ಬೆಳಗಾವಿ ಬಿಜೆಪಿ ವಿಜಯ, ಜನತೆಯ ವಿಜಯ, ಜನರಿಗೆ ಅಭಿನಂದನೆ ಸಲ್ಲಿಸುವೆ..
ಜಾರಕಿಹೊಳಿ ಬ್ರದರ್ಸ್ ತಮ್ಮ ಕ್ಷೇತ್ರಕ್ಕೆ ಸೀಮಿತವಾಗದೆ ಎಲ್ಲಾ ಕಡೆಗೆ ಕೆಲಸ ಮಾಡಿದ್ದಾರೆ..
ಬೆಳಗಾವಿ ಜನರ ಪ್ರೀತಿ ವಿಶ್ವಾಸ ವನ್ನು ಅಭ್ಯರ್ಥಿಯಾಗಿ ನಾನು ಮರೆಯಲಿಕ್ಕೆ ಸಾಧ್ಯವಿಲ್ಲ,
ಬೆಳಗಾವಿ : ಗುರುವಾರ ನಗರದ ಖಾಸಗಿ ಹೋಟೆಲ್ಲಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಬೆಳಗಾವಿಯ ನೂತನ ಸಂಸದರಾದ ಜಗದೀಶ್ ಶೆಟ್ಟರ ಅವರು ಮಾತನಾಡುತ್ತಾ, ಬಿಜೆಪಿಗೆ ಮತ ನೀಡಿ ತಮ್ಮನ್ನು ಸಂಸದರಾಗಿ ಆಯ್ಕೆ ಮಾಡಿದ ಬೆಳಗಾವಿ ಸಮಸ್ತ ಜನತೆಗೆ ಕೃತಜ್ಞತೆ ಸಲ್ಲಿಸುತ್ತಾ, ಈ ಲೋಕಸಭಾ ವಿಜಯವನ್ನು ಬೆಳಗಾವಿ ಜನತೆಗೆ ಸಮರ್ಪಿಸಿದ್ದಾರೆ..
ಸುಮಾರು ಆರು ಕ್ಷೇತ್ರಗಳಲ್ಲಿ ನಾವು ಮುನ್ನಡೆ ಸಾಧಿಸಿದ್ದೇವೆ, ಮುಖ್ಯವಾಗಿ ಬೆಳಗಾವಿ ದಕ್ಷಿಣ ಸುಮಾರು 73 ಸಾವಿರ ಮತಗಳ ಮುನ್ನಡೆ ಬಂದಿದ್ದು, ಬೆಳಗಾವಿ ಗ್ರಾಮಾಂತರದಲ್ಲಿ 50 ಸಾವಿರದ 500 ಮತಗಳ ಮುನ್ನಡೆ ಸಿಕ್ಕಿದ್ದು ಮತದಾರರ ಆಶೀರ್ವಾದ ಎನ್ನಬಹುದು ಎಂದಿದ್ದಾರೆ.

ಇನ್ನು ಗೋಕಾಕ ಮತ್ತು ಅರಬಾವಿಯಲ್ಲಿ ಸುಮಾರು 24 ಸಾವಿರದ ಚಿಲ್ಲರೆ ಮತಗಳ ಮುನ್ನಡೆ ದೊರಕಿದೆ, ಗೋಕಾಕಿನಲ್ಲಿ ಶಾಸಕ ರಮೇಶ ಜಾರಕಿಹೊಳಿ ಹಾಗೂ ಬಿಜೆಪಿ ಮುಖಂಡರ ನೆರವಿನಿಂದ ಈ ಮುನ್ನಡೆಯೊಂದಿಗೆ ವಿಜಯ ದೊರಕಿದೆ ಎನ್ನಬಹುದು.
ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರ ಕ್ಷೇತ್ರಕ್ಕೆ ಅಷ್ಟೇ ಸೀಮಿತಗೊಳ್ಳದೆ, ಎಲ್ಲಾ ಕ್ಷೇತ್ರಗಳಲ್ಲೂ ತಿರುಗಾಡಿ ಪ್ರಚಾರ ಮಾಡಿ ನಮ್ಮ ಗೆಲುವಿಗೆ ಪ್ರಯತ್ನ ಪಟ್ಟಿದ್ದಾರೆ ಎಂದರು..
ಬೈಲಹೊಂಗಲ ಹಾಗೂ ಬೆಳಗಾವಿ ಉತ್ತರದಲ್ಲಿ ಎಲ್ಲಾ ಬಿಜೆಪಿ ನಾಯಕರ ಕಾರ್ಯ ವೈಖರಿಯಿಂದ ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡು ನಾವು ಜಯ ಗಳಿಸಲು ಅನುಕೂಲವಾಗಿದೆ ಎಂದಿದ್ದಾರೆ..
ಇನ್ನು ರಾಮದುರ್ಗದಲ್ಲಿ ಕೂಡಾ ಅತೀ ಹೆಚ್ಚು ಮತ ನಮ್ಮ ಪಕ್ಷಕ್ಕೆ ದೊರಕಿದ್ದು, ಕಾಂಗ್ರೆಸ್ ಹಾಗೂ ನಮ್ಮ ಪಕ್ಷ ಪಡೆದ ಮತಗಳು ಅಂದಾಜಾಗಿ ಸಮನವಾಗಿದ್ದು, ಅಲ್ಲಿ ಸಮಾನವಾದ ಸ್ಪರ್ಧೆ ನಡೆದಿದೆ ಇಂದು ಹೇಳಬಹುದು ಎಂದರು..
ಇನ್ನು ಸವದತ್ತಿ ಕ್ಷೇತ್ರದಲ್ಲಿ ಮಾತ್ರ ಸುಮಾರು 17 ಸಾವಿರ ಮತಗಳ ಹಿನ್ನೆಡೆ ದೊರಕಿದ್ದು, ಅಲ್ಲಿಯೂ ಕೂಡ ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರು ಒಳ್ಳೆಯ ಕಾರ್ಯ ಮಾಡಿದ್ದು, ಉತ್ತಮ ಸಂಖ್ಯೆಯ ಮತ ಪಡೆಯುವಲ್ಲಿ ಸಹಾಯಕವಾಗಿದೆ ಎಂದರು..
ವರದಿ ಪ್ರಕಾಶ ಬಸಪ್ಪ ಕುರಗುಂದ..