ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಿ ಕೆ ಎಂ ಜಾನಕಿ ನೇಮಕ..
ಬೆಳಗಾವಿ : ಬೆಳಗಾವಿಗೆ ನೂತನ ಪ್ರಾದೇಶಿಕ ಆಯುಕ್ತರನ್ನಾಗಿ ಕೆ.ಎಂ.ಜಾನಕಿ ಅವರನ್ನು ನಿಯುಕ್ತಿಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಈ ಹಿಂದೆ ರಾಜ್ಯ ಹಿಂದುಳಿದ ವರ್ಗಗಳ ಕಾರ್ಯದರ್ಶಿಯಾಗಿದ್ದ ಸಂಜಯ ಶೆಟ್ಟಣ್ಣವರ ಅವರನ್ನು ಹೆಚ್ಚುವರಿಯಾಗಿ ಪ್ರಾದೇಶಿಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲದೆ ಶೆಟ್ಟಣ್ಣವರ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಸರಕಾರ ಅವರನ್ನು ವರ್ಗಾವಣೆ ಮಾಡಿದೆ.
ಸಾರ್ವಜನಿಕರ ಕೆಲಸಗಳನ್ನು ಸಾಕಾಲಕ್ಕೆ ಇತ್ಯರ್ಥ ಆಗದ ಹಿನ್ನೆಲೆಯಲ್ಲಿ ಅವರನ್ನು ಸರಕಾರ ವರ್ಗಾವಣೆ ಮಾಡಿ ಜಾನಕಿ ಅವರನ್ನು ನಿಯುಕ್ತಿಗೊಳಿಸಿದೆ ಎಂಬ ಮಾತಿದ್ದು,
ಸದ್ಯ ರಾಜ್ಯ ಸರಕಾರ ಕೆ.ಎಂ.ಜಾನಕಿ ಅವರನ್ನು ಪ್ರಾದೇಶಿಕ ಆಯುಕ್ತರನ್ನಾಗಿ ನಿಯುಕ್ತಿಗೊಳಿಸಿದೆ. ಇವರು ಈ ಹಿಂದೆ ಬಾಗಲಕೋಟೆ ಜಿಲ್ಲಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.