ಬೆಳಗಾವಿ ಪಾಲಿಕೆಯ ಪೌರ ಕಾರ್ಮಿಕರಿಗೆ ರೈನ್ ಕೋಟ್ ವಿತರಣೆ..
ಪೌರಕಾರ್ಮಿಕರ ಮೊಗದಲ್ಲಿ ಮಂದಹಾಸ ಮೂಡಿಸಿದ ಪಾಲಿಕೆ ಅಧಿಕಾರಿಗಳ ನಡೆ..
ಬೆಳಗಾವಿ : 58 ವಾರ್ಡುಗಳ ವಿಶಾಲ ಕಾರ್ಯವ್ಯಾಪ್ತಿಯನ್ನು ಹೊಂದಿದ ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತವು ಆಗಾಗ ತನ್ನ ಸಮಾಜಮುಖಿ ಹಾಗೂ ಸಿಬ್ಬಂದಿ ಸ್ನೇಹಿ ಕಾರ್ಯಗಳಿಂದ ಜನಮಣ್ಣನೆಗೆ ಪಾತ್ರವಾದ ಹಲವು ನಿದರ್ಶನಗಳಿವೆ..
ಅದೇ ನಿಟ್ಟಿನಲ್ಲಿ ಪಾಲಿಕೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ 259 ಖಾಯಂ ಪೌರಕಾರ್ಮಿಕರಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಸ್ವಚ್ಚತಾ ಕಾರ್ಯ ಮಾಡುತ್ತಿರುವ ಸ್ವಚ್ಚತಾ ಕಾರ್ಮಿಕರಿಗೆ ಪಾಲಿಕೆಯ ಮಹಾಪೌರರು, ಉಪ ಮಹಾಪೌರರು ಹಾಗೂ ಇತರೆ ಸಂಬಂಧಪಟ್ಟ ವಾರ್ಡುಗಳ ನಗರಸೇವಕರ ನೇತೃತ್ವದಲ್ಲಿ ಪೌರ ಕಾರ್ಮಿಕರಿಗೆ ರೈನ್ ಕೋಟಗಳನ್ನು ವಿತರಿಸಲಾಗಿದೆ..

ಸದರಿ ಕಾರ್ಯಕ್ರಮವು ಪಾಲಿಕೆಯ ಆಯುಕ್ತರಾದ ಅಶೋಕ ದುಡಗುಂಟಿ ಅವರ ನಿರ್ದೇಶನದಂತೆ, ಪಾಲಿಕೆಯ ಅಧಿಕಾರಿಗಳಾದ ಉದಯಕುಮಾರ ಬಿ, ಟಿ, ಉಪ ಆಯುಕ್ತರು ಆಡಳಿತ, ಡಾ ಸಂಜೀವ ನಾಂದ್ರೆ, ಆರೋಗ್ಯಾಧಿಕಾರಿಗಳು, ಹಣಮಂತ ಕಲಾದಗಿ, ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ) ಹಾಗೂ ಪರಿಸರ ಅಭಿಯಂತರರು ಈ ಎಲ್ಲ ಅಧಿಕಾರಿಗಳು ಯಶಸ್ವಿಯಾಗಿ ನಿರ್ವಹಿಸಿದ್ದಾರೆ..

ವರದಿ ಪ್ರಕಾಶ ಬಸಪ್ಪ ಕುರಗುಂದ..