ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರ ದಿಟ್ಟ ನಡೆ..
ಎಲ್ ಯ್ಶಾಂಡ ಟಿ ಕಂಪನಿಗೆ 21 ಕೋಟಿ ರೂ,ದಂಡದ ನೋಟಿಸ್ ಕಳಿಸಿದ ಪಾಲಿಕೆ ಆಯುಕ್ತರು…
ಬೆಳಗಾವಿ : ಬೆಳಗಾವಿ ನಗರಕ್ಕೆ ನೀರು ಸರಬರಾಜು ಹಾಗೂ ವಿವಿಧ ನಾಗರಿಕ ಸೇವೆಗಳ ಗುತ್ತಿಗೆ ಪಡೆದುಕೊಂಡ ಖಾಸಗಿ ಕಂಪನಿಯಾದ ಎಲ್ ಯಾಂಡ ಟಿ ಕಂಪನಿಯು ತನ್ನ ಬೇಜವಾಬ್ದಾರಿಯ ಕೆಲಸದಿಂದ, ಬಹಳ ದಿನಗಳಿಂದ ನಗರವಾಸಿಗಳ ಹಾಗೂ ಸಾಮಾಜಿಕ ಹೋರಾಟಗಾರರ ಕೆಂಗಣ್ಣಿಗೆ ತುತ್ತಾಗಿತ್ತು..
ಈ ಹಿಂದೆ ಕೆಲ ರಾಜಕಾರಿಣಿ ಹಾಗೂ ಪ್ರಭಾವಿಗಳ ಬೆಂಬಲದಿಂದ ಯಾರಿಗೂ ಹೆದರದೆ ಮುನ್ನುಗ್ಗುತ್ತಿತ್ತು, ಆದರೆ ಸಮಯ ಒಂದೇ ತರ ಇರೋದಿಲ್ಲ ಎನ್ನುವುದಕ್ಕೆ, ಈಗ ಪಾಲಿಕೆ ಆಯುಕ್ತರಾದ ಅಶೋಕ್ ದುಡಗುಂಟಿ ಅವರು ನೀಡಿದ ದಂಡದ ನೋಟೀಸ್ ಸಾಕ್ಷಿಯಾಗಿದೆ…

ನಿಗದಿತ ಅವಧಿಯಲ್ಲಿ ಗುರಿಸಾಧನೆ ಮಾಡಿಲ್ಲ, ಕಳಪೆ ಗುಣಮಟ್ಟದ ಕಾಮಗಾರಿ ಮಾಡಲಾಗಿದೆ, ಸ್ಮಾರ್ಟ ಸಿಟಿ ಅವರ ಮಾಡಿದ ಕಾರ್ಯವನ್ನು ವಿರೂಪಗೊಳಿಸುವದು ಸೇರಿದಂತೆ ಹಲವಾರು ಕಾರ್ಯಗಳಲ್ಲಿ ತನ್ನ ಬೇಜವಾಬ್ದಾರಿ ತೋರಿ ನಗರ ಸೌಂದರ್ಯ ಹಾಳು ಮಾಡಿದ್ದಲ್ಲದೆ, ಜನರ ಆಕ್ರೋಶಕ್ಕೂ ಗುರಿಯಾಗಿತ್ತು.
ಇದೆಲ್ಲ ವಿಷಯವನ್ನು ಆಧಾರವಾಗಿಟ್ಟುಕೊಂಡು, ಪಾಲಿಕೆ ಆಯುಕ್ತರು ಆ ಕಂಪನಿಗೆ ಬರೋಬ್ಬರಿ 21ಕೋಟಿ, 46 ಲಕ್ಷ ರೂಪಾಯಿ ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ..
2021 ರಿಂದ 2025ರ ವರೆಗೆ ಈ ಕಂಪೆನಿ ಟೆಂಡರ್ ಪಡೆದಿದ್ದು, ಇದರಲ್ಲಿ ನೀರು ಪೂರೈಕೆ ಸೇರಿ, ಹಲವಾರು ಕಾಮಗಾರಿಗಳು ಇದ್ದವು, ಈಗಾಗಲೇ ಮೂರು ವರ್ಷಗಳು ಮುಗಿದದ್ದು ತೃಪ್ತಿಕರ ಕೆಲಸ ಆಗಿಲ್ಲ ಎನ್ನುವದು ನಗರವಾಸಿಗಳ ಆರೋಪವಾಗಿದೆ, ಇಂತಹ ಕಳಪೆ ಗುಣಮಟ್ಟದ ಕೆಲಸ ಮಾಡುವ ಕಂಪನಿಗೆ ದಂಡ ವಿಧಿಸುವುದು ಅಲ್ಲದೇ, ಇದಕ್ಕೆ ಉತ್ತರ ನೀಡುವಂತೆ ಕಂಪೆನಿಗೆ ಪತ್ರವನ್ನು ಕೂಡಾ ಬರೆದು ವರದಿ ಕೇಳಿದ್ದಾರೆ..

ಇದೇ ಸಂದರ್ಭದಲ್ಲಿ ಆಯುಕ್ತರು, ಸ್ಮಾರ್ಟ ಸಿಟಿ, ಹಾಗೂ ಪಾಲಿಕೆಯಲ್ಲಿ ಸಮನ್ವಯದ ಕೊರತೆಯಿಲ್ಲ, ನಗರ ಸುಧಾರಣೆಗಾಗಿ ಮತ್ತಷ್ಟು ಹೊಸ ಯೋಜನೆಯೊಂದಿಗೆ ಕೆಲಸ ಮಾಡುತ್ತೇವೆ ಎಂದರು..
ವರದಿ ಪ್ರಕಾಶ ಕುರಗುಂದ..