿರಿ ಎಂದು ಪ್ರಶ್ನೆ ಮಾಡಿದರು..

ಮತ್ತೆ ನಗರ ಸೇವಕ ಹಣಮಂತ ಕೊಂಗಾಲಿ ಮಾತನಾಡಿ ಕಾಯಿದೆಯಲ್ಲಿ ನಗರ ಸೇವಕರ ಒಪ್ಪಿಗೆ ಪಡೆಯಬೇಕು, ಗಮನಕ್ಕೆ ತರಬೇಕು ಎಂಬ ಅನುಚ್ಚೆದ ಇದೆ ಎಂದು ವಾದಿಸಿದಾಗ, ಕಾನೂನು ಸಲಹೆಗಾರರು ಅದನ್ನು ಓದಿ ಹೇಳಿದಾಗ, ಶಾಸಕ ರಾಜು ಸೇಠ್ ಅವರು ನನ್ನ ಗಮನಕ್ಕೆ ತಂದು ಅನುಮತಿ ನೀಡಬೇಕು ಎಂದು ಎಲ್ಲಿಯಾದರೂ ಕಾನೂನು ಇದ್ದರೆ ಹೇಳಿ ಎಂದರು..

ಅದಕ್ಕೆ ಉತ್ತರಿಸಿದ ಪಾಲಿಕೆಯ ಕಾನೂನು ಸಲಹೆಗಾರರು ನನ್ನ ಗಮನಕ್ಕೆ ತಂದು ಪ್ರಮಾಣಪತ್ರ ನೀಡಬೇಕು ಎಂದು ಕಾನೂನು ಇದೆ, ಆದರೆ ಕೊಡಬಾರದಂತು ಇಲ್ಲಾ, ಗಮನಕ್ಕೆ ತಂದು ಕೂಡಾ ಕೊಡಬಹುದು ಎಂಬ ಉತ್ತರ ಪಡೆದುಕೊಂಡ ಶಾಸಕ ರಾಜು ಸೇಠ್..

ನಂತರ ಮಾತನಾಡಿದ ಶಾಸಕ ಅಭಯ ಪಾಟೀಲ್, ಅವರು ಮಾತನಾಡಿ, ನಗರ ಸೇವಕರ ಲೆಟರ್ ಬಗ್ಗೆ ತಪ್ಪು ತಿಳಿಯಬೇಡಿ, ನೀವು ಪತ್ರ ಸರಿಪಡಿಸಿಕೊಳ್ಳುವಂತೆ ತಿಳಿ ಹೇಳಿ ಎಂದು ಸಮಸ್ಯೆಗೆ ಕೊನೆ ಹಾಡಿದರು..

ವರದಿ ಪ್ರಕಾಶ್ ಕುರಗುಂದ..